ಬಾಗಲಕೋಟೆ
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧನೆಗೈದ ಮೂರು ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಸನ್ಮಾನಿಸಿ ಪ್ರಶಸ್ತಿ ಪ್ರಧಾನ ಮಾಡಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ರವಿವಾರ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡ ಪ್ರಶಸ್ತಿ ಪ್ರಧಾನ, ಹಿರಿಯ ಪತ್ರಕರ್ತರಿಗೆ ಸನ್ಮಾ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಿವಗಂತ ಶ್ರೀಶೈಲ ಅಂಗಡಿ ಇವರ ಸ್ಮರಣಾರ್ಥವಾಗಿ ನೀಡಲಾಗುವ ಅತ್ಯುತ್ತಮ ಗ್ರಾಮೀಣ ಪತ್ರಕರ್ತ ಪ್ರಶಸ್ತಿಯನ್ನು ಚಿಮ್ಮಡ ಗ್ರಾಮದ ಇಲಾಹಿ ಜಮಖಂಡಿ, ದಿ.ಶರಣಬಸವರಾಜ ಜಿಗಜಿನ್ನಿ ಇವರ ಸ್ಮರಣಾರ್ಥವಾಗಿ ಕೊಡಮಾಡುವ ಹಿರಿಯ ಪತ್ರಕರ್ತ ಪ್ರಶಸ್ತಿಯನ್ನು ಹುನಗುಂದದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ದರಗಾದ ಹಾಗೂ ದಿ.ರಾಮ ಮನಗೂಳಿ ಇವರ ಸ್ಮರಣಾರ್ಥವಾಗಿ ನೀಡುವ ಉತ್ತಮ ವರದಿಗಾರ ಪ್ರಶಸ್ತಿಯನ್ನು ಅಶೋಕ ಶೆಟ್ಟರ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
*ಹಿರಿಯ ಪತ್ರಕರ್ತರಿಗೆ ಸನ್ಮಾನ*
——————————–
ಜಿಲ್ಲೆಯ ೮ ತಾಲೂಕಿನ ಹಿರಿಯ ಪತ್ರಕರ್ತರಾದ ಇಳಕಲ್ ತಾಲೂಕಿನ ನಾಗೇಶ ನಿಲೂಗಲ್ಲ, ಹುನಗುಂದದ ಚನ್ನಬಸವರಾಜ ನಾವಿ, ಬಾಗಲಕೋಟೆಯ ಪ್ರಕಾಶ ಜಿಗಜಿನ್ನಿ, ಬಾದಾಮಿ ತಾಲೂಕಿನ ಭೀಮಸೇನ ದೇಸಾಯಿ, ಬೀಳಗಿಯ ಚನ್ನಬಸವರಾಜ ಚಲವಾದಿ, ಮುದೋಳ ತಾಲೂಕಿನ ರತ್ನಾಕರ ಶೆಟ್ಟಿ, ರಬಕವಿ ಬನಹಟ್ಟಿ ತಾಲೂಕಿನ ಜಯಂತ ಕಾಡದೇವರ, ಜಮಖಂಡಿ ತಾಲೂಕಿನ ವಿಜಯ ಬಿರಾದಾರ ಅವರನ್ನು ಸನ್ಮಾನಿಸಿಲಾಯಿತು.
ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ*
—————————–
೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.೮೫ಕ್ಕೂ ಹೆಚ್ಚು ಅಂಕ ಪಡೆದ ಜಿಲ್ಲೆಯ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸಲಾಯಿತು. ಆಲಿಯಾಜಬೀನ ಕೊಡಗಲಿ, ನಿವೇದಿತಾ ಹಿರೇಮಠ, ಗೌರಮ್ಮ ಶಂಕರಪ್ಪ ಮಂಡಿ (ಎಸ್.ಎಸ್.ಎಲ್.ಸಿ), ಸಾಮ್ಯ ಉಮೇಶ ಭೀಕ್ಷಾಮತಿಮಠ, ಆಯುಷ್ ಜಯರಾಮ ಶೇಟ್ಟಿ, ವೆಂಕಟೇಶ ಮಹೇಶ ಮನ್ನಯ್ಯನಮಠ, ಪ್ರೀತಿ ಆನಂದ ದಲಭಂಜನ, ಶಿವು ಹಿರೇಮಠ, ತೇಜಸ್ ಗೋವಿಂದಪೂರಮಠ ಹಾಗೂ ತೃಪ್ತಿ ಪ್ರಕಾಶ ಜಿಗಜಿನ್ನಿ ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದವರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್.ತಿಮ್ಮಾಪೂರ,ವಿಧಾನ ಪರಿಷತ್ ಸದಸ್ಯ ಪಿ.ಹೆಚ್,ಪೂಜಾರ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ, ರಾಜ್ಯ ಕಾನಿಪ ಸಂಘದ ಅಧ್ಯಕ್ಷ ಶಿವಾನಂದ ತಗಡೂರ, ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಕಸ್ತೂರಿ ಪಾಟೀಲ, ಕಾನಿಪ ಸಂಘದ ಜಿಲ್ಲಾಧ್ಯಕ್ಷ ಆನಂದ ದಲಭಂಜನ, ಕಾನಿಪದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಮಹೇಶ ಅಂಗಡಿ, ರಾಜ್ಯ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಗುಳೇಗುಡ್ಡ, ಕಾನಿಪದ ಪ್ರಧಾನ ಕಾರ್ಯದರ್ಶಿ ಶಂಕರ ಕಲ್ಯಾಣಿ ಸೇರಿದಂತೆ ಇತರರು ಇದ್ದರು.