ಬೆಂಗಳೂರು: ಮುರುಡೇಶ್ವರ ನಿಲ್ದಾಣದಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಸಲುವಾಗಿ ಮಾರ್ಚ್ 13 ರಿಂದ 16 ರವರೆಗೆ ಬೆಂಗಳೂರು – ಮುರುಡೇಶ್ವರ ನಡುವೆ ಸಂಚಾರ ನಡೆಸುವ 2 ರೈಲುಗಳು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಮಾರ್ಚ್ 12, 13, 14 & 15, 2024 ರಂದು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16585 ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುರುಡೇಶ್ವರ ಎಕ್ಸ್ ಪ್ರೆಸ್ ರೈಲು ಭಟ್ಕಳ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದ್ದು, ಭಟ್ಕಳ ಮತ್ತು ಮುರುಡೇಶ್ವರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದ್ದು, ಮಂಗಳೂರು ಸೆಂಟ್ರಲ್‌ನಿಂದ 09.15ಕ್ಕೆ ಆರಂಭಗೊಳ್ಳುವ ರೈಲು, ಕಾಸರಗೋಡು ನಿಲ್ದಾಣಕ್ಕೆ 9.58ಕ್ಕೆ ತಲುಪಲಿದೆ.
ಕಣ್ಣೂರು 10.55, ಕೋಝಿಕೋಡ್‌ಗೆ 11.57, ತಿರೂರ್ ನಿಲ್ದಾಣಕ್ಕೆ 12.35, ಶೋರ್ನೂರಿಗೆ 13.12, ತ್ರಿಶ್ಯೂರ್‌ಗೆ 13.47, ಎರ್ನಾಕುಳಂ 14.55, ಆಲಪ್ಪುಯಕ್ಕೆ 15.57, ಕೊಲ್ಲಂ 16.58ಕ್ಕೆ ತಲುಪಿ ತಿರುವನಂತಪುರಕ್ಕೆ ಸೆಂಟ್ರಲ್‌ಗೆ 18.30ಕ್ಕೆ ತಲುಪಿಲಿದೆ.ರೈಲು ಸಂಖ್ಯೆ 20631/20632 ಮಂಗಳೂರು ಸೆಂಟ್ರಲ್-ತಿರುವನಂತಪುರ ಸೆಂಟ್ರಲ್-ಮಂಗಳೂರು ಸೆಂಟ್ರಲ್‌ನ ನಿಯಮಿತ ಸೇವೆಯು ಮಾ. 1 3ರಂದು ಎರಡೂ ಕಡೆಯಿಂದ ಪ್ರಾರಂಭವಾಗಲಿದೆ.
ಈಗಾಗಲೇ ಕಾಯ್ದಿರಿಸಿದ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು, ಈ ರೈಲು 2024ರ ಜುಲೈ 4ರ ತನಕ ಎಲ್ಲದಿನಗಳಲ್ಲಿಕಾರ್ಯನಿರ್ವಹಿಸುತ್ತದೆ. ನಂತರ ಈ ರೈಲುಗಾಡಿ ವಾರದಲ್ಲಿ 6 ದಿನಗಳು (ಬುಧವಾರ ಹೊರತುಪಡಿಸಿ) ಸಂಚಾರ ನಡೆಸಲಿದೆ ಎಂದು ಮಾಹಿತಿ ಕಂಡು ಬಂದಿದೆ.