ದೇವರಾಜ್ ಅರಸು ರವರ ಹಾಗೂ ರಾಯಣ್ಣನವರ ಹೆಸರು ಹಾಗೂ ಭಾವಚಿತ್ರ ಬಳಕೆ ಮಾಡಿಕೊಳ್ಳಲು ಈಶ್ವರಪ್ಪನವರಿಗೆ ಯಾವ ನೈತಿಕತೆ ಇದೆ?.
ಎಂದು ಕಾಂಗ್ರೆಸ್ ಮುಖಂಡ ರಮೇಶ ಬದ್ನೂರ್ ಪ್ರಶ್ನಿಸಿದ್ದಾರೆ.
ಈಶ್ವರಪ್ಪನವರಿಗೆ ಬಿಜೆಪಿಯವರನ್ನು ಬ್ಲ್ಯಾಕ್ ಮೇಲ್ ಮಾಡಲು ದೇವರಾಜ್ ಅರಸು ಒಬ್ಬರು ಬಾಕಿ ಉಳಿದಿದ್ದರು.
ಈ ಹಿಂದೆ “ರಾಯಣ್ಣ ಬ್ರೀಗೇಡ್” ಮಾಡಿ ಅದರಲ್ಲಿ ಅಮಾಯಕರನ್ನು ಬಳಕೆ ಮಾಡಿಕೊಂಡು ಅವರನ್ನು ನಡು ಬೀದಿಯಲ್ಲಿ ಬಿಟ್ಟು ಅಮಿತ್ ಷಾ ಮೂಲಕ ಮತ್ತೆ ರಾಜಕೀಯ ನೆಲೆ ಕಂಡುಕೊಂಡು ಸ್ವಾತಂತ್ರ್ಯದ ಹೋರಾಟಗಾರ ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ವೀರ ಸೇನಾನಿ ಸಂಗೊಳ್ಳಿ ರಾಯಣ್ಣನವರನ್ನು ಅವಮಾನಿಸಿದ್ದು ಸಾಲದೆ
ಈಗ ದೇವರಾಜ್ ಅರಸು ರವರ ಭಾವಚಿತ್ರ ಬಳಕೆ ಮಾಡಿಕೊಂಡು ಹಿಂದುಳಿದ ವರ್ಗಗಗಳ ನಾಯಕನ ಪಟ್ಟ ಕಟ್ಟಿಕೊಳ್ಳಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ.
ದೇವರಾಜ್ ಅರಸು ಒಬ್ಬ ಅಪ್ಪಟ ಪ್ರಾಮಾಣಿಕ, ಜ್ಯಾತ್ಯಾತೀತ, ಸಂವಿಧಾನದ ಆಶಯಗಳನ್ನು ಯಥಾವತ್ ಅನುಷ್ಠಾನಕ್ಕೆ ತನ್ನ ಜೀವನವನ್ನೇ ಮಾಡಿಪಾಗಿ ಇಟ್ಟಿದ್ದ ಹಿಂದುಳಿದ ಸಮುದಾಯಗಳ ಪ್ರಶ್ನಾತೀತ ನಾಯಕರು.
ಈಶ್ವರಪ್ಪನರದ್ದು ಸಂವಿಧಾನದ ವಿರೋಧಿ ಹಿಂದುತ್ವದ ಕೋಮುವಾದಿ ಸಿದ್ಧಾಂತ ಹಾಗಾದರೆ ದೇವರಾಜ್ ಅರಸು ಹಾಗೂ ಈಶ್ವರಪ್ಪನವರ ಸಿದ್ಧಾಂತಕ್ಕೂ ಎತ್ತನಿಂದೆತ್ತ ಸಂಬಂಧ?.
ಈಶ್ವರಪ್ಪನವರೇ ನಿಮ್ಮ ಸ್ವಾರ್ಥ ರಾಜಕೀಯದ ಮರುಜನ್ಮ ಕಟ್ಟಿಕೊಳ್ಳಲು ರಾಷ್ಟ್ರ ನಾಯಕರಾದ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಹಾಗೂ ಹಿಂದುಳಿದ ವರ್ಗಗಳ ನಾಯಕ ದೇವರಾಜ್ ಅರಸು ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸಬೇಕು.
ನಿಮಗೆ ಶಿವಮೋಗ್ಗ ವಿಧಾನಸಭೆಗೆ ಸ್ಪರ್ಧಿಸಲು, ನಿಮ್ಮ ಮಗನಿಗೆ ಹಾವೇರಿ ಲೋಕಸಭೆಗೆ ಸ್ಪರ್ಧಿಸಲು ಬಿಜೆಪಿ ಅವಕಾಶ ಕಲ್ಪಿಸಲಿಲ್ಲಾ ಎಂಬ ಕಾರಣಕ್ಕಾಗಿ ಮತ್ತೇ ರಾಜಕೀಯ ಮರುಜನ್ಮ ಕಟ್ಟಿಕೊಳ್ಳಲು ನಿಮ್ಮ ಮಗನಿಗೆ ರಾಜಕೀಯ ಭವಿಷ್ಯ ಕಟ್ಟಲು ಈಗ ಈ ಹೊಸ ನಾಟಕ ಪ್ರಾರಂಭಿಸಿದ್ದೀರಾ?.
ಬುದ್ಧ, ಬಸವ, ಕನಕದಾಸರ, ಅಂಬೇಡ್ಕರ್, ಜ್ಯೋತಿಬಾ ಫುಲೆ ದಂಪತಿ, ಪೇರಿಯಾರ್ ಇವರೆಲ್ಲರ ಸಿದ್ಧಾಂತಕ್ಕೆ ವಿರುದ್ಧವಾಗಿರುವ ರಾಜಕೀಯ ಪಕ್ಷದಲ್ಲಿ ನಿಮ್ಮ ರಾಜಕೀಯ ನೆಲೆ ಕಂಡುಕೊಳ್ಳಲು ಇವರೆಲ್ಲರ ಭಾವ ಚಿತ್ರಗಳನ್ನು ಹಾಗೂ ಹೆಸರನ್ನು ಬಳಕೆ ಮಾಡಿಕೊಳ್ಳಲು ನಿಮಗೆ ಅಧಿಕಾರ ಕೊಟ್ಟವರು ಯಾರು?. ಎಂದು ಪ್ರಶ್ನಿಸಿದ್ದಾರೆ.