This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

National NewsState News

ಮೇ 23 ರಂದು ಬೆಂಗಳೂರು ನಗರದಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ

ಮೇ 23 ರಂದು ಬೆಂಗಳೂರು ನಗರದಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ

ಬೆಂಗಳೂರು: ಬುದ್ಧ ಪೂರ್ಣಿಮಾ ಹಿನ್ನೆಲೆ ಮೇ 23 ರಂದು ಬೆಂಗಳೂರು ನಗರದಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ ಮಾಡದಲಾಗಿದೆ. ಈ ಬಗ್ಗೆ ಬಿಬಿಎಂಪಿ ಆದೇಶ ಹೊರಡಿಸಿದೆ.

ದಿ ಹುಬ್ಬಳ್ಳಿ ಬುದ್ಧಿಸ್ಟ್‌ ಅಸೋಸಿಯೇಷನ್‌ ವತಿಯಿಂದ ಮೇ 23ರಂದು ಭಗವಾನ್‌ ಬುದ್ಧ ಜಯಂತಿಯನ್ನು ಇಲ್ಲಿನ ಗಣೇಶಪೇಟೆಯ ಬುದ್ಧ ವಿಹಾರದಲ್ಲಿಆಯೋಜಿಸಲಾಗಿದೆ. ಆ ದಿನ ಬೆಳಗ್ಗೆ 8.30ಕ್ಕೆ ವರ್ಲ್ಡ್ ಬುದ್ದಿಸ್ಟ್‌ ಧ್ವಜಾರೋಹಣ, ಮಹಾಬುದ್ಧ ಪೂಜೆ, ನಂತರ ಬುದ್ಧ, ಧಮ್ಮ, ಸಂಘ ಪೂಜೆ ಹಾಗೂ ಬೌದ್ಧ ಮಂತ್ರ ಪಠಣೆ ನಡೆಯಲಿದೆ. ಬೆಳಗ್ಗೆ 11ಕ್ಕೆ ಸಾರ್ವಜನಿಕ ಸಭೆ ನಡೆಯಲಿದೆ.

ಶಾಸಕ ಪ್ರಸಾದ ಅಬ್ಬಯ್ಯ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿವೃತ್ತ ನಿರ್ದೇಶಕ ಸದಾಶಿವ ಮರ್ಜಿ, ಸಂಸ್ಥೆಯ ಕಾರ್ಯದರ್ಶಿ ತಮ್ಮಣ್ಣ ಮಾದರ, ಚೆನ್ನೈ ಹೈಕೋರ್ಟ್‌ ವಕೀಲರಾದ ಎ.ಗೌವ್‌ಧಮನ್‌, ಧಾರವಾಡ ಎಲ್‌ಐಸಿ ಶಾಖೆಯ ಮ್ಯಾನೇಜರ್‌ ಪರಮಪ್ಪ ಎಸ್‌. ಮಳಗಿ, ಪಾಲಿಕೆ ಸದಸ್ಯ ದೊರೆರಾಜ್‌ ಮಣಿಕುಂಟ್ಲ, ಮಾಜಿ ಸದಸ್ಯೆ ಸುಧಾ ಮಣಿಕುಂಟ್ಲ ಭಾಗವಹಿಸುವರು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಬೇಕು ಪ್ರಕಟಣೆ ತಿಳಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಿಬಿಎಂಪಿ, ಗುರುವಾರದಂದು “ಬುದ್ಧ ಪೂರ್ಣಿಮಾ” ಆಚರಿಸಲಾಗುತ್ತಿದೆ. ಈ ಪವಿತ್ರ ದಿನದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಮಾಡಬಾರದು. ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಜಂಟಿ ನಿರ್ದೇಶಕರು ಸೂಚನೆ ನೀಡಿದರು.

Nimma Suddi
";