ಬಾಗಲಕೋಟೆ
ಯುವ ಸಮಯದಾಯ ನಾಡು ನುಡಿಯ ಗೌರವ ಬೆಳೆಸಿಕೊಳ್ಳುವುದರ ಜತೆ ಮಾತೃಭಾ?ೆಯ ಬಳಕೆಗೆ ಮುಂದಾದರೆ ಮಾತ್ರ ಪ್ರಜ್ಞಾವಂತ ಸಮಾಜ ನಿರ್ಮಾಣವಾಗುತ್ತದೆ ಎಂದು ಹಿರಿಯ ಸಾಹಿತಿ ಮಲ್ಲಿಕಾರ್ಜುನ ಯಾಳವಾರ ಹೇಳಿದರು.
ನಗರದ ಬವಿವ ಸಂಘದ ಬಸವೇಶ್ವರ ಕಲಾ ಕಾಲೇಜ್‌ನಲ್ಲಿ ಕರ್ನಾಟಕ ಸಾಹಿತ್ಯ ಸಂಘ, ಕನ್ನಡ ವಿಭಾಗ, ಕನ್ನಡ ಸ್ನಾತಕೋತ್ತರ ವಿಭಾಗ ಹಾಗೂ ಸಾಂಸ್ಕೃತಿಕ ಸಮಿತಿ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡವು ತನ್ನದೆ ಆದ ಇತಿಹಾಸ ಮತ್ತು ಪರಂಪರೆ ಹೊಂದಿರುವ ಭಾಷೆಯಾಗಿದ್ದು ಬೇರೆ ದೇಶದವರ ಗ್ರಂಥದಲ್ಲಿಯೂ ಇರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಭಾಷೆಯು ಭಾವನೆಗಳ ತಳಹದಿಯ ಮೇಲೆ ಹುಟ್ಟಿದ್ದು ಮಾತೃಭಾಷೆ ಮತ್ತು ಕರ್ನಾಟಕ ಏಕೀಕರಣದ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕು. ಕರ್ನಾಟಕದಲ್ಲಿ ಭಾ?Éಯ ಅಭಿವೃದ್ಧಿಯ ಪಥವೇ ಅವಿಸ್ಮರಣೀಯ. ನಾಡಿನ ಸೀಮೆಯನ್ನು ಕನ್ನಡದ ಕವಿಗಳು ಕವಿತೆಗಳ ಮೂಲಕ ಸೂಚಿಸಿದ್ದಾರೆ. ಭಾಷೆ, ಶ್ರದ್ಧೆ, ಪ್ರೀತಿಯು ನಮ್ಮ ಸಂಸ್ಕೃತಿಯಾಗಿದ್ದು ಅದನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಆರ್.ಮುಗನೂರಮಠ ಮಾತನಾಡಿದರು. ಡಾ.ಕೆ.ವಿ.ಮಠ, ಡಾ.ಎಸ್.ಡಿ.ಕೆಂಗಲಗುತ್ತಿ, ಡಾ.ಎ.ಯು.ರಾಠೋಡ, ಡಾ.ಬಸವರಾಜ ಖೋತ, ಡಾ.ವಿರುಪಾಕ್ಷಿ.ಎನ್.ಬಿ., ಇತರರು ಇದ್ದರು.