ಬಾಗಲಕೋಟೆ
ವಿದ್ಯಾಗಿರಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಯುವ ಮೋರ್ಚಾವತಿಯಿಂದ 76 ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ “ತಿರಂಗಾಯಾತ್ರೆ” ಗೆ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಪ್ರಧಾನಿ ನರೇಂದ್ರ ಮೋದಿಯವರ ಪರಿಶ್ರಮದ ಫಲವಾಗಿ ದೇಶ ಸರ್ವಾಂಗಿಣ ಅಭಿವೃದ್ಧಿಯೊಂದಿಗೆ ಭಾರತ ಮತ್ತೆ ವಿಶ್ಚಗುರುವಾಗುವಲ್ಲಿ ಹೆಜ್ಜೆಯನಿಟ್ಟಿದೆ. ಆರ್ಥಿಕ,ಶೈಕ್ಷಣಿಕ,ಸಾಮಾಜಿಕ,ಔದ್ಯೋಗಿಕ,ತಂತ್ರಜ್ಞಾನಗಳ ಆವಿಷ್ಕಾರದೊಂದಿಗೆ ಹೊಸ ಆಧುನಿಕ ಭಾರತ ನಿರ್ಮಾಣಗೊಳ್ಳುತ್ತಿರುವುದು ಹೆಮ್ಮೆಯ ವಿಷಯ.ದೇಶದ ಯುವ ಜನತೆ ರಾಷ್ಟ್ರ ಭಕ್ತಿಯನ್ನು ಮೈಗೂಡಿಸಿಕೊಂಡು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು.
ಭಾರತ ವಿಶ್ವಗುರುವಾಗಲು ನಾವೆಲ್ಲರೂ ಶ್ರಮಿಸೋಣ.
ಸಾವಿರ ಮೀಟರ್ ಉದ್ದದ ಬೃಹತ್ ರಾಷ್ಟ್ರ ಧ್ವಜದವನ್ನು ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೈಯಲ್ಲಿ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಸುಮಾರು 1 ಕಿ.ಮೀ ಉದ್ದಕ್ಕೂ ರಾಷ್ಟ್ರಧ್ವಜದ ಕೈಯಲ್ಲಿ ಹಿಡಿದು ರಾಷ್ಟ್ರ ಘೋಷಣೆಗಳನ್ನು ಹಾಕುತ್ತಾ ಸಾಗಿದ್ದು,ನೋಡುಗರನ್ನು ರೋಮಾಂಚನ ಗೊಳಿಸಿತ್ತು.
ಯಾತ್ರೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ,ಮಾಜಿ ಬಿಟಿಡಿಎ ಮಾಜಿಅಧ್ಯಕ್ಷ ಜಿ.ಎನ್.ಪಾಟೀಲ,
ರಾಜು ನಾಯ್ಕರ,ರಾಜು ರೇವಣಕರ,ಬಸವರಾಜ ಯಂಕಂಚಿ, ಸುರೇಶ ಕೊಣ್ಣುರ,ಮಲ್ಲೇಶ ವಿಜಾಪುರ,ಕಲ್ಲಪ್ಪ ಭಗವತಿ. ಸದಾನಂದ ನಾರಾ,ಶೋಭಾ ರಾವ್, ರಾಜು ಮುದೆನೂರ, ಈರಣ್ಣ ಸರಗಣ್ಣವರ್,
ರಾಜಕುಮಾರ ದೇಸಾಯಿ,
ಭುವನೇಶ ಪೂಜಾರಿ,ಉಮೇಶ ಹಂಚಿನಾಳ,ಶರದ ಗೌಡ ಪಾಟೀಲ,ವೆಂಕಟೇಶ ರಾವ್,ಶ್ರೀಧರ ನಾಗರಬೇಟ್ಟ,ಚಂದ್ರು ಸರೂರ,ನಾಗರಾಜ ನಾರಾಯ್ಕರ,ಯಲ್ಲಪ್ಪ ನಾರಾಯಣಿ,ಕಿರಣಸಿಂಗ ಗಲಗಲಿ,ಮಲ್ಲು ಮುತ್ತಪ್ಪನ್ನವರ,ಸೇರಿದಂತೆ ಅನೇಕ ಜನರು ಭಾಗವಹಿಸಿದ್ದರು.