ಬಾಗಲಕೋಟೆ : ಬನದ ಹುಣ್ಣಿಮೆ ಮುನ್ನಾ ದಿನ ಪಲ್ಲೇದ ಹಬ್ಬದ ನಿಮಿತ್ತ ಬಾದಾಮಿಯ ಬನಶಂಕರಿ ದೇವಿ ಮೂರ್ತಿಯನ್ನು ತರಕಾರಿಗಳಿಂದ ಅಲಂಕರಿಸಲಾಗಿದ್ದು, ಭಕ್ತಾದಿಗಳ ಮನ ಸೆಳೆಯುವಂತೆ ಇತ್ತು ಎಂದು ಮಾಹಿತಿ ತಿಳಿದು ಬಂದಿದೆ.
ಅಮ್ಮನವರ ಜಾತ್ರಾ ಮಹೋತ್ಸವವನ್ನು ವಿಕ್ಷಣೆ ಮಾಡಲು ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾಧಿಗಳು ಆಗಮಸಲಿದ್ದು, ಪಾದ ಯಾತ್ರೆ ಮೂಲಕ ಬನಶಂಕರಿ ದೇವಿಯ ದರ್ಶನ ಪಡೆಯಲು ಬರುತ್ತಿರುವ ಭಕ್ತರನ್ನು ನೋಡಲು ಸಹ ಎರಡು ಕಣ್ಣು ಸಲಾದಾಗಿದೆ.
ನಾನಾ ಬಗೆಯ ತರಕಾರಿ ಬಳಸಿ ಕೈಗೊಂಡ ದೇವಿ ಮೂರ್ತಿಯ ಅಲಂಕಾರ ಭಕ್ತರನ್ನು ಸೆಳೆಯಿತು. ಜ.25 ರಂದು ಬನಶಂಕರಿ ದೇವಿ ಜಾತ್ರೆಗೆ ರಥೋತ್ಸವ ದ ಮೂಲಕ ಚಾಲನೆ ದೊರೆಯಲಿದೆ. ಒಂದು ತಿಂಗಳು ಜಾತ್ರೆ ನಡೆಯಲಿದೆ ಎಂದು ಮಾಹಿತಿ ಬೆಳಕಿಗೆ ಬಂದಿದೆ.