This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsEntertainment NewsLocal NewsPolitics NewsState News

ಅಹಿಂಸೆಯಿಂದ ಸ್ವಾತಂತ್ರ್ಯ ಗಳಿಸಿದ ಏಕೈಕ ರಾಷ್ಟ್ರ ಭಾರತ:ತಿಮ್ಮಾಪೂರ

ಅಹಿಂಸೆಯಿಂದ ಸ್ವಾತಂತ್ರ್ಯ ಗಳಿಸಿದ ಏಕೈಕ ರಾಷ್ಟ್ರ ಭಾರತ:ತಿಮ್ಮಾಪೂರ

ಜಿಲ್ಲಾ ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರೊತ್ಸವ ಸಂಭ್ರಮ | ಸಾಧನೆಗೈದವರಿಗೆ ಸನ್ಮಾನ

ಬಾಗಲಕೋಟೆ:

ಜಗತ್ತಿನಲ್ಲಿ ಅಹಿಂಸೆಯಿಂದ ಸ್ವಾತಂತ್ರö್ಯಗಳಿಸಿಕೊAಡ ಏಕೈಕ ರಾಷ್ಟçವೆಂದರೆ ಅದು ಭಾರತ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡ ಸ್ವಾತಂತ್ರೊತ್ಸವದ ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಅವರು ಬ್ರಿಟೀಷರ ಕಪಿಮುಷ್ಠಿಯಿಂದ ಅವರ ದರ್ಪ, ದೌರ್ಜನ್ಯದಿಂದ ಭಾರತವನ್ನು ಸ್ವಾತಂತ್ರö್ಯಗೊಳಿಸಲು ಹೆಸರಿಸಲಾಗದ ಅಸಂಖ್ಯಾತ ತನ್ನ ಬಂಧು ಬಾಂಧವರು ಹೋರಾಡಿದ್ದಾರೆ. ಅಹಿಂಸೆ ಎಂಬ ಅಸ್ತçವನ್ನು ಬಳಸಿ ಭಾರತವನ್ನು ಬ್ರಟೀಷರ ಬಂಧಮುಕ್ತಗೊಳಿಸದ ರಾಷ್ಟçಪಿತ ಮಹಾತ್ಮಾ ಗಾಂಧೀಜಿಯವರ ಹೋರಾಟ ಇಡೀ ಜಗತ್ತಿಗೇ ಮಾದರಿಯಾಗಿದೆ ಎಂದರು.

ಕಳೆದ ವರ್ಷ ಬರದ ಛಾಯೆಯಲ್ಲಿದ್ದ ಬಾಗಲಕೋಟೆ ಜಿಲ್ಲೆಯು ಪ್ರಸಕ್ತ ಜುಲೈ ಮಾಹೆಯಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿಗಳಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿದ ಪರಿಣಾಮವಾಗಿ ತೀವ್ರ ಸ್ವರೂಪದ ಪ್ರವಾಹ ಪರಿಸ್ಥಿತಿ ಎದುರಿಸಲಾಯಿತು. ಜಿಲ್ಲಾಡಳಿತದ ಪೂರ್ವ ಸಿದ್ದತೆ ಹಾಗೂ ನೆರೆಯ ರಾಜ್ಯದೊಂದಿಗೆ ಸಮನ್ವಯದಿಂದಾಗಿ ಹೆಚ್ಚಿನ ಅನಾಹುತವಾಗದಂತೆ ತಡೆಯಲಾಗಿದೆ. ಪ್ರವಾಹದಿಂದಾಗಿ ಒಟ್ಟು 22 ಗ್ರಾಮಗಳು ಪ್ರವಾಹ ಪರಿಸ್ಥಿತಿಗೆ ಎದುರಿಸಿದ್ದು, 274 ಕುಟುಂಬಗಳ 1350 ಜನರನ್ನು ಸ್ಥಳಾಂತರಿಸಲಾಗಿದೆ. ಅದರಲ್ಲಿ 1350 ಜನ ಕಾಳಜಿ ಕೇಂದ್ರಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. 2541 ಜಾನುವಾರುಗಳನ್ನು ಸಹ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.

ಸಾರ್ವತ್ರಿಕ ಮೂಲ ಆದಾಯ ಎಂಬ ಪರಿಕಲ್ಪನೆಯಡಿ ಜಾರಿಗೆ ತರಲಾಗಿರುವ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಅರ್ಥ ತಂದ ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರತಿದಿನ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಕಳೆದ ಸಾಲಿನಲ್ಲಿ 2.42 ಲಕ್ಷ ದಿಂದ 2.98 ಲಕ್ಷಕ್ಕೆ ಏರಿಕೆಯಾಗಿದೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 225.05 ಕೋಟಿ ರೂ.ಗಳಷ್ಟು ಅರ್ಹ ಫಲಾನುಭವಿಗಳಿಗೆ ಜಮೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 4,20,188 ಜನ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 4.01 ಲಕ್ಷ ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಯುವನಿಧಿ ಯೋಜನೆಯಡಿ 7862ರ ಅಭ್ಯರ್ಥಿಗಳ ಪೈಕಿ 7764 ಜನ ಲಾಭ ಪಡೆಯುತ್ತಿದ್ದಾರೆ. ಕೃಷಿ ಭಾಗ್ಯ ಕಾರ್ಯಕ್ರಮದಡಿ ಪ್ರಸಕ್ತ ಸಾಲಿನಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಒಟ್ಟು 510 ಕೃಷಿ ಹೊಂಡಗಳ ಗುರಿ ಹೊಂದಲಾಗಿದೆ. ಬಾಗಲಕೋಟೆ ತೋಟಗಾರಿಕೆ ಬೆಳೆಗೆ ಪ್ರಸಿದ್ದಿಗೊಂಡಿದ್ದು, ದ್ರಾಕ್ಷಿ, ದಾಳಿಂಬೆ, ಬಾಳೆ, ಮೆಣಸಿನಕಾಯಿ ಉತ್ಪನ್ನಗಳಿಂದ ಪ್ರತಿವರ್ಷ 366 ಕೋಟಿಗೂ ಹೆಚ್ಚು ವಹಿವಾಟು ನಡೆಯುತ್ತಿದ್ದು, ಅಮೇರಿಕಾ, ಯುರೋಫ್, ಮಲೇಸಿಯಾ, ಶ್ರೀಲಂಕಾ ಮಾಲ್ಟಿವ್ಸ್ ಮತ್ತು ಇತರೆ ದೇಶಗಳಿಗೆ ಹಾಗೂ ವಿವಿಧ ರಾಜ್ಯಗಳಿಗೆ ರಪ್ತು ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 289986 ಫಲಾನುಭವಿಗಳು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಇದರ ಲಾಭ ಪಡೆಯುತ್ತಿದ್ದಾರೆ. ಜಲಜೀವನ್ ಮೀಷನ್ ಯೋಜನೆಯಡಿ ಈಗಾಗಲೇ ಜುಲೈ ಅಂತ್ಯದವರೆಗೆ 2.95 ಲಕ್ಷ ಮನೆಗಳಿಗೆ ನಲ್ಲಿ ನೀರು ಸಂಪರ್ಕ ನೀಡಲಾಗಿದೆ. ಮಹಾತ್ಮಾಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಇಲ್ಲಿಯವರೆಗೆ 20.55 ಲಕ್ಷ ಮಾನವದಿನ ಸೃಜನೆ ಮಾಡಿ 83.60 ಕೋಟಿ ರೂ. ಅನುದಾನ ಖರ್ಚು ಭರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪಥ ಸಂಚಲನ ಮಾಡಿದ ಪ್ರತಿಭಾನ್ವಿತ ಎಸ್.ಸಿ, ಎಸ್.ಟಿ ಬಾಲಕಿಯರ ಪ್ರೌಢಶಾಲೆ (ಪ್ರಥಿಮ), ಬಾಲಕಿಯರ ಸರಕಾರಿ ಪದವಿ ಪೂರ್ವ ಪ್ರೌಢಶಾಲಾ ವಿಭಾಗ (ದ್ವಿತೀಯ) ಹಾಗೂ ಕಸ್ತೂರಿಬಾ ಬಾಲಕಿಯರ ವಸತಿ ಶಾಲೆ (ತೃತೀಯ) ಸ್ಥಾನ ಪಡೆದುಕೊಂಡ ತಂಡಗಳಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಎಚ್.ವಾಯ್.ಮೇಟಿ, ರಾಜ್ಯ ವಿಧಾನಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿ.ಪಂ ಸಿಇಓ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಜಿ.ಪಂ ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ ಅಮರೇಶ ಪಮ್ಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.


ವಿವಿಧ ಗಣ್ಯರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶರಣಗೌಡ ಪಾಟೀ, ಅನಿತಾ ಚವ್ಹಾಣ (ಕ್ರೀಡೆ) ಅಂತಿಕಾ ಕೊಣ್ಣೂರ (ಶಿಕ್ಷಣ), ಬಾಬುರಾವ್ ಕುಲಕರ್ಣಿ (ಸಮಾಜ ಸೇವೆ), ಮಲ್ಲಪ್ಪ ಬೆಳಗಲ್ಲ, ಮಲ್ಲಪ್ಪ ರೋಣದ (ಭಾರತೀಯ ಸೇನೆ), ಬಸವನಗೌಡ ಪೊಲೀಸ್‌ಪಾಟೀಲ, ಗಂಗಪ್ಪ ತುಮ್ಮರಮಟ್ಟಿ (ಕೃಷಿ), ಅನಂತ ಬಬಲೇಶ್ವರ, ಸುನಂದ ಕಂದಗಲ್ಲ, ವೆಂಕಣ್ಣ ಮಾಶ್ಯಾಳ (ರಂಗಭೂಮಿ), ಮರಗವ್ವ ಜುನ್ನಪ್ಪನವರ (ಕಲಾ), ಉಮರಖಾನ್ ಚಪ್ಪರಬಂದ (ಶೈಕ್ಷಣಿಕ/ಸಮಾಜ), ಮೀನಾಕ್ಷಿ ನಡಕಟ್ಟಿನ (ಸಾಹಿತ್ಯ), ಸಮೀರ ರಫುಗಾರ, ಪರಶುರಾಮ ಪೇಟಕರ, ಮಂಜುನಾಥ ಕರಗಲ್ಲ (ಪತ್ರಿಕೋದ್ಯಮ) ಹಾಗೂ ಜಯಂತ ಬರಗಿ (ಛಾಯಾಗ್ರಹಣ) ಅವರನ್ನು ಸನ್ಮಾನಿಸಲಾಯಿತು.

";