This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

State News

ಟ್ರೋಲಿಗರಿಗೆ ಖಡಕ್ ಎಚ್ಚರಿಕೆ ನೀಡಿದ ಬಿಗ್​ಬಾಸ್ ಖ್ಯಾತಿಯ ನಟ ವಿನಯ್ ಗೌಡ, ಟ್ರೋಲ್​ಗೆ ಗುರಿಯಾಗಿದ್ದ ಅನು ಬೆಂಬಲಕ್ಕೆ ’ಆನೆ

ಟ್ರೋಲಿಗರಿಗೆ ಖಡಕ್ ಎಚ್ಚರಿಕೆ ನೀಡಿದ ಬಿಗ್​ಬಾಸ್ ಖ್ಯಾತಿಯ ನಟ ವಿನಯ್ ಗೌಡ, ಟ್ರೋಲ್​ಗೆ ಗುರಿಯಾಗಿದ್ದ ಅನು ಬೆಂಬಲಕ್ಕೆ ’ಆನೆ

ಸಮಾಜಿಕ ಜಾಲತಾಣಕ್ಕೆ ಅಂಟಿದ ಪಿಡುಗು ಈ ಟ್ರೋಲಿಂಗ್ ಅಥವಾ ನಿಂದನೆ.ಈ ಪಿಡುಗೆಗೆ ಹೆಚ್ಚು ಗುರಿಯಾಗುತ್ತಿರುವವರು ಮಹಿಳೆಯರೇ. ಅವಾಚ್ಯ ಶಬ್ದಗಳಿಂದ ನಿಂದಿಸುವುದು, ವ್ಯಂಗ್ಯ ಮಾಡುವುದು, ಚಿತ್ರಗಳನ್ನು, ವಿಡಿಯೋಗಳನ್ನು ಕದ್ದು ತಿರುಚಿ ಹರಿ ಬಿಡುವುದು, ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಹೀಗೆ ಹಲವು ಕೆಟ್ಟ ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರು ಎದುರಿಸುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ನಟಿಯರು, ಇನ್​ಸ್ಟಾ ಮಾಡೆಲ್​ಗಳಂತೂ ನಿಂದನೆ, ಅಶ್ಲೀಲ ಪದಗಳನ್ನು ಪ್ರತಿನಿತ್ಯ ಎದುರಿಸುತ್ತಿದ್ದು, ನಟಿಯರಷ್ಟೆ ಅಲ್ಲದೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವವರನ್ನೂ ಸಹ ಈ ಪಿಡುಗು ಬಿಟ್ಟಿಲ್ಲ. ಸರ್ಕಾರಿ ಶಾಲೆಗಳಿಗೆ ಬಣ್ಣ ಹಚ್ಚುವುದು ಸೇರಿದಂತೆ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಾ ಬರುತ್ತಿರುವ ಯುವತಿ ಅನು ಅವರು ಇತ್ತೀಚೆಗೆ ತೀವ್ರ ಟ್ರೋಲಿಂಗ್ ಎದುರಿಸಿದ್ದರು. ಟ್ರೋಲಿಂಗ್​ನಿಂದಾಗಿ ಹತಾಷರಾಗಿ ಕಣ್ಣೀರು ಹಾಕುತ್ತಾ ವಿಡಿಯೋ ಒಂದನ್ನು ಸಹ ಪ್ರಕಟಿಸಿದ್ದರು.

ಇದೀಗ ಅವರ ಬೆಂಬಲವಾಗಿ ಬಿಗ್​ಬಾಸ್ ಖ್ಯಾತಿಯ ನಟ ವಿನಯ್ ಗೌಡ ನಿಂತಿದ್ದು, ಅನು (ಅನು ಅಕ್ಕ) ಅವರಿಗೆ ಬೆಂಬಲ ನೀಡಿ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಪ್ರಕಟಿಸಿರುವ ವಿನಯ್ ಗೌಡ, ‘ಅಕ್ಕ ಎಂಬುವರು ಅಪ್​ಲೋಡ್ ಮಾಡಿರುವ ವಿಡಿಯೋ ನೋಡಿ ಬಹಳ ಬೇಸರವಾಯ್ತು. ಅವರು ಸ್ವಂತ ಹಣ ಖರ್ಚು ಮಾಡಿ ಸಮಾಜ ಸೇವೆ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಉಳಿವಿಗೆ ಪ್ರಯತ್ನ ಮಾಡುತ್ತಿದ್ದಾರೆ. ಅಂಥಹವರನ್ನು ನಿಂದಿಸುತ್ತಿರುವವರು ಎಂಥಹಾ ಕೆಟ್ಟ ಜನ ಇರಬಹುದು. ನಕಲಿ ಐಡಿಗಳನ್ನು ಇಟ್ಟುಕೊಂಡು ಕಮೆಂಟ್ ಮಾಡುತ್ತಿರುತ್ತಾರೆ, ಅದರಿಂದ ನಿಮಗೆ ಏನು ಸಿಗುತ್ತದೆ? ನೀವು ಮಾಡುತ್ತಿರುವ ಕೆಲಸ ನಿಮಗೇ ಇಷ್ಟವಾಗುತ್ತದೆಯೇ? ಒಮ್ಮೆ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಿ’ ಎಂದಿದ್ದಾರೆ ವಿನಯ್.

ನಿಮ್ಮ ಮನೆಯಲ್ಲಿಯೂ ಅಕ್ಕ, ತಂಗಿಯರು ಇರುತ್ತಾರೆ. ನಿಮ್ಮ ಕುಟುಂಬದ ಹೆಣ್ಣು ಮಕ್ಕಳಿಗೆ, ತಾಯಿಗೆ ಅದೇ ಪದಗಳನ್ನು ಬಳಸಿ ನೋಡಿ. ನಿಮ್ಮ ಕೈಯಲ್ಲಿ ಅದು ಸಾಧ್ಯವಾ? ಪಾಪ ಆ ಯುವತಿ ಅವರಿಗೆ ಆರೋಗ್ಯ ಸರಿಯಿಲ್ಲ ಎಂದರೂ ಇಷ್ಟೆಲ್ಲ ಕೆಲಸ ಮಾಡುತ್ತಿದ್ದಾರೆ. ಪಾಪ ಸಾಲ ಮಾಡಿ ಸಮಾಜ ಸೇವೆ ಮಾಡುತ್ತಿದ್ದಾರೆ. ಎಷ್ಟೋ ಒಳ್ಳೆಯ ಟ್ರೋಲ್, ಮೀಮ್​ ಪೇಜ್​ಗಳಿವೆ ಅವನ್ನು ನೋಡಿ ಕಲಿತುಕೊಳ್ಳಿ. ಅವರು ಒಂದು ಮೀಮ್ ಹಾಕಿದರೆ ಅದರಲ್ಲೊಂದು ಪಾಸಿಟಿವಿಟಿ ಇರುತ್ತದೆ. ದಯವಿಟ್ಟು ಅಂಥಹವರನ್ನು ನೋಡಿ ಕಲಿತುಕೊಳ್ಳಿ’ ಎಂದಿದ್ದಾರೆ.ಮುಂದೆ ಸೈಬರ್ ಕ್ರೈಂಗೆ ದೂರು ಹೋಗುತ್ತದೆ. ಯಾರ್ಯಾರು ಆ ಯುವತಿಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದೀರೋ ಅವರ ವಿಳಾಸಗಳು ಸಿಗುತ್ತವೆ.

ಸಿಕ್ಕಮೇಲೆ ಏನಾಗುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ಅಮ್ಮ-ಅಕ್ಕ ಎಂದೆಲ್ಲ ಮಾತನಾಡುವುದು ನಮಗೆ ಬರಲ್ಲ ಎಂದೇನೂ ಅಲ್ಲ. ಆದರೆ ಅನ್ನಬಾರದು ಎಂದು ನಿಶ್ಚಯಿಸಿಕೊಂಡಿದ್ದೇವೆ. ಅದನ್ನು ಹಾಳುಮಾಡಬೇಡಿ. ಅನು ನನ್ನ ತಂಗಿ, ಆಕೆಗೆ ಏನೇ ಆದರೂ ಸಹಿಸಿಕೊಳ್ಳುವುದಿಲ್ಲ. ನಾನು ಅದನ್ನು ಪರ್ಸನಲ್ ಆಗಿ ತೆಗೆದುಕೊಳ್ಳುತ್ತೇನೆ. ಅನು ನನಗೆ ಬಹಳ ಬೆಂಬಲ ಕೊಟ್ಟಿದ್ದಾರೆ. ನಾನು ಸಹ ಅನು ಅನ್ನು ತಂಗಿ ಎಂದು ಮನಸಾರೆ ಸ್ವೀಕರಿಸಿದ್ದೀನಿ. ದಯವಿಟ್ಟು ಆಕೆಗೆ ತೊಂದರೆ ಕೊಡಬೇಡಿ’ ಎಂದು ಎಚ್ಚರಿಕೆ ದನಿಯಲ್ಲಿಯೇ ಮನವಿ ಮಾಡಿದ್ದಾರೆ ವಿನಯ್ ಎಂದು ಮಾಹಿತಿ ಕಂಡು ಬಂದಿದೆ.

Nimma Suddi
";