This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsState News

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿಜಿ ಅವರ ಜನ್ಮ ದಿನಾಚರಣೆ

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿಜಿ ಅವರ ಜನ್ಮ ದಿನಾಚರಣೆ

ಗಾಂಧೀಜಿ ಮತ್ತು ಶಾಸ್ತ್ರಿಜಿ ಭಾರತ ಎರಡು ಶ್ರೇಷ್ಠ ನಕ್ಷತ್ರಗಳು ಅವರ ಮೌಲ್ಯಗಳು ಅಜಾರಮರ : ಚರಂತಿಮಠ

ಬಾಗಲಕೋಟೆ :

ಭಾರತ ದೇಶ ಕಂಡ ನಕ್ಷತ್ರಗಳಲ್ಲಿ ಶಾಸ್ತ್ರೀಜಿ ಹಾಗೂ ಗಾಂಧೀಜಿ ಎರಡು ಶ್ರೇಷ್ಠ ಆದರ್ಶ ನಕ್ಷತ್ರಗಳು ಅವರ ಜೀವನ ಆದರ್ಶ ಮೌಲ್ಯಗಳು ಎಂದಿಗೂ ಅಜರಾಮರ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ನಗರದ ಶಿವಾನಂದ ಜೀನಲ್ಲಿರುವ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ನಗರ ಮಂಡಲ ವತಿಯಿಂದ ಹಮ್ಮಿಕೊಂಡ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿಜಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಗಾಂಧೀಜಿ ಹಾಗೂ ಶಾಸ್ತ್ರಿಜಿಯವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸೂವ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು.

ಮಹಾತ್ಮ ಗಾಂಧೀಜಿ ದಂಡಿ ಸತ್ಯಾಗ್ರಹ,ಕ್ವೀಟ್ ಇಂಡಿಯಾ,ಸ್ವದೇಶಿ ಚಳುವಳಿಯಂತಹ ಅನೇಕ ಹೋರಾಟಗಳ ರೂವಾರಿಯಾಗಿದ್ದರು, ಜೀವನದಲ್ಲಿ ಸತ್ಯ,ಅಹಿಂಸೆ,ಸ್ವಚ್ಚತೆಯ ಮಹತ್ವವನ್ನು ಸಾರಿದ ರಾಷ್ಟ್ರಪಿತ ಅವರಾಗಿದ್ದರು, ಭಾರತದ ಎರಡನೆ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ ಶಾಸ್ತ್ರಿಜಿ ಅವರು ಕಡಿಮೆ ಸಮಯದಲ್ಲಿ ತಮ್ಮ ಉದಾತ್ತ ನೀತಿಗಳು ಮತ್ತು ಪ್ರಭಾವಶಾಲಿ ಘೋಷಣೆಗಳಿಂದ ರಾಷ್ಟ್ರದ
ದ ಆಕಾರವನ್ನು ಬದಲಾಯಿಸಿದವರು,1965ರಲ್ಲಿ ಇಂಡೋ-ಪಾಕ್ ಯುದ್ದದ ಸಮಯದಲ್ಲಿ ಜೈ ಜವಾನ,ಜೈಕಿಸಾನ ಎಂಬ ಜನಪ್ರಿಯ ಘೋಷಣೆಯ ಮೂಲಕ ಭಾರತದಲ್ಲಿ ಏಕತೆ ಸಾರಿದವರು,ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಕನಸುಗಳನ್ನು ನನಸು ಮಾಡುವ ದಾರಿಯಲ್ಲಿ ಇಂದಿನ ಪ್ರಧಾನಿ ನರೇಂದ್ರಮೋದಿಯವರು ಸಾಗುತ್ತಿರುವುದು ನಮಗೆಲ್ಲಾ ಪ್ರೇರಣಾದಾಯಕವಾಗಿದೆ ಎಂದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ನಾರಾಯಣಸಾ ಭಾಂಡಗ್ರೆ ಮಾತನಾಡಿ ಸ್ವಾತಂತ್ರ್ಯ ಚಳುವಳಿಯ ನೇತಾರ ರಾಷ್ಟçಪೀತ ಮಹಾತ್ಮ ಗಾಂಧೀಜಿ ಹಾಗೂ ಭಾರತ ರತ್ನ ಲಾಲ್ ಬಹದ್ದೂರ ಶಾಸ್ತ್ರಿ ಅವರು ಸದಾಕಾಲ ಸ್ಮರಣಿಯರು ಎಂದರು,

ಮುಖಂಡ ಡಾ,ಎಂ.ಎಸ್.ದಡ್ಡೆನ್ನವರ, ಬೆಳಗಾವಿ ಪ್ರಬಾರಿ ಬಸವರಾಜ ಯಂಕಂಚಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ,ಸತ್ಯನಾರಯಣ ಹೇಮಾದ್ರಿ, ರಾಜು ರೇವಣಕರ, ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ, ಶಿವಾನಂದ ಟವಳಿ, ಗುಂಡುರಾವ ಶಿಂದೆ, ಬಸವರಾಜ ಅವರಾದಿ, ರಾಜು ಶಿಂತ್ರೆ, ನಗರಸಭೆ ಸದಸ್ಯರಾದ ಜ್ಯೋತಿ ಭಜಂತ್ರಿ,ಶಶಿಕಲಾ ಮಜ್ಜಗಿ, ಸ್ಮೀತಾ ಪವಾರ,ಶೋಭಾ ರಾವ್,ಡಾ.ರೇಖಾ ಕಲಬುರ್ಗಿ, ಲಕ್ಮೀಬಾಯಿ ಶಿಂತ್ರೆ, ಸವಿತಾ ಲಂಕೆನ್ನವರ, ಕೇಶವ ಭಜಮತ್ರಿ,ರಾಜು ಕೋಟಿಕಲ್ ಬಸವರಾಜ ಹುನಗುಂದ,ಉಮೇಶ ಹಂಚಿನಾಳ,ಚಂದ್ರು ಸರೂರ ಸೇರಿದಂತೆ ಅನೇಕರು ಬಾಗವಹಿಸಿದ್ದರು.
ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪೋಟೋ 01 .ಮಹಾತ್ಮ ಗಾಂಧೀಜಿ ಹಾಗೂ ಭಾರತ ರತ್ನ ಲಾಲ್ ಬಹದ್ದೂರ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಗೌರವ ನಮನಗಳನ್ನು ಸಲ್ಲಿಸಿದರು.

Nimma Suddi
";