ಬೆಂಗಳೂರು: ಸೊಪ್ಪು, ಟೊಮೆಟೊ ಸೇರಿದಂತೆ ಹಲವು ತರಕಾರಿಗಳ ದರದಲ್ಲಿ ಇಳಿಕೆಯಾಗಿದ್ದು, ಬೆಳ್ಳುಳ್ಳಿ ಪ್ರತಿ ಕೆಜಿಗೆ 500 ರೂ. ದಾಟಿದ್ದು ಹೊರತುಪಡಿಸಿದರೆ ಉಳಿದ ತರಕಾರಿಗಳು ಗ್ರಾಹಕರಿಗೆ ಕೈಗೆಟಕುವಂತಿವೆ ಎಂದು ಮಾಹಿತಿ ತಿಳಿದು ಬಂದಿದೆ.
ಕಳೆದ ತಿಂಗಳು ಒಂದು ಕಂತೆ ಮೆಂತ್ಯ, ಸಬ್ಬಸಿಗೆ ಸೊಪ್ಪಿಗೆ 30 ರೂ. , ಕೇವಲ 10-20 ರೂ.ಗೆ ಸಿಗುತ್ತಿದ್ದು, 100 ರೂ. ದಾಟಿದ್ದ ಬೀನ್ಸ್, ಕ್ಯಾರೆಟ್, ಅಷ್ಟೇ ಏಕೆ 60 ರೂ.ವರೆಗೆ ತಲುಪಿದ್ದ ಮೂಲಂಗಿ ದರವೂ ಗಣನೀಯವಾಗಿ ಇಳಿಕೆಯಾಗಿದ್ದು, ಟೊಮೇಟೊ ದರ ಕೂಡ ಕೆ.ಜಿ.ಗೆ 20 ರೂ. ಮುಟ್ಟಿದೆ. ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದಲೂ ಕೆಲವು ತರಕಾರಿಗಳು ಕರ್ನಾಟಕಕ್ಕೆ ಬರುತ್ತಿವೆ. ಹೀಗಾಗಿ, ಬೆಲೆಗಳಲ್ಲಿಇಳಿಕೆಯಾಗಿದೆ.
ಆನೇಕಲ್, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಸೊಪ್ಪು-ತರಕಾರಿಗಳು ಬೆಂಗಳೂರಿಗೆ ಬರುತ್ತಿದ್ದು, ಹೈಬ್ರಿಡ್ ತಳಿಗಳ ಪ್ರಮಾಣ ಹೆಚ್ಚಾಗಿದ್ದು, ತಾಜಾ ಆಗಿರುವುದರ ಜತೆಗೆ ಅಧಿಕ ಇಳುವರಿ ಕೊಡುವುದರಿಂದ ಗ್ರಾಹಕರ ಬೆಲೆ ಏರಿಕೆಯನ್ನು ಇಳಿಸಿದೆ ಎನ್ನುತ್ತಾರೆ ಹಾಪ್‌ಕಾಮ್ಸ್‌ನ ಸಿಬ್ಬಂದಿ. ಚಿಲ್ಲರೆ ದರದಲ್ಲಿ ಬೀನ್ಸ್ ಕೆ.ಜಿ.ಗೆ 50 ರೂ. ಇದ್ದರೆ, ಹಾಪ್‌ಕಾಮ್ಸ್‌ನಲ್ಲಿ68 ರೂ. ಇದೆಎಲ್ಲೆಡೆ ನೀರಿಗೆ ಸಮಸ್ಯೆಯಿರುವುದರಿಂದ ಇದೀಗ ಹೆಚ್ಚಿನ ರೈತರು ಪಾಲಿಹೌಸ್‌ಗಳ ಮೊರೆ ಹೋಗಿದ್ದಾರೆ.
ಒಂದು ಬಾರಿ ಬಂಡವಾಳ ಹಾಕಿದರೆ ಹಲವು ವರ್ಷಗಳ ಕಾಲ ಗುಣಮಟ್ಟದ ಅಧಿಕ ಇಳುವರಿ ನೀಡುವ ತರಕಾರಿ, ಸೊಪ್ಪುಗಳನ್ನು ಬೆಳೆಯಬಹುದಿದ್ದು, ಇದಕ್ಕೆ ಸರಕಾರದಿಂದ ಸಬ್ಸಿಡಿ ದರದಲ್ಲಿಸಹಾಯಧನವೂ ಸಿಗುತ್ತದೆ. ಹೀಗಾಗಿ, ರೈತರು ಇತ್ತೀಚಿನ ದಿನಗಳಲ್ಲಿಪಾಲಿಹೌಸ್‌ಗಳಲ್ಲಿತರಕಾರಿ ಬೆಳೆಯುತ್ತಿದ್ದಾರೆ.