This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsPolitics NewsState News

ಬಾಗಲಕೋಟೆಯಲ್ಲಿ ಬಲವರ್ಧನೆಗಾಗಿ ಭೀಮ ಸಮಾವೇಶ ಯಶಸ್ವಿ

ಬಾಗಲಕೋಟೆಯಲ್ಲಿ ಬಲವರ್ಧನೆಗಾಗಿ ಭೀಮ ಸಮಾವೇಶ ಯಶಸ್ವಿ

ಬಾಬಾಸಾಹೇಬ ಅಂಬೇಡ್ಕರ ಚಿಂತನೆಗಳು ಬಿಜೆಪಿಯ ಚಿಂತನೆಗಳು ಏಕರೂಪವಾಗಿವೆ

ನಾವು ಬಲಗೊಳ್ಳಲು ಬಿಜೆಪಿಯನ್ನು ಬಲಗೊಳಿಸಿ :ಚಲುವಾದಿ ನಾರಾಯಣಸ್ವಾಮಿ

ಬಾಗಲಕೋಟೆ: ಡಾ.ಬಿ.ಆರ್. ಅಂಬೇಡ್ಕರ ಅವರ ಚಿಂತನೆಗೆಳು ಹಾಗೂ ಬಿಜೆಪಿ ಪಕ್ಷ ಚಿಂತನೆಗಳು ಎರಡು ಏಕರೂಪ ಸಾಮಿತ್ಯವನ್ನು ಹೊಂದುತ್ತಿವೆ, ಈಗಾಗಿ ನಾವು ಬಲಗೊಳ್ಳಬೆಕಾದರೆ ಬಿಜೆಪಿ ಪಕ್ಷವನ್ನುಬಲಗೊಳ್ಳಿಸಬೆಕು,
ಬಿಜೆಪಿ ಪಕ್ಷದಿಂದ ಮಾತ್ರ ದಿನ ದಲಿತರಿಗೆ ನ್ಯಾಯ ಸಿಗಲು ಸಾದ್ಯ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ವಕ್ತಾರ ಚೆಲುವಾದಿ ನಾರಾಯಣಸ್ವಾಮಿ ಹೇಳಿದರು.

ಅವರು ನವನಗರದಲ್ಲಿನ ಭಾರತೀಯ ಜನತಾ ಪಕ್ಷದ ಕಾರ್ಯಾಯದ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಎಸ್ಸಿ ಮೋರ್ಚಾವತಿಯಿಂದ ಹಮ್ಮಿಕೊಂಡ ಬಲವರ್ಧನೆಗಾಗಿ ಭೀಮ ಸಮಾವೇಶ್ವನ್ನು ಉಧ್ಘಾಟಿಸಿ ಮಾತನಾಡಿದರು,

ದೇಶಕ್ಕೆ ಸ್ವಾತಂತ್ರ್ಯ ಬಂದು ಇಲ್ಲಿವರಗೂ ಕಾಂಗ್ರೇಸ್ಸ ಪಕ್ಷ ಅಂಬೇಡ್ಕರನ್ನು ನಡೆಸಿಕೊಂಡ ರೀತಿ, ಅವರನ್ನು ಬರಿ ಓಟಿಗಾಗಿ ಬಳಸಿಕೊಂಡಿದ್ದೆ ಹೆಚ್ಚು.ಡಾ. ಬಿ.ಆರ್,ಅಂಬೇಡ್ಕರ ಅವರ ಜನ್ಮಸ್ಥಳ, ಶಿಕ್ಷಣ ಪಡೆದ ಸ್ಥಳ,ಪರಿನಿರ್ಮಾಣ ಸ್ಥಳ,ಅವರ ದೀಕ್ಷಾಭೂಮಿ, ಚೆತ್ಯ ಭೂಮಿ ಈ ಐದು ಪವಿತ್ರ ಸ್ಥಳಗಳನ್ನು ಪಂಚತಿರ್ಥಕ್ಷೇತ್ರಗಳನ್ನಾಗಿ ಮಾಡಿದ್ದು . ಭಾರತಿ ಜನತಾ ಪಕ್ಷ ಹಾಗೈ ಪ್ರಧಾನಿ ನರೆಂದ್ರ ಮೋದಿಯವರು,

ಅಲ್ಲದೆ ನವೆಂಬರ 26ರನ್ನು ಸಂವಿಧಾನ ಸಮ್ಮಾನ ದಿವಸ್ ಎಂದು ಮೊದಲು ಆರಂಬಿಸಿದವರು 2010 ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೆಂದ್ರ ಮೋದಿ,ಸಂವಿಧಾನದ ಪ್ರತಿಯನ್ನು ಆನೆಯ ಮೇಲಿಟ್ಟು ಗೌರವ ಯಾತ್ರೆ ಮಾಡಿದವರು ಮೋದಿ, ಇಂದು ರಾಜ್ಯದಲ್ಲಿ ಸಿದ್ದರಾಮಯ್ಯ ಅದನ್ನೆ ಕಾಪಿ ಮಾಡುತ್ತಿದ್ದಾರೆ,

ಕರ್ನಾಟಕದಲ್ಲಿಯೂ ಕೂಡಾ ಡಾ.ಬಿ,ಆರ್ ಅಂಬೆಡ್ಕರ ಅವರು ಬೇಟಿ ನಿಡಿದ 7 ಜಿಲ್ಲೆಗಳ ಹತ್ತು ಸ್ಥಳಗಳನ್ನು ತಿರ್ಥಕ್ಷೇತ್ರಗಳನ್ನಾಗಿ ಮಾಡುವ ಕನಸು ಭಾರತೀಯ ಜನತಾ ಪಕ್ಷದ ಯೋಜನೆಯಲ್ಲಿದೆ,2019 ರಲ್ಲಿಯೆ ದೇಶದಲ್ಲೆ ಮೊದಲ ಬಾರಿಗೆ ಕರ್ನಾಟಕ ವಿಧಾನಮಂಡಲದಲ್ಲಿ ಸಂವಿಧಾನ ಕುರಿತು 1 ವಾರಗಳ ಸುರ್ಧಿರ್ಘ ಚರ್ಚೆ ನಡೆಸಿದ್ದು ಬಿಜೆಪಿ ಸರಕಾರದಲ್ಲಿ

ಒಟ್ಟಿನಲ್ಲೆ ಡಾ,ಬಿ.ಆರ್.ಅಂಬೇಡ್ಕರ ಅವರ ದೆಶದ ಚಿಂತನಾ ಶೈಲಿಯೂ ಹಾಗೂ ಬಿಜೆಪಿಯ ಶೈಲಿಗಳು ಎರಡು ಒಂದೆ ಆಗಿವೆ.ಆ ನಿಟ್ಟಿನಲ್ಲಿನಾವು ರಾಜ್ಯಾದ್ಯಂತ ಬೀಮ ಸಮಾವೇಶಗಳ ಮೂಲಕ ಸತ್ಯದ ಅರಿವಿನ ಮೂಲಕ ಜನರಲ್ಲಿ ಜಾಗೃತಿಮೂಡಿಸಲಾಗುತ್ತಿದೆ ಎಂದರು.

ಮಾಜಿ ಮಂತ್ರಿ ಬಿಜೆಪಿ ಉಪಾಧ್ಯಕ್ಷ ಎಸ್ ಮಹೇಶ ಮಾತನಾಡಿ ಕತ್ತೆ ನಿಂತರು ಕಾಂಗ್ರೆಸ್ಸ ಗೆಲ್ಲುತ್ತೆ ಎಂಬುದು ಈಗ ಸುಳ್ಳಾಗಿದೆ, ಜನ ವಿದ್ಯಾವಂತರಾಗಿದ್ದಾರೆ, ದಲಿತರು ಕಾಂಗ್ರಸ್ಸ ಸೇರುವುದು ಆತ್ಮಹತ್ಯ ಮಾಡಿಕೊಂಡಂತೆ, ಕಾಂಗ್ರೆಸ್ಸ ಒಂದು ಉರಿಯುವ ಮನೆ,ಅಲ್ಲಿ ಹೋದರೆ ಸುಟ್ಟು ಬೂದಿಯಾಗುತ್ತಿರಾ ಎಂದು ಅಂಬೇಡ್ಡರ ಅವರೆ ತಮ್ಮ ಪುಸ್ತಕದಲ್ಲಿ ಉಲ್ಲೆಖಿಸಿದ್ದಾರೆ,

1949 ರಿಂದ 2015 ವರೆಗೆ ಸಂವಿಧಾನ ಸಮರ್ಪಣೆಯಾದ ದಿನವನ್ನು ಕಾಂಗ್ರೆಸ್ಸಿನವರು ರಾಷ್ಟ್ರೀಯ ಕಾನೂನ ದಿನ ಅಂತ ಕರೆದಿದ್ದರು, ನರೇಂದ್ರಮೋದಿಯವರು ಅಧಿಕಾರಕ್ಕೆ ಬಂದ ತಕ್ಷಣ ಈ ರಾಷ್ಟೀಯ ಕಾನೂನ ದಿನವನ್ನು ಸಂವಿಧಾನ ದಿನ ಎಂದು ಘೋಷಣೆ ಮಾಡಿದರು,

ಅಲ್ಲಿಂದ ಸಂವಿಧಾನ ದಿನವಾಗಿ ದೆಶದಲ್ಲಿ ಜಾಗೃತಿ ಅಭಿಯಾನ ನಡೆಯುತ್ತಿದೆ, ಅದರ ಮುಂದಿವರೆದ ಬಾಗ ಕಾಂಗ್ರೇಸ್ಸಿನವರು ಈಗ ಮಾಡುತ್ತಿದ್ದಾರೆ,ಇವರಿಗೆ ಅಂಬೇಡ್ಕರ ನೆನಪಾಗಿದೆ ಓಟ ಬ್ಯಾಂಕಿಗಾಗಿ ಎಂದ ಅವರು ದಲಿತರಾಮಯ್ಯ : ಮಲ್ಲಿಕಾರ್ಜುನ ಕರ್ಗೇ ಅವರ ಮಲೆ ಕಾಲಿಟ್ಟು ತುಳಿಯುವವಾಗ ನಾನು ದಲಿತ ಕರ್ನಿ ಎಂದ, ಪರಮೇಶ್ವರ ಅವರ ಮೆಲೆ ಕಾಲಿಟ್ಟು ತುಳಿಯುವಾಗ ನಾನು ದಲಿತ ಕರ್ನಿ ಎಂದ, ಸಿದ್ದರಾಮಯ್ಯ ನಾನು ದಲಿತ ದಲಿತ ಎಂದು ಹೇಳಿ ಹೇಳಿ ದಲಿತಬಾಯಲ್ಲಿ ಕುರಬರ ಸಿದ್ದರಾಮಯ್ಯ ದಲಿತರಾಮಯ್ಯ ಆಗಿರುವುದು ವಿಪರ್ಯಾಸ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಸ್.ಜಿ,ಮಹದೇವಯ್ಯ ಇಬ್ಬರು ಸೇರಿ ಎಸ್ಸಿ.ಎಸ್ಟಿ ಮೀಸಲಿಟ್ಟ 34 ಸಾವರಿ ಕೋಟಿ ನಿಗದಿ ಮಾಡಿದ ಹಣದಲ್ಲಿ 11 ಸಾವಿರ ನೂರ ನಲವತ್ತು ಕೋಟಿ ರೂಗಳಷ್ಟು ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಕೊಟ್ಟಿದ್ದಾರೆ, ಮುಂದಿನ ಬಜೆಟ್‌ನಲ್ಲಿ ಆ ಹಣವನ್ನು ವಾಪಸ್ ಕೊಡಬೇಕು ಎಂದು ನಿರ್ದಾಕ್ಷಿಣ್ಯವಾಗಿ ಎಂದರು.

ಪ್ರಸಾವಿಕವಾಗಿ ಮಾತನಾಡಿ ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಕೇಂದ್ರ ಕೌತಲಾ ಬಿಜೆಪಿಯ ಯೋಜನೆಗಳು ದಲಿತರನ್ನೂ ಒಳಗೊಂಡಂತೆ ಬಡವರ ನಿತ್ಯ ಜೀವನ ಶಕ್ತಿ ನಿಡಿದೆ. ಸ್ಟಾಂಡಪ್ ಇಂಡಿಯಾ,ಜಲ್ ಜೀವನಮೀಷನ,ಉಜ್ವಲ್, ಒನ್,ನೇಷನ್,ಒನ್ ರೇ಼ಷನ್, ಪ್ರಧಾನಿ ಸ್ವನಿಧಿ ಯೋಜನೆ, ಆಯುಸ್ಮಾನಭಾರತ,ಜನ ಔಷಧಿ.ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆ, ದೇಶಾದ್ಯಂತ ೧೨ಕೋಟಿ ಶೌಚಾಲಯ ನಿರ್ಮಾಣ, ಕರ್ನಾಟಕದಲ್ಲಿ ಪರಿಶಿಷ್ಟ ಮೀಸಲಾತಿಯ ಪ್ರಮಾಣ ಶೇ15 ರಿಂದ 17ಕ್ಕೆ ಏರಿಕೆ.ಟಿಪ್ಪೂ ಹಾಗೂ ಹೈದರಲಿ ಸೈನ್ನಯವನ್ನು ಸದೆಬಡೆದ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆ ಸೇರಿದಂತೆ ಅನೇಕ ಯೋಜನೆಗಳು ದಲಿತರ ಪರವಾಗಿವೆ.

ಬಿಜೆಪಿ ಬಗ್ಗೆ ಇರುವ ಗೊಂದಲಗಳ ಅರಿವೂ ಮೂಡಿಸಿ ಮತ್ತೆ ಬಜೆಪಿಯನ್ನುಬಲಗೊಳಿಸುವ ನಿಟ್ಟಿನಲ್ಲಿ ಭೀಮಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಎಸ್ಸಿಮೋರ್ಚಾ ಜಿಲ್ಲಾಧ್ಯಕ್ಷ ಪ್ರಕಾಶ ಕಾಳೆ, ಬಸವರಾಜ ಯಂಕಂಚಿ, ಮಹೇಶ , ಗೀತಾ ಕುಗನೂರ.ಡಾ,ಕ್ರಾಂತಿಕಿರಣ,
ಡಾ.ಸ್ಪಂದನ ವಿಜಯಪುರ, ಶಿವಾನಂದ ಟವಳಿ ವೇದಿಕೆ ಮೆಲೆ ಉಪಸ್ಥಿತರಿದ್ದರು.

ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಮುಖಂಡರು,ಕಾರ್ಯಕರ್ತರು ಭಾಗವಹಸಿದ್ದರು.

ಬಾಕ್ಸ್:
*ದಲಿತರಾಮಯ್ಯ : ಮಲ್ಲಿಕಾರ್ಜುನ ಕರ್ಗೇ ಅವರ ಮಲೆ ಕಾಲಿಟ್ಟು ತುಳಿಯುವವಾಗ ನಾನು ದಲಿತ ಕರ್ನಿ ಎಂದ, ಪರಮೇಶ್ವರ ಅವರ ಮೆಲೆ ಕಾಲಿಟ್ಟು ತುಳಿಯುವಾಗ ನಾನು ದಲಿತ ಕರ್ನಿ ಎಂದ, ಸಿದ್ದರಾಮಯ್ಯ ನಾನು ದಲಿತ ದಲಿತ ಎಂದು ಹೇಳಿ ಹೇಳಿ ದಲಿತಬಾಯಲ್ಲಿ ಕುರಬರ ಸಿದ್ದರಾಮಯ್ಯ ದಲಿತರಾಮಯ್ಯ ಆಗಿರುವುದು ವಿಪರ್ಯಾಸ*. ಎಸ್, ಮಹೇಶ ಮಾಜಿ ಮಂತ್ರಿ

";