This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Education NewsLocal NewsState News

ಮತದಾನ ಜಾಗೃತಿಗೆ ವಿಶೇಷ ಚೇತನರಿಂದ ಬೈಕ್ ರ‍್ಯಾಲಿ

ಮತದಾನ ಜಾಗೃತಿಗೆ ವಿಶೇಷ ಚೇತನರಿಂದ ಬೈಕ್ ರ‍್ಯಾಲಿ

ಬಾಗಲಕೋಟೆ:

ಮತದಾನ ಜಾಗೃತಿ ಅಭಿಯಾನದಡಿ ಜಿಲ್ಲೆಯ ಅಂಗವಿಕಲರು ಮೇ ೭ ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವಂತೆ ನಗರದಲ್ಲಿ ಹಮ್ಮಿಕೊಂಡ ಬೈಕ್ ರ‍್ಯಾಲಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಜಂಟಿಯಾಗಿ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಮ್ಮ ನಡೆ ಮತಗಟ್ಟೆ ಕಡೆ ಎಂಬ ಘೋಷವಾಕ್ಯದೊಂದಿಗೆ ವಿಶೇಷಚೇತನರಿಂದ ಹಮ್ಮಿಕೊಂಡ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು ಇತ್ತೀಚೆಗೆ ನಗರ ಪ್ರದೇಶದಲ್ಲಿ ಕಡಿಮೆ ಮತದಾನವಾಗುತ್ತಿದ್ದು, ಮತದಾರರು ನಿರಾಶೆಯಾಗಬಾರದು. ಉತ್ತಮ ನಾಗರಿಕನಾಗುವ ಜೊತೆಗೆ ಉತ್ತಮ ಮತದಾರರಬೇಕು. ಮೇ ೭ ರಂದು ತಪ್ಪದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ತಿಳಿಸಿದರು.

ಮತದಾನದ ಪ್ರತಿಜ್ಞಾವಿಧಿ ಬೋಧಿಸಿದ ನಂತರ ಬೈಕ್ ರ‍್ಯಾಲಿ ಪ್ರಾರಂಭಗೊAಡಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಲ್ ರಾಯಬಾರಿ ಕ್ರೀಡಾಪಡು ಸಿದ್ದಾರೂಢ ಕೊಪ್ಪದ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಯೋಜನಾ ನಿರ್ದೇಶಕ ಶಶಿಕಾಂತ ಶಿವಪೂರೆ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಸೇರಿದಂತ ಆಯಾ ತಾಲೂಕಿನ ಎಂ.ಆರ್.ಡಬ್ಲೂಗಳು ಪಾಲ್ಗೊಂಡಿದ್ದರು.

ಬೈಕ್ ರ‍್ಯಾಲಿ ನಗರದ ಹಳೆಯ ತಹಶೀಲ್ದಾರ ಕಚೇರಿಯಿಂದ ಪ್ರಾರಂಭವಾಗಿ ಕೃಷ್ಣಾ ಟಾಕೀಸ್, ಮೀನು ಮಾರುಕಟ್ಟೆ, ಕೊತ್ತಲಪ್ಪನಗುಡಿ, ಪೊಲೀಸ್ ಚೌಕ್, ಬಳೆ ಬಸವೇಶ್ವರ ಬ್ಯಾಂಕ್, ಹಳೆ ಶಿರೂರ ಅಗಸಿ, ಬಸವೇಶ್ವರ ಸರ್ಕಲ್ ಮಾರ್ಗವಾಗಿ ಕೊನೆ ಜಿಲ್ಲಾಡಳಿತ ಭವನಕ್ಕೆ ಮುಕ್ತಾಯಗೊಂಡಿತು.

ರ‍್ಯಾಲಿಯಲ್ಲಿ ಮತದಾನ ಜಾಗೃತಿಯ ಸಂದೇಶಗಳುಳ್ಳ ಟೀಶರ್ಟ ಮತ್ತು ಟೋಪಿ ಧರಿಸಿ ಎಲ್ಲರ ಗಮನ ಸೆಳೆದರು. ಪ್ರತಿಯೊಂದು ವಿಶೇಷ ಚೇತನರ ವಾಹನಗಳಿಗೆ ಮತದಾನ ಜಾಗೃತಿಯ ಘೋಷಣಾ ಫಲಕಗಳನ್ನು ಹಾಕಿಕೊಂಡಿದ್ದರು.

Nimma Suddi
";