ಸುತಗುಂಡಾರ ಪ್ರಾ.ಆ.ಕೇಂದ್ರವಿನ್ನೂ ಸಮುದಾಯದ ಆರೋಗ್ಯ ಕೇಂದ್ರ*
ಬಾಗಲಕೋಟೆ
ಮತಕ್ಷೇತ್ರದ ಸುತಗುಂಡಾರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30ಹಾಸಿಗೆಯುಳ್ಳ ಸುಸಜ್ಜಿತ 12.40 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಶಾಸಕ ಡಾ, ವೀರಣ್ಣ ಚರಂತಿಮಠ ಹೇಳಿದರು.
ಅವರು ಬಾಗಲಕೋಟೆ ತಾಲೂಕಿ ಸುತಗುಂಡಾರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ,ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ
ಎಸ್.ಡಿ.ಪಿ ಯೋಜನೆಯ ಅನುದಾನದಲ್ಲಿ ನಿರ್ಮಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸುವ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಬಹುದಿನದ ಬೇಡಿಕೆಯಾಗಿದ್ದ ಸಮುದಾಯ ಆರೋಗ್ಯ ಕೇಂದ್ರ 30 ಹಾಸಿಗೆಯುಳ್ಳ ಚಿಕ್ಕಮಕ್ಕಳ ತಜ್ಞ ವೈದ್ಯರು ಸೇರಿದಂತೆ 5 ಜನ ವೈದ್ಯರು,ಸಿಬ್ಬಂದಿ,ಹಾಗೂ ಶಸ್ತ್ರ ಚಿಕಿತ್ಸೆ ಘಟಕಗಳು ಸೇರಿದಂತೆ ಸುಸಜ್ಜಿತ ವಾದ ಆರೋಗ್ಯ ಕೇಂದ್ರವಾಗಲಿದೆ.ಇದು ಸುತ್ತಮುತ್ತಲಿನ ಗ್ತಾಮದ ಜನರಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೇಶಕರಾದ ಡಾ.ಅನಂತ ದೇಸಾಯಿ ಪ್ರಸ್ತಾವಿಕ ವಾಗಿ ಮಾತನಾಡಿ ಬಾಗಲಕೋಟೆ ಜಿಲ್ಲೆಯಲ್ಲಿಯೆ ಮೇಲ್ದರ್ಜೆಗೆ ಏರಿರುವಏಕೈಕ ಪ್ರಾಥಮಿಕ ಆರೋಗ್ಯ ಕೇಂದ್ರ ಇದಾಗಿದೆ ಎಂದರು,
ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಡಿ.ಬಿ ಪಟ್ಟಶೆಟ್ಡಿ, ಆಡಳತಾಧಿಕಾರಿಯಾದಡಾ.ವೀಣಾ ಶೇಲೂಡಿ. ಬಿಜೆಪಿ ಗ್ರಾಮೀಣ ಮಂಡಲ ಅದ್ಯಕ್ಷ ಸುರೇಶ್ಕೋ ಣ್ಣುರ, ಎಮ್,ಎಸ್,ಪಾಟೀಲ, ಗೋವನ್ ದೇಸಾಯಿ, ಮತ್ತು ಕುಂಚನೂರ,ಪಕ್ಷೇಪ್ಪ ಉಳ್ಳಾಗಡ್ಡಿ, ಶ್ರೀ ಶೈಲ ನರಸಗೊಂಡ,ಯಲಗೂರೇಶ ಕಟ್ಟಿಮನಿ,ಹೊಳಬಸು ಶೆಟ್ಟರ, ಸುವರ್ಣ ಅಂಗಡಿ, ಆರೋಗ್ಯ ಅಧಿಕಾರಿಗಳು ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಇದ್ದರು.