This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಜಾರಕಿಹೊಳಿಯಿಂದ ನಾಳೆ ಸಂಜೆ ದೊಡ್ಡ ಸುದ್ದಿ?

ನಿಮ್ಮ ಸುದ್ದಿ ಬೆಂಗಳೂರು

ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರದ್ದೆನ್ನಾದ ರಾಸಲೀಲೆ ವಿಡಿಯೋ ಪ್ರಕರಣಕ್ಕೆ ಸಂಬAಧಿಸಿದAತೆ ದಿನಕ್ಕೊಂದು ತಿರುವು ಪಡೆಯುತ್ತಿದೆ.
ಸಿಡಿ ಲೇಡಿ ಶುಕ್ರವಾರ ತಮ್ಮ ಲಾಯರ್ ಮೂಲಕ ರಮೇಶ ಜಾರಕಿಹೊಳಿ ವಿರುದ್ಧ ಪ್ರಕರಣದ ದಾಖಲಾಗುತ್ತಲೇ ಸಿಡಿದೆದ್ದ ರಮೇಶ ನಾಳೆ ದೊಡ್ಡ ಬಾಂಬ್ ಸ್ಪೋಟವಾಗಲಿದೆ ಎಂದಿದ್ದಾರೆ.

ಸಿಡಿ ಲೇಡಿಯಿಂದ ಎಫ್‌ಐಆರ್ ದಾಖಲಾದ ನಂತರ ಮಾತನಾಡಿದ ಮಾಜಿ ಸಚಿವ ರಮೇಶ ಜಾರಕಿಹೊಳಿ, ಎಫ್‌ಐಆರ್ ದಾಖಲಾದ ಮಾತ್ರಕ್ಕೆ ನಾನು ಅಪರಾಧಿಯಲ್ಲ. ನನಗೆ ಜಾಮೀನಿನ ಅವಶ್ಯಕತೆಯಿಲ್ಲ, ಜಾಮೀನು ಪಡೆಯುವ ತಪ್ಪು ನಾನು ಮಾಡಿಲ್ಲ ಎಂದು ಮಾದ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಸಿಡಿ ಲೇಡಿ ಎನ್ನಲಾದ ಆಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೆಸರು ಪ್ರಸ್ತಾಪಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ರಮೇಶ ಜಾರಕಿಹೊಳಿ ಡಿ.ಕೆ.ಶಿವಕುಮಾರ ನನ್ನ ಹಳೆಯ ಗೆಳೆಯ, ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಬೇಕು. ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಬೇಕು. ನನಗೆ ಆದ ಅನ್ಯಾಯ ಅವರಿಗೆ ಆಗದಿರಲಿ.

ಆಡಿಯೋದಲ್ಲಿ ಹೆಸರಿದ್ದ ಮಾತ್ರಕ್ಕೆ ಅವರು ಅಪರಾಧಿಯಲ್ಲ, ಅವರಿಗೆ ಒಳ್ಳೆಯದಾಗಲಿ. ನಾನು ದೈವಭಕ್ತ ನಿರಪರಾದಿ. ಕಾನೂನು ಅಧ್ಯಯನ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ನಾನು ಯುವತಿಯ ಆಡಿಯೋ, ವಿಡಿಯೋ ರಿಲೀಸ್ ಮಾಡಿಲ್ಲ, ಅದಕ್ಕೂ ನನಗೂ ಯಾವುದೇ ಸಂಬAಧವಿಲ್ಲ. ನಾಳೆ ಸಂಜೆ ವೇಳೆಗೆ ಇದಕ್ಕಿಂತ ದೊಡ್ಡ ಸುದ್ದಿಯೊಂದನ್ನು ಹೇಳಲಿದ್ದೇನೆ. ತಮ್ಮಲ್ಲಿನ ಸತ್ಯವನ್ನು ಬಹಿರಂಗಪಡಿಸುತ್ತೇನೆ, ಇದು ಸ್ಯಾಂಪಲ್ ಅಷ್ಟೇ. ಎಫ್‌ಐಆರ್ ಆದ ತಕ್ಷಣ ನಾನು ಅಪರಾಧಿಯಲ್ಲ. ಮೊದಲು ತನಿಖೆ ಆಗಲಿ ಎಂದು ಆಗ್ರಹಿಸಿದರು.

ಒಟ್ಟಿನಲ್ಲಿ ರಮೇಶ ಜಾರಕಿಹೊಳಿ ಅವರ ನಾಳೆಯ ಸಂಜೆ ಹೇಳಿಕೆ ರಾಜ್ಯದ ಜನತೆಯ ಕುತೂಹಲ ಹೆಚ್ಚಿಸಿದೆ. ಜಾರಕಿಹೊಳಿ ಸಿಡಿಸುವ ಆ ಮಹಾ ಬಾಂಬ್ ಯಾವುದು ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಂತಾಗಿದೆ.

 

Nimma Suddi
";