ಬೆಂಗಳೂರು : ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಇಂದು ಬೆಂಗಳೂರು ಬಂದ್ ನಡೆಸಲಾಗುತ್ತಿದೆ. ಬಂದ್ ಆರಂಭವಾದ ಕೆಲವೇ ಕ್ಷಣಗಳಲ್ಲಿ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಈ ವೇಳೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಂತಕುಮಾರ್ ‘ವಶಕ್ಕೆ ಪಡೆಯುವುದಕ್ಕೆ ನಾವೇನು ಭಯೋತ್ಪಾದಕ ಚಟುವಟಿಕೆ ಮಾಡ್ತಿಲ್ಲ. ಕುಡಿಯಲು ನೀರಿಲ್ಲ ಅಂದ್ರೆ ರಾಜಕಾರಣಿಗಳು ಮನೆಗೆ ಹೋದಾಗ ಏನು ಹೇಳ್ತೀರಾ? ಜಲ್ಲಿಕಟ್ಟು ಸಂಬಂಧ ಪ್ರತಿಭಟನೆ ಆದಾಗ ತಮಿಳುನಾಡು ಪೋಲಿಸರು ಸಹಕಾರ ನೀಡಿದ್ದರು. ನಮ್ಮ ಪೊಲೀಸರು ಕೂಡ ಅದೇ ರೀತಿ ಸಹಕಾರ ನೀಡಬೇಕಿತ್ತು. ಪೊಲೀಸರು ಪ್ರತಿಭಟನೆ ಹತ್ತಿಕ್ಕಲು144 ಸೆಕ್ಷನ್ ಹಾಕಬಾರದಿತ್ತು. ಆದರೂ, ನಮ್ಮ ಹೋರಾಟ, ಚಳವಳಿ ಮುಂದುವರಿಯಲಿದೆ. ರಾಜ್ಯದ ರೈತರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಇಲ್ಲಿ ಏನೇ ನಡೆದರೂ ಇಡೀ ರಾಜ್ಯಕ್ಕೆ ಸಂದೇಶ ಹೋಗುತ್ತದೆ. ಪೋಲಿಸರು ಎಚ್ಚರಿಕೆಯಿಂದ ಇರಬೇಕು ಎಂದರು.
ನಮ್ಮಲ್ಲಿ ರಾಜಕೀಯವಿಲ್ಲ ಎಲ್ಲಾ ಪಕ್ಷದವರು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಬಂದ್ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.