ಬಾಗಲಕೋಟೆ
ಲೋಕಸಭಾ ಚುನಾವಣೆ-2024 ಸಂದರ್ಭದಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಪ್ರಚಾರ ಕಾರ್ಯಕ್ಕೆ ಬಳಸಿಕೈಗೊಳ್ಳುವದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟದ ಅಧ್ಯಕ್ಷೆ ಜಾನಕಿ ಕೆ.ಎಂ ತಿಳಿಸಿದ್ದಾರೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಹ ಚುನಾವಣಾ ಪ್ರಚಾರ ಹಾಗೂ ಇನ್ನೀತರ ಕಾರ್ಯಗಳಿಗೆ ಯಾವುದೇ ಪಕ್ಷಗಳು 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.
ಮಕ್ಕಳ ಹಕ್ಕುಗಳ ಒಡಂಬಡಿಕೆ ಹಾಗೂ ಮಕ್ಕಳ ನ್ಯಾಯ 2015ರ ಅನ್ವಯ 18 ವರ್ಷದೊಳಗಿನ ಎಲ್ಲ ಮಕ್ಕಳು ಎಂದು ಪರಿಗಣಿಸಲಾಗಿದೆ.
ಕಲಂ 32 ಮತ್ತು 36 ರಲ್ಲಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಷಣಕ್ಕೆ ಅಪಾಯಕಾರಿಯಾದ ಕ್ಷೇತ್ರಗಳಲ್ಲಿ ಮಕ್ಕಳು ಕಾರ್ಯನಿರ್ವಹಿಸದಂತೆ ಹಾಗೈ ಮಕ್ಕಳ ಬೆಳವಣಿಗೆಗೆ ತೊಡಕನ್ನುಂಟು ಮಾಡುವ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಸೂಕ್ತ ಕ್ರಮಗಳನ್ನು ನಿರ್ದೇಶಿಸಿದೆ.
ಚುನಾವಣಾ ಕಾರ್ಯಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದು ನಿಷೇಧಿಸಿದ್ದು, ಬಳಸಿಕೊಂಡಲ್ಲಿ ಕಾನೂನನ್ವಯ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
*ಸಾಹಸಮಯ ಬೇಸಿಗೆ ಶಿಬಿರಕ್ಕೆ ನೊಂದಣಿ*
—————————–
ಬಾಗಲಕೋಟೆ : ಎಪ್ರೀಲ್ 07 (ಕರ್ನಾಟಕ ವಾರ್ತೆ) : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ 10 ರಿಂದ 17 ವರ್ಷ ವಯೋಮಿತಿಯ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸಾಹಸಮಯ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.
10 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಎಪ್ರೀಲ್ 16 ರಿಂದ 20 ವರೆಗೆ, 23 ರಿಂದ 17ವರೆಗೆ ಹಾಗೂ 29 ರಿಂದ ಮೇ 3 ವರೆಗೆ ಬೆಂಗಳೂರಿನ ಜಕ್ಕೂರ ಏರೋಡ್ರೋಮ್‍ನಲ್ಲಿ ವಾಯು ಸಾಹಸ ಕ್ರೀಡಾ ಶಿಬಿರ (ಶುಲ್ಕ 10 ಸಾವಿರ), 10 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಮೇ 5 ರಿಂದ 23 ವರೆಗೆ ಬಾದಾಮಿಯಲ್ಲಿ ಶಿಲಾರೋಹಣ ಶಿಬಿರ (ಶುಲ್ಕ 6 ಸಾವಿರ), 12 ರಿಂದ 15 ವರ್ಷದ ಮಕ್ಕಳಿಗೆ ಎಪ್ರೀಲ್ 18 ರಿಂದ 22, 15 ರಿಂದ 17 ವರ್ಷದ ಮಕ್ಕಳಿಗೆ 25 ರಿಂದ 29, ಮೇ 2 ರಿಂದ 6, ಮೇ 9 ರಿಂದ 13 ವರೆಗೆ ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ಗಣೇಶಗುಡಿಯಲ್ಲಿ ರಿವರ್ ರ್ಯಾಪಿಂಗ್ ಮತ್ತು ಕಯಾಶಿಂಗ್ ಕೋರ್ಸ (ಶುಲ್ಕ 7500 ರೂ.).
10 ರಿಂದ 13 ವರ್ಷ ಮಕ್ಕಳಿಗೆ ಎಪ್ರೀಲ್ 25 ರಿಂದ 29 ವರೆಗೆ 14 ರಿಂದ 16 ವರ್ಷದ ಮಕ್ಕಳಿಗೆ ಮೇ 1 ರಿಂದ 5, 6 ರಿಂದ 10 ವರೆಗೆ ಕೊಡಗು ಜಿಲ್ಲೆಯ ಬರ್ಪೊಳೆ ಸಾಹಸ ಮತ್ತು ಪ್ರಕೃತಿ ಅಧ್ಯಯನ ಶಿಬಿರ (ಶುಲ್ಕ 6 ಸಾವಿರ ರೂ.), 10 ರಿಂದ 14 ವರ್ಷದವರಿಗೆ 16 ರಿಂದ 20 ವರೆಗೆ, 22 ರಿಂದ 26 ವರೆಗೆ, 15 ರಿಂದ 17 ವರ್ಷದವರಿಗೆ ಎಪ್ರೀಲ್ 28 ರಿಂದ ಮೇ 2 ವರೆಗೆ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರದಲ್ಲಿ ಜಲಸಾಹಸ ಕ್ರೀಡಾ ಶಿಬಿರ (ಶುಲ್ಕ 6 ಸಾವಿರ ರೂ.) ಹಾಗೂ 15 ರಿಂದ 17 ವರ್ಷದವರಿಗೆ ಮೇ 16 ರಿಂದ 20 ವರೆಗೆ ಕಾರವಾರದಲ್ಲಿ ವಿಂಡ್ ಸರ್ಫಿಂಗ್ & ಸೈಲಿಂಗ್ ಶಿಬಿರ (ಶುಲ್ಕ 7500 ರೂ.)
ಸದರಿ ಶಿಲಾರೋಹಣ ಶಿಬಿರಗಳಲ್ಲಿ ಭಾಗವಹಿಸುವ ಆಸಕ್ತ ಶಾಲಾ, ಕಾಲೇಜು ವಿದ್ಯಾರ್ಥಿಗಳು www.gethnaa.org ಆನ್‍ಲೈನ್ ನಲ್ಲಿ ನೋಂದಣಿ ಮಾಡಿಕೊಂಡು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಾಯು ಸಾಹಸ ಕ್ರೀಡೆ & ಶಿಲಾರೋಹಣ ಶಿಬಿರಕ್ಕೆ ರಾಜೇಂದ್ರ ಹಾಸಬಾವಿ (9448038220), ರಿವರ್ ರ್ಯಾಪಿಂಗ್ & ಕಯಾಶಿಂಗ್ ಕೋರ್ಸಗೆ ದಿನೇಶ ಸುವರ್ಣ (9731362617), ಸಾಹಸ & ಪ್ರಕೃತಿ ಅಧ್ಯಯನ ಶಿಬಿರಕ್ಕೆ ಮುನಿರಾಜು ಆರ್ (9480383764), ಜಲ ಸಾಹಸ ಕ್ರೀಡಾ ಶಿಬಿರಕ್ಕೆ ಶಬ್ಬೀರ್ (8971553337) ಮತ್ತು ವಿಂಡ್ ಸರ್ಫಿಂಗ್ & ಸೈಲಿಂಗ್ ಶಿಬಿರಕ್ಕೆ ಪ್ರಕಾಶ ಹರಿಕಂತ್ರ (7760365079) ಸಂಚಾಲಕರನ್ನು ಸಂಪರ್ಕಿಸುವಂತೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ತಿಳಿಸಿದ್ದಾರೆ.