This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಬೆಳಕಾಯಿತು ಬಾಗಲಕೋಟೆಗೆ ಶತಕದ ಸಂಭ್ರಮ

ನಿಮ್ಮ ಸುದ್ದಿ ಬಾಗಲಕೋಟೆ

ನಗರದ ಸಾಹಿತಿ ಡಾ.ಪ್ರಕಾಶ ಖಾಡೆ ಸಂಯೋಜಿಸಿರುವ ಫೇಸ್‌ಬುಕ್ ಲೈವ್ ಸರಣಿ ಉಪನ್ಯಾಸ ಮಾಲಿಕೆ ಬೆಳಕಾಯಿತು ಬಾಗಲಕೋಟೆ ಕಾರ್ಯಕ್ರಮ ನೂರು ಉಪನ್ಯಾಸ ಪೂರೈಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವಿಶಿಷ್ಟ ಕ್ರಾಂತಿ ಮಾಡಿದೆ.

ಕೊರೊನಾ ಸಂಕಷ್ಟ ಹಾಗೂ ಲಾಕ್‌ಡೌನ್ ಆದ ಕಾಲದಲ್ಲಿ ಸಾಮಾಜಿಕ ಜಾಲತಾಣ ಬಳಸಿಕೊಂಡು ಅವಿಭಜಿತ ವಿಜಯಪುರ-ಬಾಗಲಕೋಟೆ ಜಿಲ್ಲೆಗಳಲ್ಲಿ ಆಗಿಹೋದ ಸಾಧಕರ ಕುರಿತ ಈ ಸರಣಿ ಮಾಲಿಕೆ ವಿಶ್ವದೆಲ್ಲೆಡೆ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ.

ಕಳೆದ ವರ್ಷ ಜು.೩ರಂದು ಆರಂಭವಾಗಿ ಇದೇ ಜೂ.೩ರಂದು ನೂರು ಉಪನ್ಯಾಸ ಪೂರೈಸುವ ಮೂಲಕ ನಿರಂತರವಾಗಿ ಭಾನುವಾರ ಹಾಗೂ ಗುರುವಾರ ಬೆಳಗ್ಗೆ ೮ಕ್ಕೆ ಪ್ರಸಾರವಾಗುತ್ತಿದೆ. ಸದಾ ಹೊಸತನ್ನು ಸೃಷ್ಟಿಸುವ ಡಾ.ಪ್ರಕಾಶ ಖಾಡೆ ಅವರಿಗೆ ಇಂಥದೊಂದು ಪರಿಕಲ್ಪನೆ ರೂಪಿಸಿಕೊಟ್ಟವರು ಸಾಹಿತಿ ಡಾ.ರಾಜಶೇಖರ ಮಠಪತಿ. ನಿರಂತರ ಮಾರ್ಗದರ್ಶನ ನೀಡಿದವರು ಸಾಹಿತಿ ಪ್ರೊ.ಬಿ.ಆರ್.ಪೊಲೀಸಪಾಟೀಲರು.

ಖ್ಯಾತ ಅನುಭಾವಿ ಕವಿ ಮಧುರಚೆನ್ನರು ಉಸಿರಿದ್ದ ಬೆಳಕಾಯಿತು ಬಾಗಲಕೋಟೆ ಎಂಬ ಉಕ್ತಿಯನ್ನೇ ಶಿರ್ಷೀಕೆಯಾಗಿಟ್ಟುಕೊಂಡು ವಿಜಯಪುರ-ಬಾಗಲಕೋಟೆಯನ್ನು ಕಾರ್ಯಕ್ಷೇತ್ರ ಮಾಡಿಕೊಂಡ ಸಾಧಕರನ್ನು ಪರಿಚಯಿಸುವ ಕಾರ್ಯಕ್ರಮ ಇದಾಗಿದೆ. ಸಾಹಿತ್ಯ, ಸಂಶೋಧನೆ, ಕಲೆ, ವಿಜ್ಞಾನ, ಕೃಷಿ, ರಂಗಭೂಮಿ, ಕ್ರೀಡೆ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಧಾರ್ಮಿಕ, ಕರ್ನಾಟಕ ಏಕೀಕರಣ ಮತ್ತು ಸ್ವಾತಂತ್ರö್ಯ ಹೋರಾಟ ಹೀಗೆ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಜಗಕೆ ಬೆಳಕಾದ ಸಾಧಕರ ಉಪನ್ಯಾಸ ನೀಡಿ ಪರಿಚಯಿಸಿದ್ದಾರೆ.

ಜನರಲ್ ಜಿ.ಜಿ.ಬೇವೂರ, ಮೊಹರೆ ಹನಮಂತರಾಯರು, ಅಮೀರಬಾಯಿ ಕರ್ನಾಟಕಿ, ಬೀಳೂರು ಗುರುಬಸವರು, ಹಾನಗಲ್ಲ ಕುಮಾರಸ್ವಾಮಿಗಳು, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ಸನಾದಿ ಅಪ್ಪಣ್ಣ, ಬಂಥನಾಳ ಶಿವಯೋಗಿಗಳು, ಇಳಕಲ್ ಮಹಾಂತರು, ತೋಂಟದ ಸಿದ್ದಲಿಂಗಶ್ರೀ, ಕಂದಗಲ್ಲ ಹನಮಂತರಾಯರು, ಪಿ,ಬಿ.ದುತ್ತರಗಿ, ಗಣಿತಜ್ಞ ಭಾಸ್ಕರಾಚಾರ್ಯ, ಕೃಷಿತಜ್ಞ ಡಾ.ಎನ್.ಪಿ.ಪಾಟೀಲ, ನೇತ್ರ ತಜ್ಞ ಎಂ.ಸಿ.ಮೋದಿ, ಗುರುದೇವ ರಾನಡೆ, ಪ್ರಸನ್ನ ವೆಂಕಟದಾಸರು, ಮಧುರಚೆನ್ನ ಹೀಗೆ ಮೊದಲಾದ ನೂರು ಸಾಧಕರನ್ನು ಈ ಮಾಲಿಕೆಯಲ್ಲಿ ಪರಿಚಯಿಸಲಾಗಿದೆ.

ನಾಡಿನ ವಿದ್ವಾಂಸರಾದ ಪ್ರೊ.ಮಲ್ಲೇಪುರಂ ವೆಂಕಟೇಶ, ಡಾ.ಪ್ರಜ್ಞಾ ಮತ್ತಿಹಳ್ಳಿ, ಡಾ.ವೀರಣ್ಣ ರಾಜೂರ, ಪ್ರಾ.ಚಂದ್ರಶೇಖರ ವಸ್ತçದ, ಡಾ.ವೈ.ಎಂ.ಯಾಕೊಳ್ಳಿ, ಡಾ.ಬಸು ಬೇವಿನಗಿಡದ, ಡಾ.ಈಶ್ವರ ಮಂಟೂರ, ಸಿದ್ದರಾಮ ಮನಹಳ್ಳಿ, ಪ್ರಾ.ಎ.ಎಸ್.ಪಾವಟೆ, ಡಾ.ಚನ್ನಪ್ಪ ಕಟ್ಟಿ, ಡಾ.ಎಚ್.ಎಸ್.ಸತ್ಯನಾರಾಯಣ, ಡಾ.ಶಿವಾನಂದ ಕುಬಸದ, ಡಾ.ಅಶೋಕ ನರೋಡೆ, ಗೀತಾ ದಾನಶೆಟ್ಟಿ, ಡಾ.ಶಾರದಾ ಮುಳ್ಳೂರ, ಜಯಶ್ರಿ ಭಂಡಾರಿ, ಸೇರಿದಂತೆ ನೂರು ಜನ ಉಪನ್ಯಾಸಕರು ಈ ಸರಣಿಯಲ್ಲಿ ಉಪನ್ಯಾಸ ನೀಡಿ ಸಾರ್ಥಕತೆ ಮೆರೆದಿದ್ದಾರೆ.

ಸಾಮಾಜಿಕ ಜಾಲತಾಣ ಜನಸಾಮಾನ್ಯರ ವಿಶ್ವವಿದ್ಯಾಲಯವಿದ್ದಂತೆ. ಕೊರೊನಾ ಕಾಲದಲ್ಲಿ ಮನೆಯಲ್ಲೆ ಉಳದಿರುವ ಹಿರಿಯರಿಗೆ, ಯುವಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಎಲ್ಲ ಬಗೆಯ ಕೇಳುಗರಿಗೆ ಈ ಸರಣಿ ಆರಂಭಿಸಲಾಯಿತು. ವಿಶ್ವದೆಲ್ಲೆಡೆ ನೆಲೆಸಿರುವ ಕನ್ನಡಿಗರು ಇದನ್ನು ಮೆಚ್ಚಿದ್ದಾರೆ. ಇದಕ್ಕೆ ಪುಸ್ತಕ ರೂಪು ನೀಡುವ ಯೋಚನೆಯಿದೆ.
-ಡಾ.ಪ್ರಕಾಶ ಖಾಡೆ, ಸಂಯೋಜಕರು, ಬೆಳಕಾಯಿತು ಬಾಗಲಕೋಟೆ.

ಬಾಗಲಕೋಟೆಯ ನೆಲದ ಚೈತನ್ಯವೇ ಅಂಥಹದು, ಎಷ್ಟೊಂದು ಹಿರಿಯ ಚೈತನ್ಯಗಳನ್ನು ಒಗ್ಗೂಡಿಸಿ ಮುಖ್ಯವಾಹಿನಿಗೆ ತಂದು ನಿಲ್ಲಿಸಿದ್ದಾರೆ. ಡಾ.ಖಾಡೆಯವರ ಕ್ರಿಯಾಶೀಲತೆಗೆ ಇದೊಂದು ಮೈಲುಗಲ್ಲು.
-ರೇಖಾ ಕಾಖಂಡಕಿ, ಸಾಹಿತಿ

 

";