ನವದೆಹಲಿ
ರಾಜ್ಯಸಭೆ ಚುನಾವಣೆಗೆ ಕರ್ನಾಟಕದಿಂದ ನಾರಾಯಣ ಭಾಂಡಗೆ ಬಿಜೆಪಿ ಅಭ್ಯರ್ಥಿಯಾಗಿದ್ದು ಬಾಗಲಕೋಟೆಗೆ ಅದೃಷ್ಟ ಒಲಿದಿದೆ.
ಬಿಜೆಪಿ ರಾಜ್ಯಸಭೆ ಸದಸ್ಯರ ಆಯ್ಕೆಗೆ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು, ಬಾಗಲಕೋಟೆಯ ಬಿಜೆಪಿ ಮುಖಂಡ ನಾರಾಯಣಸಾ ಭಾಂಡಗೆ ಅವರು ರಾಜ್ಯದಿಂದ ಅಚ್ಚರಿಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಹಿಂದುಳಿದ ವರ್ಗ ಕ್ಷತ್ರೀಯ ಸಮಾಜದ ನಾರಾಯಣಸಾ ಭಾಂಡಗೆ ಅವರಿಗೆ ಅವಕಾಶ ನೀಡಲಾಗಿದೆ.
ಹಾಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ಮಾಜಿ ಸಚಿವ ಸೋಮಣ್ಣ ಅವರು ಸ್ಪರ್ಧಿಸುವ ಕುರಿತು ಚರ್ಚೆಗಳು ನಡೆದಿದ್ದವು.
ಆದರೆ ಪಕ್ಷದ ವರಿಷ್ಠರು ಬಾಗಲಕೋಟೆ ಮೂಲದ ನಾರಾಯಣ ಭಾಂಡಗೆಗೆ ಮಣೆ ಹಾಕಿದ್ಧಾರೆ. ಈ ಮೂಲಕ ವಿ.ಸೋಮಣ್ಣ ಹಾಗೂ ರಾಜೀವ್ ಚಂದ್ರಶೇಖರ್ ಅವರಿಗೆ ಲೋಕಸಭೆ ಟಿಕೆಟ್ ನೀಡುವುದು ಪಕ್ಕಾ ಆಗಿದೆ. ಈ ಬಾರಿ ಬಿಜೆಪಿಯಿಂದ ಒಬ್ಬರೇ ಗೆಲ್ಲಲು ಅವಕಾಶವಿದೆ.
ಮನೆಯಲ್ಲಿ ಸಂಭ್ರಮ
ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣಸಾ ಬಾಂಢಗೆ ಹೆಸರು ಘೋಷಣೆ ಆಗುತ್ತಿದ್ದಂತೆ ಬಾಗಲಕೋಟೆಯ ಭಾಂಢಗೆ ನಿವಾಸದಲ್ಲಿ ಸಂಭ್ರಮ ಮನೆ ಮಾಡಿತ್ತು. ಕುಟುಂಬಸ್ಥರು, ಬಿಜೆಪಿ ಪ್ರಮುಖರು, ಹಿತೈಷಿಗಳೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ನಾರಾಯಣಸಾ ಬಾಂಡಗೆ ಹೇಳಿದರು.