This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsPolitics NewsState News

250 ಬೆಡ್‌ಗಳ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದ ಭೂಮಿಪೂಜೆ

250 ಬೆಡ್‌ಗಳ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದ ಭೂಮಿಪೂಜೆ

250 ಬೆಡ್‌ಗಳ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದ ಭೂಮಿಪೂಜೆ
ವಿಜಯಪುರ: ಆಧ್ಯಾತ್ಮಿಕ ನಗರವಾದ ವಿಜಯಪುರದ ಆರೋಗ್ಯ ಕ್ಷೇತ್ರದಲ್ಲಿ ಎಲ್ಲ ರೀತಿಯ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದವರು ಬಹಳ ಜನರಿದ್ದಾರೆ. ಎಲ್ಲರೂ ಮಾಡಿದ್ದನ್ನು ಮಾಡುವ ಯಾವುದರ ಅವಶ್ಯಕತೆ ಈ ನಗರಕ್ಕಿದೆ ಎನ್ನುವುದನ್ನು ಅರಿತುಕೊಂಡಾಗ ಮಾತ್ರ ನಿಜವಾಗಲೂ ಸಾರ್ವಜನಿಕರಿಗೆ ನೆರವು ನೀಡುವುದಕ್ಕೆ ಸಾಧ್ಯವಾಗುತ್ತದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ 250 ಬೆಡ್‌ಗಳ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ ಹಾಗೂ ಉಚಿತ ಡಯಾಲಿಸಿಸ್ ಘಟಕದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ಇಂದು 250 ಬೆಡ್‌ಗಳ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಕೇವಲ ನನ್ನೊಬ್ಬನಿಂದಲೇ ಎಲ್ಲವೂ ಆಗುತ್ತದೆ ಎಂದುಕೊಂಡರೆ ಮೂರ್ಖತನವಾಗುತ್ತದೆ. ನನ್ನ ಜೊತೆಗಾರರೆಲ್ಲರೂ ಒಟ್ಟಿಗೆ ಹೆಜ್ಜೆ ಹಾಕಿದಾಗ ಮಾತ್ರ ಇಂಥಹ ಮಹತ್ತರ ಕಾರ್ಯಗಳನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಸಿದ್ಧೇಶ್ವರ ಲೋಕಕಲ್ಯಾಣ ಚಾರಿಟೇಬಲ್ ಟ್ರಸ್ಟ್‌ದಿಂದ ನಿಜಕ್ಕೂ ಜನರಿಗೆ ಅಗತ್ಯವಿರುವ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡುತ್ತಿರುವುದು ಹೆಮ್ಮೆಯ ವಿಷಯ. ಸಿದ್ಧೇಶ್ವರ ಸಂಸ್ಥೆ ಚಾರಿಟಿ ಡಯಾಲಿಸಿಸ್ ಸೇವೆಯನ್ನು ಪ್ರಾರಂಭಿಸುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಕಾಲಿಟ್ಟು ನಗರಕ್ಕೆ ಅತ್ಯಾವಶ್ಯಕ ಸೇವೆಯನ್ನು ಒದಗಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದರು.
ನಮ್ಮ ಸಿದ್ಧಸಿರಿ ಸೌಹಾರ್ದವನ್ನು ಕರ್ನಾಟಕದ ನಂಬರ್ ಒನ್ ಸೌಹಾರ್ದವನ್ನಾಗಿ ನಿರ್ಮಾಣ ಮಾಡಿದ್ದೇವೆ. ಅದೇ ರೀತಿ ಈ ಆಸ್ಪತ್ರೆಯ ಮೂಲಕ ಹತ್ತಾರು ಕನಸುಗಳನ್ನು ಸಾಕಾರಗೊಳಿಸಿಕೊಳ್ಳುತ್ತ ವಿಜಯಪುರ ನಗರವನ್ನು ಶಿಕ್ಷಣ, ಆರೋಗ್ಯ ಹಾಗೂ ಸಹಕಾರಿ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಅಭಿವದ್ಧಿ ಪರ್ವಕ್ಕೆ ನಾಂದಿ ಹಾಡುವ ಮೂಲಕ ಒಂದು ಮಾದರಿಯ ನಗರವನ್ನಾಗಿ ಮಾಡುವುದಕ್ಕೆ ವಿಜಯಪುರ ನಗರದ ಜನತೆ ಸಹಕಾರ ನೀಡಬೇಕು ಎಂದರು.
ಸಿದ್ಧೇಶ್ವರ ಸಂಸ್ಥೆ ಉಪಾಧ್ಯಕ್ಷ ಸಂಗು ಸಜ್ಜನ ಮಾತನಾಡಿದರು. ಸಿದ್ಧೇಶ್ವರ ಸಂಸ್ಥೆಯ ಚೇರಮನ್ ಬಸಲಿಂಗಯ್ಯ ಹಿರೇಮಠ, ಜಿಲ್ಲಾ ಶಸಚಿಕಿತ್ಸಕ ಡಾ.ಲಕ್ಕಣ್ಣವರ, ಶೈಲಜಾ ಬಸನಗೌಡ ಪಾಟೀಲ್ ಯತ್ನಾಳ, ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರಣ ಮಳಖೇಡ್ಕರ್, ಭವಾನಿ, ವಿದ್ಯಾಶ್ರೀ, ಮಂಜುನಾಥ ಜುನಗೊಂಡ ಇತರರಿದ್ದರು.

Nimma Suddi
";