ಬಾಗಲಕೋಟೆ
ಸಾಧಿಸಬೇಕೆಂಬ ಛಲದೊಂದಿಗೆ ಕುಟುಂಬದ ಬೆಂಬಲವಿದ್ದರೆ ಮಹತ್ತರ ಸಾಧನೆ ಮಾಡಬಹುದು ಎಂಬುದಕ್ಕೆ ಬಾಗಲಕೋಟೆ ಜಿಲ್ಲೆಯ ಯುವತಿಯೊಬ್ಬರು ಇತರರಿಗೆ ಮಾದರಿಯಾಗಿದ್ದಾಳೆ.
ಜಿಲ್ಲೆಯ ಹುನಗುಂದ ತಾಲೂಕಿನ ಗಂಗೂರ ಗ್ರಾಮದ ಭಾಗ್ಯಶ್ರೀ ಮಾದರ ಅವರ ಕುಟುಂಬದ ಬೆಂಬಲ ಹಾಗೂ ಶ್ರಮಕ್ಕೆ ತಕ್ಕ ಫಲ ದೊರೆತಿದ್ದು ಸಿವಿಲ್ ಕೋರ್ಟ್ನ ನ್ಯಾಯಾಧೀಶ ಹುದ್ದೆಗೆ ಆಯ್ಕೆ ಆಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅನಕ್ಷರಸ್ಥ ಹಾಗೂ ೨೦ ವರ್ಷಕ್ಕೂ ಹೆಚ್ಚು ಕೂಲಿ ಕೆಲಸದಲ್ಲಿ ಕಾಲ ಕಳೆದ ಭಾಗ್ಯಶ್ರೀ ಅವರ ತಂದೆ ದುರಗಪ್ಪ ಮಾದರ ಹಾಗೂ ತಾಯಿ ಯಮನವ್ವ ಮಾದರ ಅವರಿಗೆ ೭ ಜನ ಮಕ್ಕಳಲ್ಲಿ ೫ನೆಯವರೇ ಸಿವಿಲ್ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾದ ಭಾಗ್ಯಶ್ರೀ. ೨೦೧೮ರಲ್ಲಿ ಕಾನೂನು ಪದವಿ ಪಡೆದು ಪಾಲಕರ ಕನಸನ್ನು ನನಸಾಗಿಸುವಲ್ಲಿ ಸತತ ಪ್ರಯತ್ನ ಹಾಗೂ ದೃಢ ಸಂಕಲ್ಪದಿಂದ ಮುನ್ನಡೆದಿದ್ದಾರೆ.
ಕಾನೂನು ಪದವಿ ನಂತರ ೨ ವರ್ಷ ಹುನಗುಂದ ಕೋರ್ಟ್ನಲ್ಲಿ ವಕೀಲಿ ವೃತ್ತಿ ಆರಂಭಿಸಿದ ಅವರು ೨೦೨೧ ರಿಂದ ೨೨ರವರೆಗೆ ಹೈಕೋರ್ಟ್ನಲ್ಲಿ ಗುತ್ತಿಗೆ ಆಧಾರದಲ್ಲಿ ಲಾ ಕ್ಲರ್ಕ್ ಕಂ. ರಿಸರ್ಚ್ ಅಸಿಸ್ಟಂಟ್ ಹುದ್ದೆ ನಿರ್ವಹಿಸಿದ್ದಾರೆ. ನ್ಯಾಯಾಧೀಶ ಹುದ್ದೆ ಆಯ್ಕೆಗಾಗಿ ಕೆಲಸದೊಂದಿಗೆ ಓದು ಅಸಾಧ್ಯ ಎನಿಸಿದಾಗ ಹುದ್ದೆ ತೊರೆದು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮುಂದುವರೆಸಿದ್ದಾರೆ.
೨೦೨೧ ಹಾಗೂ ೨೦೨೨ರಲ್ಲಿ ನಡೆದ ನ್ಯಾಯಾಧೀಶ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆ ಉತ್ತೀರ್ಣರಾದರೂ ಮೌಖಿಕ ಸಂದರ್ಶನದಲ್ಲಿ ಸ್ಪಲ್ಪದರಲ್ಲೇ ಅವಕಾಶ ಕಳೆದುಕೊಂಡಿದ್ದಾರೆ. ತಂದೆಯ ಮಹಾದಾಸೆ ಈಡೇರಿಸಬೇಕೆಂಬ ಸಂಕಲ್ಪದಿAದ ಸತತ ಪ್ರಯತ್ನ ಬಿಡದೆ ಸ್ಪಷ್ಟ ಗುರಿಯೊಂದಿಗೆ ಮುನ್ನುಗ್ಗಿದ್ದು ೨೦೨೩ರಲ್ಲಿ ನಡೆದ ಪ್ರಿಲಿಮಿನರಿ ಹಾಗೂ ಮುಖ್ಯ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದು ಮೌಖಿಕ ಸಂದರ್ಶನದಲ್ಲೂ ಉತ್ತಮ ಸಾಧನೆ ಮಾಡಿ ಇದೀಗ ಹೈಕೋರ್ಟ್ ಪ್ರಕಟಿಸಿದ ಸಿವಿಲ್ ನ್ಯಾಯಾಧೀಶ ಹುದ್ದೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಅತ್ಯಂತ ತಳ ಸಮುದಾಯದ ಮತ್ತು ಬಡತನದ ಹಿನ್ನೆಲೆಯಿಂದ ಬಂದ ಭಾಗ್ಯಶ್ರೀಗೆ ಪಶು ಪಕ್ಷಿಗಳೆಂದರೆ ಎಲ್ಲಿಲ್ಲದ ಪ್ರೀತಿ, ಮಮಕಾರ. ಪಶು ವೈದ್ಯಾಕಾರಿ ಆಗಬೇಕೆಂಬ ಕನಸು ಕಂಡವರು. ಆದರೆ ತಂದೆಯ ಆಸೆಯಂತೆ ಕಾನೂನು ಕ್ಷೇತ್ರ ಆಯ್ಕೆ ಮಾಡಿಕೊಂಡು ಅದರಲ್ಲಿ ಯಶಸ್ಸು ಕಂಡಿದ್ದಾರೆ.
ಪ್ರಾಥಮಿಕ ಶಾಲೆಯನ್ನು ಸ್ವಗ್ರಾಮ ಗಂಗೂರಿನ ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಶಿಕ್ಷಣ ಚಿತ್ತರಗಿಯ ಸರಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಅಮೀನಗಡದ ಸಂಗಮೇಶ್ವರ ಕಾಲೇಜ್‌ನಲ್ಲಿ ಪೂರೈಸಿದ್ದಾರೆ. ಪಪೂ ಶಿಕ್ಷಣ ಪೂರ್ಣಗೊಳ್ಳುತ್ತಿದ್ದಂತೆ ಪದವಿಗೆ ಹೋಗದೆ ನೇರವಾಗಿ ೨೦೧೩ರಲ್ಲಿ ಬಾಗಲಕೋಟೆಯ ಬವಿವ ಸಂಘದ ಎಸ್.ಸಿ.ನಂದಿಮಠ ಕಾನೂನು ಕಾಲೇಜ್‌ನಲ್ಲಿ ಎಲ್‌ಎಲ್‌ಬಿಗೆ ಪ್ರವೇಶ ಪಡೆದು ೨೦೧೮ರಲ್ಲಿ ಕಾನೂನು ಪದವಿ ಪಡೆದಿದ್ದಾರೆ.
ಭಾಗ್ಯಶ್ರೀ ಮೊದಲಿನಿಂದಲೂ ಸಾಮಾಜಿಕ ಕಳಕಳಿ ಹೊಂದಿದವರು. ಏನಾದರೂ ಸಾಧಿಸಬೇಕೆಂಬ ಅವರ ಛಲಕ್ಕೆ ಫಲ ದೊರೆತಿದೆ. ಇದೀಗ ಚಿಕ್ಕ ವಯಸ್ಸಲ್ಲೇ ಈ ಸಾಧನೆ ಮಾಡುವ ಮೂಲಕ ಜಿಲ್ಲಾದ್ಯಂತ ಪ್ರಂಶಸೆಗೆ ಪಾತ್ರರಾಗಿದ್ದಾರೆ.
ತಾನು ಕೂಲಿ ಮಾಡಿದರೂ ಚಿಂತೆಯಿಲ್ಲ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಹಠ ತೊಟ್ಟಿದ್ದೆ. ಅವರ ಶಿಕ್ಷಣಕ್ಕೆ ಬೆಂಗಾವಲಾಗಿ ನಿಂತಿದ್ದು ಮಕ್ಕಳ ಪ್ರಯತ್ನಕ್ಕೆ ಫಲ ದೊರೆತಿದೆ.
-ದುರಗಪ್ಪ ಮಾದರ, ಭಾಗ್ಯಶ್ರೀ ತಂದೆ.
—
ತಂದೆ, ತಾಯಿ ಹಾಗೂ ಸಹೋದರಿಯರ ಬೆಂಬಲದಿAದ ಸಾಧನೆ ಮಾಡಲು ಸಾಧ್ಯವಾಗಿದೆ. ಕಾನೂನು ಪದವಿ ಪಡೆಯಲು ಎಲ್ಲರೂ ಹುರುಪು ತುಂಬಿದರು. ಅದಕ್ಕೆ ತಕ್ಕಂತೆ ಓದು ಮುಂದುವರೆಸಿದೆ. ಇದೀಗ ನ್ಯಾಯಾÃಶ ಹುದ್ದೆಗೆ ಆಯ್ಕೆ ಆಗಿದ್ದು ಸಂತಸವಾಗಿದೆ.
-ಭಾಗ್ಯಶ್ರೀ ಮಾದರ. ಸಿವಿಲ್ ನ್ಯಾಯಾಧೀಶ ಹುದ್ದೆಗೆ ಅಯ್ಕೆ ಆದವರು.
ಭಾಗ್ಯಶ್ರೀ ಮಾದರ ಮೇಡಂ ರವರು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕು ಗಂಗೂರು ಗ್ರಾಮದವರು ನೂತನ ಸಿವಿಲ್ ನ್ಯಾಯದಿಶರಾಗಿ ಆಯ್ಕೆಯಾಗಿರುವ ಪ್ರಯುಕ್ತ ಭಾಗ್ಯಶ್ರೀ ಮೇಡಂರವರನ್ನು ಅವರ ಸ್ವಗ್ರಾಮ ಗಂಗೂರಿಗೆ ತೆರಳಿ ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ಕರ್ನಾಟಕ ರಾಜ್ಯ ಸಮಿತಿಯಿಂದ ಆದ್ಯ ವಚಣಕಾರ ಶ್ರೀ ಮಾದಾರ ಚನ್ನಯರವರ ಭಾವಚಿತ್ರದೊಂದಿಗೆ ಹಾಗೂ ಬಾಬೂಜಿ ಜೀವನ್ ಚರಿತ್ರೆಯ ಪುಸ್ತಕವನ್ನೂ ನೆನಪಿನ ಕಾಣಿಕೆಯಾಗಿ ಸಲ್ಲಿಸಿ ಗೌರವಿಸಲಾಯಿತು.
ಭಾಗ್ಯಶ್ರೀ ಮೇಡಂ ತಂದೆ ದುರಗಪ್ಪ ಮಾದರ ನಮ್ಮದು ದಲಿತ ಜಾತಿಯಲ್ಲಿ ತುಂಬಾ ಸಣ್ಣ ಪುಟ್ಟ ಗದ್ದಲಗಳು ನಿರಂತರ ನಡೆಯುತ್ತಿದ್ದವು. ಈ ತೊಂದರೆಗಳಲ್ಲಿ ಮಗಳ ಓದಿನ ಕಷ್ಟವನ್ನು ನೆನೆದು ನೋವು ಬರೀತ ಸಂತೋಷದ ಬಾಷ್ಪದೊಂದಿಗೆ ನೋವು ಹಂಚಿಕೊಂಡಿದ್ದು ನಮಗೆಲ್ಲ ಮನಕಲಕುವಂತಿತ್ತು….
ಈ ನಿಯೋಗದಲ್ಲಿ ಮುತ್ತಣ್ಣ ವೈ ಬೆಣ್ಣೂರ ರಾಜ್ಯ ಅಧ್ಯಕ್ಷರು, ದುರಗಪ್ಪ ಹೊಸಮನಿ ಮಾಜಿ ಗ್ರಾಪಂ ಅಧ್ಯಕ್ಷರು ಸುಳಿಬಾವಿ, ಸತ್ಯಪ್ಪ ದಳವಾಯಿ ಮಾಜಿ ಗ್ರಾಪಂ ಸದಸ್ಯರು, ಲಕ್ಷ್ಮಣ್ಣ ಚಂದ್ರಗಿರಿ ಉದ್ಯಮಿ ಇಲಕಲ್ಲ, ರವಿ ಎಂ ಹೊಸಮನಿ ಉದ್ಯಮಿ ಇಲಕಲ್ಲ, ಹಣಮಂತ ಚಿಮ್ಮಲಗಿ ಡಿಎಸ್‌ಎಸ್ ಜಿಲ್ಲಾಸಂಚಾಲಕರು, ಶಾಂತಕುಮಾರ ಮೂಕಿ ನ್ಯಾಯಾವಾದಿಗಳು ಹುನಗುಂದ, ಕನಕಪ್ಪ ಪೂಜಾರ ಪತ್ರಕರ್ತರು, ಸಂಗಣ್ಣ ಮಡ್ಡಿ ಭಗವತಿ, ಶ್ರೀ ಹಗೇದಾಳ ನಿವೃತ್ತ ನೌಕರರು, ಲಕ್ಷ್ಮಣ್ಣ ಕಮತಗಿ ಭಾಗವಹಿಸಿದ್ದರು.
ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾದ ಅಮೀನಗಡ ಸಮೀಪದ ಗಂಗೂರ ಗ್ರಾಮದ ಭಾಗ್ಯಶ್ರೀ ಮಾದರ ಅವರನ್ನು ಗ್ರಾಮದ ಅಂಜುಮನ್ ಇಸ್ಲಾಂ ಕಮಿಟಿ ಪರವಾಗಿ ಸನ್ಮಾನಿಸಲಾಯಿತು. ಕಮಿಟಿ ಅಧ್ಯಕ್ಷ ಉಸ್ಮಾನಗಣಿಸಾಬ ಕಮಾನಘರ, ಉಪಾಧ್ಯಕ್ಷ ಅಮೀರ ಖೈರವಾಡಗಿ, ಶಾನೂರ ಶಿರೂರ, ದಾವಲಸಾಬ ವಾಲಿಕಾರ, ಬಸೀರ ಕಮಾನಘರ, ರಾಜೇಸಾಬ ಖೈರವಾಡಗಿ, ಖಾಜೇಸಾಬ ಮುಜಾವರ, ಮಹಿಬೂಬ್ ವಾಲಿಕಾರ, ರಫೀಕ ಖೈರವಾಡಗಿ ಇತರರು ಇದ್ದರು.