ಬೆಂಗಳೂರು: ನೀರು ಪೂರೈಸುವ ಖಾಸಗಿ ಟ್ಯಾಂಕರ್ ಗಳಿಗೆ ಬಿಬಿಎಂಪಿ ಶಾಕ್ ನೀಡಿದೆ ಟ್ಯಾಂಕರ್ ಮಾಫಿಯಾಗಿ ಕಡಿವಾಣ ಹಾಕಲು ಇದೀಗ ಬಿಬಿಎಂಪಿ ತಯಾರಿ ನಡೆಸುತ್ತಿದ್ದು, ಸಾರ್ವಜನಿಕರಿಂದ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಟ್ರೇಡ್ ಲೈಸೆನ್ಸ್ ರದ್ದು ಮಾಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರೀನಾಥ್ ಮಾಹಿತಿ ನೀಡಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು,ನೀರು ಪೂರೈಸುವ ಖಾಸಗಿ ಟ್ಯಾಂಕರ್ ಗಳ ಮಾಲೀಕರು ನಿಗದಿತ ದೊರಕಿಂತ ಹೆಚ್ಚು ಹಣ ವಸಲಿ ಮಾಡುತ್ತಿದ್ದು, ಎಂದು ಸಾರ್ವಜನಿಕರ ದೂರು ಬಂದ ಹಿನ್ನೆಲೆಯಲ್ಲಿ , ಟ್ಯಾಂಕರ್ ಮಾಫಿಯಾಗಿ ಕಡಿವಾಣ ಹಾಕಲು ಇದೀಗ ಬಿಬಿಎಂಪಿ ತಯಾರಿ ಮಾಡಿಕೊಂಡಿದೆ.
20,000 ಲೀಟರ್ ನೀರಿಗೆ 6500 ಪಡೆಯುತ್ತಿದ್ದು, ಈ ಸಂಬಂಧ ಸಾರ್ವಜನಿಕರಿಂದ ವ್ಯಾಪಕವಾಗಿ ದೂರು ಬಂದ ಹಿನ್ನೆಲೆಯಲ್ಲಿ ನೀರು ಪೂರೈಸುವ ಖಾಸಗಿ ಟ್ಯಾಂಕರ್ ಮಾಲೀಕರಿಗೆ ದರ ನಿಗದಿಗೆ ಇದೀಗ ಬಿಬಿಎಂಪಿ ಚಿಂತನೆ ನಡೆಸುತ್ತಿದೆ. ಸಾರ್ವಜನಿಕರ ಅನುಕೂಲಕ್ಕೆ ಧರ ನಿಗದಿ ಮಾಡಲು ಬಿಬಿಎಂಪಿ ಚಿಂತನೆ ನಡೆಸುತ್ತಿದೆ ಆಯಾ ವಲಯಗಳ ವಲಯ ಆಯುಕ್ತರಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದರು.
ಬೇಸಿಗೆನೇ ಬಂಡವಾಳ ಮಾಡಿ ಕೊಂಡು ಖಾಸಗಿ ಟ್ಯಾಂಕರ್ ಮಾಲೀಕರು ಬೇಸಿಗೆ ಮೊದಲೇ ಟ್ಯಾಂಕರ್ ಮಾಲೀಕರು ಇದೀಗ ವಸೂಲಿಗೆ ಮುಂದಾಗಿದ್ದು, ಒಂದು ಟ್ಯಾಂಕರ್ ಗೆ 500 ರಿಂದ 600 ದರ ಇತ್ತು. ಇದೀಗ ಟ್ಯಾಂಕರ್ 1000,1200 ದರ ವಸೂಲಿ ಮಾಡುತ್ತಿದ್ದಾರೆ. ಇಂದಿರಾನಗರ, ರಾಜಾಜಿನಗರ, ಸುಂಕದಕಟ್ಟೆಯಲ್ಲಿ ಹೆಚ್ಚು ಬೆಲೆಗೆ ನೀರನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದರು.