This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsState News

ಬೆಸ್ಟ್‌ ಕರಿಯರ್‌ ಟಿಪ್ಸ್‌: ನೀವು ಫ್ರೆಶರ್‌ಗಳೇ?., ಜಾಬ್‌ ಹುಡುಕುವ ಮುನ್ನ ಈ ವಿಷಯಗಳನ್ನು ತಿಳಿದಿರಬೇಕು..!

ಬೆಸ್ಟ್‌ ಕರಿಯರ್‌ ಟಿಪ್ಸ್‌: ನೀವು ಫ್ರೆಶರ್‌ಗಳೇ?., ಜಾಬ್‌ ಹುಡುಕುವ ಮುನ್ನ ಈ ವಿಷಯಗಳನ್ನು ತಿಳಿದಿರಬೇಕು..!

ಗ್ರಾಜುಯೇಷನ್‌ ಮುಗಿಸುವವರೆಗೆ ಮತ್ತು ಕೆಲವರಿಗೆ ಮುಗಿಸಿದರು ಸಹ ಮುಂದೇನು ಎನ್ನುವ ಪ್ಲಾನ್‌ ಸಹ ಇರುವುದಿಲ್ಲ. ಇನ್ನು ಜಾಬ್‌ಗೆ ಹೋಗಬೇಕು ಎಂದುಕೊಂಡವರಿಗೆ ತಾವು ಓದಿದ್ದಕ್ಕೆ ತಕ್ಕಂತೆ ಯಾವ ಉದ್ಯೋಗ ಮಾಡಬೇಕು, ಹೇಗೆ ಉದ್ಯೋಗ ಸರ್ಚ್‌ ಮಾಡಬೇಕು, ನಾನು ಎಲ್ಲಿಗೆ / ಯಾವ ಕ್ಷೇತ್ರಕ್ಕೆ ಸೂಕ್ತ ಎಂಬ ಜ್ಞಾನವು ಇರುವುದಿಲ್ಲ. ಇಂತಹ ಸಮಸ್ಯೆಗಳನ್ನು ಹಲವರು ಎದುರಿಸುವುದು ಉಂಟು. ಅಂತಹವರಿಗಾಗಿ ಇಂದಿನ ಬೆಸ್ಟ್‌ ಕರಿಯರ್ ಟಿಪ್ಸ್‌ಗಳನ್ನು ಇಲ್ಲಿ ನೀಡಿದ್ದೇವೆ.

ನೀವು ಫ್ರೆಶರ್‌ಗಳಾಗಿದ್ದು, ಜಾಬ್‌ ಕ್ಷೇತ್ರಕ್ಕೆ ಕಾಲಿಡುವ ಯೋಚನೆಯಲ್ಲಿದ್ದರೆ, ಈ ಟಿಪ್ಸ್‌ಗಳನ್ನು ಗಮನದಿಂದ ಓದಿಕೊಂಡು ಫಾಲೋ ಮಾಡಿರಿ.
ಸರ್ಕಾರಿ ಹುದ್ದೆಯ ಆಸೆ
ಸರ್ಕಾರಿ ಹುದ್ದೆಯ ಆಸೆ ನಾವು ನೋಡಿದ್ದೇವೆ. ಕೆಲವು ಅಭ್ಯರ್ಥಿಗಳು ಮೊದಲು ಕೆಲಸಕ್ಕೆ ಸೇರುತ್ತಾರೆ. ನಂತರ ಅಲ್ಲಿ ಕೆಲಸ ಇಷ್ಟವಾಗದೇ ಸರ್ಕಾರಿ ಕೆಲಸಕ್ಕೆ ಆಸೆ ಪಟ್ಟು ಓದುತ್ತೇನೆ ಎಂದು ಹಿಂದಿರುಗುತ್ತಾರೆ. ಆದರೆ ಆ ಸಮಯದಲ್ಲಿ ನೀವು ಬೇರೆಯವರನ್ನು ನೋಡಿ ಮೋಟಿವೇಟ್‌ ಆಗಿ ಬರುವುದಕ್ಕೆ ಬದಲು ನಿಮ್ಮ ಆತ್ಮವಿಶ್ವಾಸ / ಸಂದರ್ಭ / ಆಸಕ್ತಿ / ತಾಳ್ಮೆಗಳೆಲ್ಲವನ್ನೂ ಸಹ ಲೆಕ್ಕಚಾರ ಹಾಕಿರಿ. ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಕ್ರಿಯೆಗಳು, ಪರೀಕ್ಷೆ ಬರೆದವರು ಎದುರಿಸುತ್ತಿರುವ ಸವಾಲುಗಳು, ಪರೀಕ್ಷೆಗಳಲ್ಲಿ ನಡೆದ ನಕಲು ಪ್ರಕರಣಗಳು, ಇವುಗಳಿಂದ ಆಗುತ್ತಿರುವ ಪರಿಣಾಮ, ಎಲ್ಲವನ್ನು ಒಮ್ಮೆ ಗಮನಿಸಿ ನಂತರ ನಿರ್ಧಾರ ಮಾಡಿ.

ಅಂತಿಮ ವರ್ಷದ BE ವಿದ್ಯಾರ್ಥಿಗಳು ಯಾವೆಲ್ಲ ಸರ್ಕಾರಿ ಉದ್ಯೋಗ ಪರೀಕ್ಷೆಗಳನ್ನು ಬರೆಯಬಹುದು?

ಆರಂಭ

ನೀವು ಕೆಲಸ ಹುಡುಕಲು ಈಗಾಗಲೇ 2 ತಿಂಗಳು ಸಮಯ ನೀಡಿದ್ದೀರಿ. ಆದರೂ ಕೆಲಸ ಸಿಕ್ಕಿಲ್ಲ ಎಂದಾದಲ್ಲಿ.. ನಂತರ ಯಾವ ಕೆಲಸಕ್ಕೆ ಆಫರ್‌ ಬರುತ್ತದೋ ಅಲ್ಲಿಂದಲೇ ನಿಮ್ಮ ಕರಿಯರ್ ಆರಂಭಿಸಿ. ನಂತರ ಮುಂದಿನ ಪ್ಲಾನ್‌ ಮಾಡಿಕೊಂಡರಾಯಿತು. ನಿಮ್ಮ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಈ ನಿರ್ಧಾರವಿರಲಿ. ಅಥವಾ ನಿಮ್ಮ ಕನಸಿನ ಉದ್ಯೋಗಕ್ಕೆ ಸಕಲ ಸಿದ್ಧತೆಯನ್ನು ನಡೆಸುವುದನ್ನು ಮುಂದುವರೆಸುತ್ತಾ, ಕೆಲಸ ಹುಡುಕಿ. ಆದರೆ ಜಾಬ್‌ಗೆ ಅರ್ಜಿ ಹಾಕಿ, ಸುಮ್ಮನೆ ಕುಳಿತುಕೊಳ್ಳುವುದು ಬೇಡ.

ಎನ್‌ಇಟಿ ಪಾಸ್‌ ಮಾಡಿದ ಸರ್ಕಾರಿ, ಖಾಸಗಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ವೇತನ ಎಷ್ಟು ಗೊತ್ತೇ?

ತಿರಸ್ಕಾರಗಳು

ಕೆಲವೊಮ್ಮೆ ಜಾಬ್‌ ರೋಲ್‌ ಇಷ್ಟವಾಗದೇ, ಇನ್ನು ಕೆಲವೊಮ್ಮೆ ಸಂಬಳ ಇಷ್ಟವಾಗದೇ ನೀವು ಕೆಲಸವನ್ನು ರಿಜೆಕ್ಟ್‌ ಮಾಡುವ ಸಂದರ್ಭ ಎದುರಾಗುತ್ತದೆ. ಇನ್ನು ಕೆಲವೊಮ್ಮೆ ಕಂಪನಿಗಳೇ ನಿಮ್ಮನ್ನು ಆಯ್ಕೆ ಮಾಡದಿರಬಹುದು. ಈ ಸ್ಟ್ರಗಲ್‌ಗಳನ್ನು ಒಮ್ಮೆ ಎಂಜಾಯ್‌ ಮಾಡಿ. ಇವುಗಳಿಂದ ಹೆಚ್ಚು ಕಲಿತು, ನಿಮ್ಮ ಜೀವನ, ಕರಿಯರ್ ಲೈಫ್‌ ಒಂದು ಹದಕ್ಕೆ ಬರುತ್ತದೆ. ಉತ್ತಮ ಜೀವನ ರೂಪಿಸಿಕೊಳ್ಳಲು ಹೆಚ್ಚು ದಾರಿಗಳು ಕಾಣುತ್ತವೆ.

ನಿರ್ಧಾರಗಳು
ಈ ಹಂತದಲ್ಲಿ ನೀವು ಬುದ್ಧಿವಂತಿಕೆಯಿಂದ ಉತ್ತಮ ನಿರ್ಧಾರ ತೆಗೆದುಕೊಳ್ಳಿ. ಈಗಾಗಲೇ ಬಹುಸಂಖ್ಯಾತರು ಬ್ರ್ಯಾಂಚ್‌ ಹಾಗೂ ಕ್ಷೇತ್ರದ ಆಳ ಅಗಲ ತಿಳಿಯದೆಯೇ ತಮ್ಮ ಕರಿಯರ್ ಫೀಲ್ಡ್‌ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಧ್ಯಮ ವರ್ಗದ ಕುಟುಂಬದವರು ಸಾಮಾನ್ಯವಾಗಿ ತಮ್ಮ ಪೋಷಕರು ಹೇಳಿದ ಕರಿಯರ್‌ ಆಯ್ಕೆ ಮಾಡುವುದು ಸಾಮಾನ್ಯ. ಆದರೆ ನಿಮ್ಮ ಡಿಗ್ರಿ ಪಕ್ಕಕ್ಕೆ ಸರಿಸಿ, ಪ್ರಬುದ್ಧತೆಯಿಂದ ನಿಮ್ಮ ಆಸಕ್ತಿಗೆ ತಕ್ಕಂತೆ ಕರಿಯರ್ ಫೀಲ್ಡ್‌ ಆಯ್ಕೆ ಮಾಡುವುದು ಸೂಕ್ತ.

ನಿರೀಕ್ಷೆಗಳು
ಮೊದಲನೇಯದು, ನೀವು ಸದಾ ನೆನಪಲ್ಲಿ ಇಡಬೇಕಾದ ಅಂಶವೆಂದರೆ, ಉದ್ಯೋಗಕ್ಕಾಗಿ ಯಾರಲ್ಲೂ ನಂಬಿಕೆ ಇಡಬೇಡಿ. ನಾನು ನಿನಗೆ ಸಹಾಯ ಮಾಡುತ್ತೇನೆ. ಡೋಂಟ್‌ವರಿ ನನ್ನಲ್ಲಿ ಸಾಕಷ್ಟು ಸೋರ್ಸ್‌ಗಳಿವೆ. ಜಸ್ಟ್‌ ನಿನ್ನ ರೆಸ್ಯೂಮ್‌ ಕಳಿಸು. ನಾನು ಕೆಲಸ ಕೊಡಿಸುತ್ತೇನೆ ಎಂಬುವವರನ್ನು ನಂಬದಿರಿ. ಅದು ಯಾರೇ ಆಗಿರಬಹುದು. ನಿಮ್ಮ ಕೆಲಸದ ಬಗ್ಗೆ ನೀವೆ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಿ.

ಆತ್ಮವಿಶ್ವಾಸ
ಪದವಿ ಮುಗಿದ ನಂತರದ ಸಮಯ ನಿಮ್ಮಲ್ಲಿ ನೀವು ಹೆಚ್ಚು ಆತ್ಮವಿಶ್ವಾಸ ತುಂಬಿಕೊಳ್ಳಬೇಕಾದುದು. ಕಾಲೇಜಿನಲ್ಲಿ ಲಾಸ್ಟ್‌ ಬೆಂಚಿನಲ್ಲಿ ಕುಳಿತು ಟೀಚರ್ ಇದ್ದಾಗಲೂ ನೀವು ಯಾವ ಕಾನ್ಫಿಡೆನ್ಸ್‌ನಿಂದ ತರಲೆ ಮಾಡುತ್ತೀರೋ ಅದೇ ಕಾನ್ಫಿಡೆನ್ಸ್‌ ಅನ್ನು ನೀವು ಉದ್ಯೋಗ ಹುಡುಕುವಾಗ, ಸಂದರ್ಶನ ಎದುರಿಸುವಾಗ ಹೊಂದಿರಬೇಕು. ಎಲ್ಲವೂ ಸಹ ಗೇಮ್ ಆಫ್‌ ಕಾನ್ಫಿಡೆನ್ಸ್‌.

ಪ್ರಬುದ್ಧತೆ
ನಿಮ್ಮಲ್ಲಿ ನೀವು ಈಗ ಪ್ರಬುದ್ಧತೆ ಕಾಪಾಡಿಕೊಳ್ಳಬೇಕಾದ ಸಮಯ ಮತ್ತು ತಾಳ್ಮೆಯನ್ನು ಹೊಂದಿರಬೇಕಾದ ಸಮಯ. ಕಾರಣ ನಿವೀಗ ಬದಲಾದ ಜೀವನ ಚಕ್ರದಲ್ಲಿ ಇರುತ್ತೀರಿ. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಕಂಪನಿಗಳಿಗೆ ನಿಮ್ಮ ರೆಸ್ಯೂಮ್ ಕಳುಹಿಸಿ.

ಅನ್ವೇಷಿಸಿ
ನೀವು ಹೆಚ್ಚು ತಿಳಿಯಬೇಕಾದ ಸಮಯವಿದು. ನಿಮ್ಮನ್ನು ನೀವು ಹೆಚ್ಚು ಅನ್ವೇಷಣೆಗೆ ಒಗ್ಗಿಸಿಕೊಳ್ಳಬೇಕು. ನೀವು ಓದಿದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚು ಕೆಲಸಗಳನ್ನು ಸರ್ಚ್‌ ಮಾಡಿ. ಸಂಬಳ ಎಷ್ಟು ನೀಡಿದರು ಪರವಾಗಿಲ್ಲ. ಆದರೆ ಸಂದರ್ಶನಕ್ಕೆ ಹೋಗುವುದನ್ನು ನಿಲ್ಲಿಸದಿರಿ.

ವಂಚಕರು
ಇಂದು ಉದ್ಯೋಗ ಮಾರುಕಟ್ಟೆಯಲ್ಲಿ ಸಾಕಷ್ಟು ಉದ್ಯೋಗ ಕೊಡಿಸುವ ಕನ್ಸಲ್‌ಟೆನ್ಸಿಗಳಿವೆ. ಆದರೆ ಇವುಗಳಲ್ಲಿ ಹಲವು ನಿಮ್ಮಿಂದ ಹಣ ಕೇಳುತ್ತವೆ. ಅಂತಹವರಿಗೆ ಹಣ ಕೊಡುವುದಿಲ್ಲ ಎಂದು ನೇರವಾಗಿ ಹೇಳಿ. ಅಲ್ಲದೇ ಅಂತಹ ವಂಚಕರಿಂದ ಕೆಲಸವನ್ನು ಪಡೆಯದಿರಿ. ಉದ್ಯೋಗ ಹುಡುಕುವಾಗ ಈ ವಂಚನೆಯ ಜಾಲದಲ್ಲಿ ಸಿಲುಕದಿರಿ.

";