ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಯಾರು ಫಿನಾಲೆಗೆ ಬರುತ್ತಾರೆ? ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಇರಬಹುದು. ಇದಕ್ಕೆ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮ ಅವರು ಉತ್ತರ ನೀಡಿದ್ದಾರೆ.
ಈ ಬಾರಿ ಕನ್ನಡ ‘ಬಿಗ್ ಬಾಸ್’ ಮನೆಗೆ ಬಂದವರು ತಾವು ದೊಡ್ಮನೆಯಲ್ಲಿ ಇದ್ದಷ್ಟು ದಿನ ಚೆನ್ನಾಗಿ ಇರಬೇಕು, Explore ಮಾಡಬೇಕು ಅಂತಲೇ ಬಂದವರಲ್ಲ, ಆಟ ಆಡಬೇಕು, ಟ್ರೋಫಿ ಗೆಲ್ಲಬೇಕು ಅಂತಲೇ ಪಣ ತೊಟ್ಟವರು. ಹೀಗಾಗಿ ನಿತ್ಯವೂ ಜಗಳ, ಸ್ಪರ್ಧೆ, ಕಿಚ್ಚು ಎಲ್ಲವೂ ಜೋರಾಗಿದೆ. ಇವೆಲ್ಲವುಗಳ ಮಧ್ಯೆ ಈ ಬಾರಿ ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರವೇ ಸಿಗದಂತಾಗಿದೆ. ಒಬ್ಬರಿಗಿಂತ ಒಬ್ಬರು ಮೇಲುಗೈ ಸಾಧಿಸುವ ರೀತಿಯಲ್ಲಿ ಆಟ ಆಡ್ತಿದ್ದಾರೆ ಅಂದ್ರೆ ಯಾರು ಗೆಲ್ಲಬಹುದು? ಈ ಪ್ರಶ್ನೆಗೆ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಾ ಅವರು ಉತ್ತರ ಕೊಟ್ಟಿದ್ದಾರೆ.
ಬಿಗ್ ಬಾಸ್ ಶೋನಲ್ಲಿ ಈ ಬಾರಿ ಯಾರು ಫಿನಾಲೆಗೆ ಹೋಗಬಹುದು ಎಂಬ ಪ್ರಶ್ನೆಗೆ ಬ್ರಹ್ಮಾಂಡ ಗುರೂಜಿ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ. ಸದ್ಯ ಮೈಕಲ್ ಅಜಯ್, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ, ವಿನಯ್ ಗೌಡ, ತುಕಾಲಿ ಸ್ಟಾರ್ ಸಂತು, ವರ್ತೂರು ಸಂತೋಷ್, ತನಿಷಾ ಕುಪ್ಪಂಡ, ಅವಿನಾಶ್ ಶೆಟ್ಟಿ, ಪವಿ ಪೂವಪ್ಪ, ಸಿರಿ, ನಮ್ರತಾ ಗೌಡ, ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಅವರಲ್ಲಿ ಈ ವಾರ ಒಬ್ಬರು ಹೊರಗಡೆ ಹೋಗ್ತಾರೆ. ನಮ್ರತಾ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ಕಾರ್ತಿಕ್, ವಿನಯ್, ಸಂಗೀತಾ, ತನಿಷಾ ಅವರು ಫಿನಾಲೆ ಸ್ಪರ್ಧಿಗಳ ತರ ಕಾಣ್ತಿದ್ದಾರೆ. ಹಾಗಾದರೆ ಇವರಲ್ಲಿ ಫಿನಾಲೆ ತಲುಪುವವರು ಯಾರು?
ಈ ಬಾರಿ ಎಲ್ಲರೂ ಗೆಲ್ಲೋಕೆ ಬಂದವರು. ಕಂಟೆಂಟ್ ಬೇಕು ಅಂತಲೇ ಎಲ್ಲರೂ ಜಗಳ ಆಡ್ತಿದ್ದಾರೆ. ಈ ಬಾರಿ ಮೂವರು ಫಿನಾಲೆಯಲ್ಲಿ ಇರೋರು ಪುರುಷರು. ಸಂಗೀತಾ ತುಂಬ ಚಂಚಲ ಮನಸ್ಥಿತಿಯುಳ್ಳವರು, ಅವಳು ಈ ಬಾರಿ ಫಿನಾಲೆಗೆ ಬರಲಿ ಅಂತ ಕೆಲವರು ಅಂದುಕೊಳ್ತಿದ್ದಾರೆ. ಡ್ರೋನ್ ಪ್ರತಾಪ್ ಗೆಲ್ಲಬೇಕು, ಗೆಲ್ತಾರೆ ಎನ್ನೋದು ಸುಳ್ಳು. ಅವನು ಬಿಗ್ ಬಾಸ್ ಮನೆಯಲ್ಲಿಯೂ ನಾಟಕ ಮಾಡ್ತಿದ್ದಾನೆ, ಎಲ್ಲ ಕಡೆಯೂ ನಟಿಸುತ್ತಿದ್ದಾನೆ” ಎಂದಿದ್ದಾರೆ ಬ್ರಹ್ಮಾಂಡ ಗುರೂಜಿ.
ವಿನಯ್ ಗೌಡ ಒಳ್ಳೆಯ ಮನುಷ್ಯ. ಕಾರ್ತಿಕ್ ಹಿತ್ತಾಳೆ ಕಿವಿ, ಅವನು ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ. ವರ್ತೂರು ಸಂತೋಷ್ ಪ್ರಾಣಿ ಪ್ರಿಯ. ಸಿರಿ, ತುಕಾಲಿ ಸ್ಟಾರ್ ಅವರು ತುಂಬ ಸಿಂಪಲ್” ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ
ಬ್ರಹ್ಮಾಂಡ ಗುರೂಜಿ ಪ್ರಕಾರ ವಿನಯ್ ಗೌಡ, ಡ್ರೋನ್ ಪ್ರತಾಪ್, ಕಾರ್ತಿಕ್ ಅವರು ಫಿನಾಲೆಯಲ್ಲಿ ಇರಬಹುದಂತೆ. ಆದರೆ ಗುರೂಜಿ ಅವರು ನಿಖರವಾಗಿ ಯಾರು ಗೆಲ್ತಾರೆ ಅಂತ ಹೇಳಿಲ್ಲ. ಇವರು ಕೂಡ ಎರಡು ದಿನಗಳ ಕಾಲ ಈ ಸೀಸನ್‌ಗೆ ದೊಡ್ಮನೆಗೆ ಅತಿಥಿಯಾಗಿ ಹೋಗಿ ಬಂದಿದ್ದರು
ಬಾರಿ ಬಿಗ್ ಬಾಸ್ ಶೋನಲ್ಲಿ ಈ ಬಾರಿ ಮಹಿಳೆಯನ್ನು ಗೆಲ್ಲಿಸುವ ಸಾಧ್ಯತೆ ಇದೆ. ಗೆಲ್ಲೋಕೂ, ಗೆಲ್ಲಿಸೋಕೂ ವ್ಯತ್ಯಾಸ ಇದೆ. ಮೀನ ರಾಶಿ ಅವರು ಈ ಬಾರಿ ಟ್ರೋಫಿ ಹೊಡೆಯಬಹುದು. ವರ್ತೂರು ಸಂತೋಷ್ ಅವರು ಸೈಲೆಂಟ್ ಆಗಿದ್ದು ಬಿಗ್ ಬಾಸ್ ಟ್ರೋಫಿ ಗೆದ್ದರೂ ಆಶ್ಚರ್ಯ ಇಲ್ಲ” ಎಂದು ಆರ್ಯವರ್ಧನ್ ಗುರೂಜಿ ಅವರು ಕೆಲ ದಿನಗಳ ಹಿಂದೆ ಭವಿಷ್ಯ ನುಡಿದಿದ್ದರು. ಆರ್ಯವರ್ಧನ್ ಗುರೂಜಿ ಅವರ ಭವಿಷ್ಯ ಕೆಲವೊಮ್ಮೆ ನಿಜ ಆಗುವುದು, ಇನ್ನೂ ಕೆಲವೊಮ್ಮೆ ಸುಳ್ಳಾಗುವುದು.
ಈ ಬಾರಿ ಭಾರತ ವಿಶ್ವಕಪ್ ಗೆಲ್ಲುತ್ತದೆ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದರು, ಅದು ನಿಜ ಆಗಲಿಲ್ಲ. ಕಳೆದ ಬಾರಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿ ಅವರು ಟ್ರೋಫಿ ಹೊಡೆಯಬಹುದು ಎಂಬಂತೆ ಪರೋಕ್ಷವಾಗಿ ಮಾತನಾಡಿದ್ದರು. ಅದು ನಿಜ ಆಯ್ತು.
ಆರ್ಯವರ್ಧನ್ ಗುರೂಜಿ ಅವರು ಅಂದಹಾಗೆ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ಶೋನಲ್ಲಿ ಗೆದ್ದು, ಸೀಸನ್ 9 ಶೋನಲ್ಲಿ ಭಾಗವಹಿಸಿದ್ದರು. ಅವರು ಯಾವಾಗ ಬಿಗ್ ಬಾಸ್ ಪರವಾಗಿ, ಯಾವಾಗ ಬಿಗ್ ಬಾಸ್ ವಿರುದ್ಧವಾಗಿ ಮಾತಾಡ್ತಾರೆ ಅಂತ ಹೇಳೋಕೆ ಆಗದು.
ಬಾರಿ ಬಿಗ್ ಬಾಸ್ ಮನೆ ಆಟ ಶುರು ಆಗಿ 66 ದಿನಗಳು ಕಳೆದಿವೆ. ಇದು 100 ದಿನಗಳ ಆಟ. ಆದರೆ ಈ ಬಾರಿ ಟಿಆರ್‌ಪಿ ಚೆನ್ನಾಗಿ ಇರೋದಿಕ್ಕೆ ಮತ್ತೊಂದಿಷ್ಟು ದಿನ ಬಿಗ್ ಬಾಸ್ ಆಟವನ್ನು ಮುಂದುವರೆಸಿದರೂ ಆಶ್ಚರ್ಯ ಇಲ್ಲ. ಹಿಂದಿ ಬಿಗ್ ಬಾಸ್ 14 ಸೀಸನ್‌ನಲ್ಲಿ ಟಿಆರ್‌ಪಿ ಜಾಸ್ತಿ ಬಂದಾಗ ಮತ್ತೊಂದಿಷ್ಟು ದಿನ ಶೋ ಮುಂದುವರೆಸಲಾಗಿತ್ತು. 100 ದಿನಕ್ಕೆ ಲೆಕ್ಕ ತಗೊಂಡರೆ ಇನ್ನು 1 ತಿಂಗಳು ಒಳಗಡೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಫಿನಾಲೆ ನಡೆಯಬೇಕು.
ಅಂದಹಾಗೆ ಜಿಯೋ ಸಿನಿಮಾ ಆಪ್‌ನಲ್ಲಿ 24/7 ಗಂಟೆಗಳ ಕಾಲ ಬಿಗ್ ಬಾಸ್ ಕನ್ನಡ ಸೀಸನ್ 10 ಶೋವನ್ನು ಉಚಿತವಾಗಿ ಲೈವ್ ಆಗಿ ನೋಡಬಹುದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ನಿತ್ಯ 1.5 ಗಂಟೆಗಳ ಕಾಲ ಬಿಗ್ ಬಾಸ್ ಶೋ ಎಪಿಸೋಡ್ ಪ್ರಸಾರ ಆಗುವುದು.