This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಚರಂತಿಮಠರಿಂದ ಭೂಮಿ ಪೂಜೆ

ನಿಮ್ಮ ಸುದ್ದಿ ಬಾಗಲಕೋಟೆ

ಬಾಗಲಕೋಟೆ ಗ್ರಾಮದ ಜನರ ಬೇಡಿಕೆಯಂತೆ ವಿಧಾನಸಭಾ ಮತಕ್ಷೇತ್ರದಲ್ಲಿ ಸಾಕಷ್ಟು ದೇವಸ್ಥಾನಗಳ ಜೀರ್ಣೋದ್ದಾರ ಹಾಗೂ ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ, ಜೋತಗೆ ಗ್ರಾಮಕ್ಕೆ ಬೇಕಾಗುವ ಮೂಲ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಶಾಸಕ ಡಾ, ವೀರಣ್ಣ ಚರಂತಿಮಠ ಹೇಳಿದರು,

ಅವರು ಬಾಗಲಕೋಟೆ ನವನಗರದ ೧೨ನೇ ಸೆಕ್ಟರ್ ನಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ೫ ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಸಮುದಾಯ ಭವನ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು, ಮತಕ್ಷೇತ್ರದ ಪ್ರತಿ ಗ್ರಾಮಗಳ ಜನರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ಅಭಿವೃದ್ಧಿ ಕೆಲಸಗಳ ಮೂಲಕ ಗ್ರಾಮಕ್ಕೆ ಬೇಕಾಗುವ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

ನಂತರ ನವನಗರದ ೧೬ ನೇ ಸೇಕ್ಟರ್ ನಲ್ಲಿ ಚಂದ್ರಾದೇವಿ ಭೋವಿ(ವಡ್ಡರ) ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಉಗ್ರಾಣ ಕೊಠಡಿ ನಿರ್ಮಾಣ ಕಾಮಗಾರಿ,ನವನಗರದ ೫ ಲಕ್ಷ ರೂ ವೆಚ್ಚದಲ್ಲಿ ಹೇಮ ವೇಮ ಸಂಸ್ಥೆಯ ಸಭಾ ಭವನ ನಿರ್ಮಾಣದ ಭೂಮಿ ಪೂಜೆ,೬ ಲಕ್ಷ ರೂ ವೆಚ್ಚದಲ್ಲಿವಿದ್ಯಾಗಿರಿಯ ಶ್ರೀ ಕಾಳಿಕಾಂಬಾ ದೇವಸ್ಥಾನ ಜೀರ್ಣೋದ್ದಾರ ಕಾಮಗಾರಿಯ ಭೂಮಿ ಪೂಜೆ ಮಾಡಿದರು. ತದನಂತರ೩ ಲಕ್ಷ ರೂ. ವೆಚ್ಚದಲ್ಲಿ ನಂದಿಶ್ವರ ಬಡಾವಣೆಯಲ್ಲಿ ಶ್ರೀ ಮಳೆರಾಜೇಂದ್ರಸ್ವಾಮಿ ಮಠ ಜೀರ್ಣೋದ್ದಾರ ಕಾಮಗಾರಿಗೆ ಚಾಲನೆ ನೀಡಿದರು.

ನಂತರದಲ್ಲಿ ಗ್ರಾಮೀಣ ಭಾಗದಲ್ಲಿ ಮುಳ್ಳೂರ ಗ್ರಾಮಕ್ಕೆ ತೆರಳಿ ೫ ಲಕ್ಷ ರೂ ವೆಚ್ಚದಲ್ಲಿ ದ್ಯಾಮವ್ವದೇವಿ ದೇವಸ್ಥಾನ ಜೀರ್ಣೋದ್ದಾರ ಕಾಮಗಾರಿ, ಕಳ್ಳಿಗುಡ್ಡ ಗ್ರಾಮದಲ್ಲಿ ೨೦ ಲಕ್ಷ ರೂ ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿ, ಹಾಗೂ ಹನುಮಾನ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಯ ಭೂಮಿ ಪೂಜೆ ಮಾಡಿದರು. ನಿಂಬಲಗುಂದಿ ಗ್ರಾಮದಲ್ಲಿ ೫ ಲಕ್ಷ ರೂ. ವೆಚ್ಚದಲ್ಲಿ ಬಸವೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿ,ಐಹೊಳೆಯಲ್ಲಿ ೫ ಲಕ್ಷ ರೂ ವೆಚ್ದಲ್ಲಿ ಬರಮಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ, ೩ ಲಕ್ಷ ರೂ ವೆಚ್ಚದಲ್ಲಿ ರಾಮಲಿಂಗೇಶ್ವರ ದೇವಸ್ಥಾನ, ೨ಲಕ್ಷ ರೂ ವೆಚ್ಚದಲ್ಲಿ ಪಾಂಡುರಂಗ ದೇವಸ್ಥಾನದ ಭೂಮಿ ಪೂಜೆ ಮಾಡಿದರು.
ಬೇನಾಳ ಗ್ರಾಮದಲಿ೭೦.೦೪ ಲಕ್ಷ ರೂ ವೆಚ್ಚದ ಜಲಜೀವನ ಮಿಶನ್ ಯೋಜನೆಯಡಿ ಮನೆ ಮನೆಗೆ ನಳದ ಸಂಪರ್ಕ ಕಾಮಗಾರಿಗಳಿಗೆ ಚಾಲನೆ ನೀಡಿದರು.ಇನಾಂ ಬೂದಿಹಾಳ ಗ್ರಾಮದಲ್ಲಿ ೯೯.೫೦ ಲಕ್ಷ ರೂ ವೆಚ್ಚದ ಜಲಜೀವನ ಮಿಶನ್ ಯೋಜನೆಯಡಿ ಮನೆ ಮನೆಗೆ ನಳದ ಸಂಪರ್ಕ ಭೂಮಿ ಪೂಜೆ,ಹಿರೇಮಾಗಿಯಲ್ಲಿ ೧೧೪.೦೦ ಲಕ್ಷ ರಊ ವೆಚ್ಚದಲ್ಲಿ ಜಲಜೀವನ ಮಿಶನ್ ಯೋಜನೆಯಡಿ ಮನೆ ಮನೆಗೆ ನಳದ ಸಂಪರ್ಕ ಭೂಮಿ ಪೂಜೆಯನ್ನು ಶಾಸಕ ಡಾ, ವೀರಣ್ಣ ಚರಂತಿಮಠ ನೆರವೇರಿಸಿದರು.

ಭೂಮಿ ಪೂಜೆಯಲ್ಲಿ ಉಪಾಧ್ಯಕ್ಷ ಅಶೋಕ ಲಿಂಬಾವಳಿ,ರಾಜು ರೇವಣಕರ, ಎನ್,ವಿ ಕಮ್ಮಾರ, ದೇವೆಂದ್ರ ಅಗಳತಕಟ್ಟಿ, ಮಹೇಶ ಕಕರೆಡ್ಡಿ,ಗುರುರಾಜ ಅಗಳತಕಟ್ಟಿ, ಮಲ್ಲಪ್ಪ ಪತ್ತಾರ,ಬಸವರಾಜ ಬಡಿಗೇರ, ಮಲ್ಲೇಶ ವೈಜಾಪುರ, ನಿಂಬಲಗುAದಿಯ ಮಾನಪ್ಪ ಮುತ್ತು ಸೀಮಿಕೇರಿ, ವಿಜಯ ಶಿರೂರ ಯಮನಪ್ಪ ಸುಂಕದ, ಮುತ್ತು ಸುಂಕದ, ಎಮ್,ಟಿ, ಚಿಗರನ್ನವರ, ಸಂಗಪ್ಪ ಬೇವಿನಮಟ್ಟಿ, ರಮೇಶ ಪತ್ತಾರ,ಲಕ್ಷö್ಮಣ ತಳವಾರ,ಯಮನೂರ ಮಡಿಕೇರಿ, ಹಿರೆಮಾಗಿ ನಾಗಣ್ಣ ಬಾದವಾಡಗಿ,ಸಿದ್ದಪ್ಪ ರಾಠೋಡ.ಮುಳ್ಳುರನಿ ಬಸವರಾಜ ಬೋಳಿಶೇಟ್ಟರ, ಸಿದ್ದಪ್ಪ ಹಸಭಿ., ಬೇವಿನಾಳದ ಮುದಿಯಪ್ಪ ಮೇಟಿ, ಗ್ರಾಮದ ಮುಖಂಡರು ಬಾಗವಹಿಸಿದ್ದರು.

Nimma Suddi
";