ನಿಮ್ಮ ಸುದ್ದಿ ಬಾಗಲಕೋಟೆ
ಭಾರತೀಯ ಅಂಚೆ ಇಲಾಖೆಯಿಂದ ಜೂ.೨೧ರಂದು ಆಚರಿಸಲ್ಪಡುವ ಯೋಗ ದಿನವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದು ಅಂದು ಬಾಗಲಕೋಟೆ ಹಾಗೂ ಜಮಖಂಡಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಸ್ವೀಕೃತವಾಗುವ ಹಾಗೂ ಬಟವಡೆಯಾಗುವ ಎಲ್ಲ ಅಂಚೆ ಪತ್ರಗಳ ಮೇಲೆ ಅಂತಾರಾಷ್ಟಿಯ ಯೋಗ ದಿನದ ವಿಶೇಷ ಚಿತ್ರಾತ್ಮಕ ಮುದ್ರೆ ಒತ್ತು ಮೂಲಕ ಸಾರ್ವಜನಿಕರಲ್ಲಿ ಯೋಗದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜತೆಗೆ ಪ್ರಧಾನ ಅಂಚೆ ಕಚೇರಿ ಹಾಗೂ ವಿಭಾಗೀಯ ಕಚೇರಿ ಸಿಬ್ಬಂದಿಗೆ ಸಹಾಯಕ ಅಂಚೆ ಅÃಕ್ಷಕ ಸಿ.ಜಿ.ಕಾಂಬಳೆ ಯೋಗ ತರಬೇತಿ ನೀಡುತ್ತಿದ್ದಾರೆ ಎಂದು ಅಂಚೆ ಅಧೀಕ್ಷಕರು ರಕಟಣೆಯಲ್ಲಿ ತಿಳಿಸಿದ್ದಾರೆ.