ತಿಂಗಳಿಗೆ ಎಲ್ಲೋ ಒಂದು ಕಡೆ ಒಂದು ಅಥವಾ ಎರಡು ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆದ ಸುದ್ದಿಗಳನ್ನು ಇತ್ತೀಚಿನ ದಿನಗಳಲ್ಲಿ ನಾವು ನೋಡುತ್ತಲೇ ಇರುತ್ತೇವೆ ಆದರೂ ನಮ್ಮ ಅಜಾಗರೂಕತೆಯಿಂದ ಬ್ಲಾಸ್ಟ್ ಆಗುವ ಸಿಲಿಂಡರ್ ಮಾಡುವ ಅನಾಹುತಗಳನ್ನು ಕಲ್ಪಿಸಿಕೊಳ್ಳಲೂ ಕಷ್ಟವಾಗುತ್ತದೆ.
ಒಮ್ಮೆ ಸಿಲಿಂಡರ್ ಕಂಟ್ರೋಲ್ ಕಳೆದುಕೊಂಡರೆ ದಟ್ಟವಾದ ಬೆಂಕಿ ಯಾವ ಪ್ರಮಾಣಕ್ಕೆ ಬೇಕಾದರೂ ನಾಶ ಮಾಡಬಹುದು. ಇದಕ್ಕೆಲ್ಲ ಮೊದಲು ಆಗುವ ಲೀಕೇಜ್ ಕಾರಣವಾಗುತ್ತದೆ. ನಾವು ಗಮನಿಸದೇ ಹೋದರೆ ಈ ರೀತಿ ದೊಡ್ಡ ಪ್ರಮಾಣದಲ್ಲಿ ಅನಾಹುತ ಸಂಭವಿಸುತ್ತದೆ.
ಸಿಲಿಂಡರ್ ನಿಂದ ಸ್ಟವ್ ಗೆ ಬಂದಿರುವ ರಬ್ಬರ್ ಟ್ಯೂಬ್ ಆಗಾಗ ನೋಡಿಕೊಳ್ಳಿ. ರೆಗ್ಯುಲೇಟರ್ ಸರಿಯಾಗಿ ಫಿಟ್ ಆಗಿದೆಯಾ ಅಥವಾ ಲೂಸ್ ಫಿಟ್ಟಿಂಗ್ ಇದೆಯಾ ಎಂಬ ಬಗ್ಗೆ ನೋಡಿ. ಅಡುಗೆ ಮಾಡುವಾಗ ಒಂದು ವೇಳೆ ಬರ್ನರ್ ಮೇಲೆ ಚೆಲ್ಲಿದ ಆಹಾರ ಪದಾರ್ಥಗಳಿಂದ ಉರಿಯುತ್ತಿರುವ ಬೆಂಕಿ ಆರಿ ಹೋಗಿ ಲೀಕ್ ಆಗುತ್ತಿರ ಬಹುದು.
ಅದನ್ನು ಒಮ್ಮೆ ಚೆಕ್ ಮಾಡಿ ಈ ಎಲ್ಲ ಮಾಹಿತಿಯನ್ನು ಪಾಲೋ ಮಾಡಿ.