This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics NewsState News

ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಗೆ ಬಿಜೆಪಿ ತರಾಟೆ

ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಗೆ ಬಿಜೆಪಿ ತರಾಟೆ

ಬೆಂಗಳೂರು:

ಮಾಜಿ ಪ್ರಧಾನಿ ನೆಹರು ಹಾಗೂ ಕಾಂಗ್ರೆಸ್ ಕಾಲಕ್ಕೂ, ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಕಾಲಕ್ಕೂ ಭಾರತ ಕಂಡ ಅಜಗಜಾಂತರ ವ್ಯತ್ಯಾಸ ಇದೆ ಎಂದು ಬಿಜೆಪಿ ಸರಣಿ ಟ್ವೀಟ್‌ಗಳ ಮೂಲಕ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.

2013ರ ಮೊದಲು ಮನಮೋಹನ್ ಸಿಂಗ್ ಅವರ ಸರ್ಕಾರ ಇಸ್ರೋಗೆ ಕೊಟ್ಟ ಅನುದಾನ ಕೇವಲ 5,615 ಕೋಟಿ ರೂ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ನೀಡಿದ್ದು ಬರೋಬ್ಬರಿ 12,543 ಕೋಟಿ‌ ರೂ..! ನೆಹರು ಹಾಗೂ ಕಾಂಗ್ರೆಸ್ ಕಾಲದಲ್ಲಿ ನಮ್ಮ ದೇಶ ಲ್ಯಾಂಡ್ ಲೈನ್ ಫೋನ್ ಕೂಡ ತಯಾರಿಸುತ್ತಿರಲಿಲ್ಲ. ಈಗ ಭಾರತದಲ್ಲಿ ಮಾರಾಟವಾಗುವ ಶೇ‌.98 ರಷ್ಟು ಸ್ಮಾರ್ಟ್ ಫೋನ್‌ಗಳು ಮೇಡ್ ಇನ್ ಇಂಡಿಯಾ ಎಂದಿದೆ.

ನೆಹರು ಹಾಗೂ ಕಾಂಗ್ರೆಸ್ ಕಾಲದಲ್ಲಿ ಆಹಾರ ಧಾನ್ಯಕ್ಕಾಗಿ ಭಾರತ ಅಮೆರಿಕದ ಬಾಗಿಲು ಬಡಿಯುತ್ತಿತ್ತು‌. ಇಂದು ಉಪಗ್ರಹಗಳನ್ನು ಹಾರಿಸಲು ಅಮೆರಿಕದ ಕಂಪನಿಗಳು ಇಸ್ರೋ ಬಾಗಿಲು ಬಡಿಯುತ್ತಿವೆ. ನೆಹರು ಹಾಗೂ ಕಾಂಗ್ರೆಸ್ ಕಾಲದಲ್ಲಿ ಭಾರತದ ವಾರ್ಷಿಕ ಪ್ರಗತಿ 2.5 ಪರ್ಸೆಂಟ್ ಇತ್ತು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕಾಲದಲ್ಲಿ 8.5 ಪರ್ಸೆಂಟ್ ಬೆಳವಣಿಗೆ ಕಂಡಿದೆ..! ಕಾಂಗ್ರೆಸ್ ಕಾಲದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು 2 ಲಕ್ಷ ಕೋಟಿ ರೂ. ನಷ್ಟದಲ್ಲಿದ್ದವು. ಈಗ 1.7 ಲಕ್ಷ ಕೋಟಿ ರೂ. ಲಾಭದಲ್ಲಿವೆ ಎಂದು ಹೇಳಿಕೊಂಡಿದೆ.

ನೆಹರು ಅವರ ಕಾಲದಲ್ಲಿ ಸೊನ್ನೆ ಹಾಗೂ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಕೇವಲ 600 ಕೋಟಿ ರೂ. ಇದ್ದ ರಕ್ಷಣಾ ಸಾಮಾಗ್ರಿ ರಫ್ತು ವಹಿವಾಟು ಪ್ರಧಾನಿ ನರೇಂದ್ರ ಮೋದಿ ಅವರ ಕಾಲದಲ್ಲಿ 16 ಸಾವಿರ ಕೋಟಿ ರೂ.ಗೆ ತಲುಪಿದೆ‌. 1947 – 2014ರ ವರೆಗಿನ ನೆಹರು ಹಾಗೂ ಕಾಂಗ್ರೆಸ್ ಕಾಲದಲ್ಲಿ ಐಐಟಿ- 16, ಐಐಎಂ – 13, ಐಐಐಟಿ – 9 2014ರ ನಂತರ ಪ್ರಧಾನಿ ಮೋದಿ ಅವರ ನೇತೃತ್ವದ ಭಾರತದ ಕಾಲದಲ್ಲಿ ಐಐಟಿ – 23, ಐಐಎಂ – 20, ಐಐಐಟಿ – 25! 1961ರಲ್ಲಿ ನೆಹರು ಅವರ ತಮ್ಮ ನಾಯಿಯನ್ನು ವಿಮಾನದಲ್ಲಿ ಕರೆದೊಯ್ಯುತ್ತಿದ್ದರು ಆದರೆ ಇಸ್ರೋ ವಿಜ್ಞಾನಿಗಳು ಸೈಕಲ್‌ನಲ್ಲಿ ರಾಕೆಟ್ ಬಿಡಿ ಭಾಗಗಳನ್ನು ಸಾಗಿಸಬೇಕಾದ ದುಸ್ಥಿತಿ ಇತ್ತು ಎಂದು ಟ್ವೀಟ್‌ ಮೂಲಕ ಹೇಳಿಕೊಂಡಿದೆ.

ಚಂದ್ರಯಾನದ ಯಶಸ್ಸಿನ ಶ್ರೇಯ ವಿಜ್ಞಾನಿಗಳಿಗೆ ಸಲ್ಲಬೇಕು, ಆದರೆ ಯಶಸ್ಸಿನ ಕೀರ್ತಿಯನ್ನು ತನ್ನತ್ತ ಕೇಂದ್ರೀಕರಿಸಲು ರೋಡ್ ಶೋಕಿ ಮಾಡಿದವರು ಬಾಹ್ಯಾಕಾಶ ಸಂಶೋಧನೆಗೆ ಅನುದಾನ ಕಡಿತಗೊಳಿಸಿ ದ್ರೋಹ ಎಸಗಿದ್ದಾರೆ. ಬಜೆಟ್‌ನಲ್ಲಿ ಘೋಷಿಸಿದ ಅನುದಾನದಲ್ಲೇ ಕಡಿತ. ಘೋಷಣೆಯಾದ ಅನುದಾನ ಬಿಡುಗಡೆ ಮಾಡುವುದರಲ್ಲೂ ಇನ್ನಷ್ಟು ಕಡಿತ. ಇಷ್ಟೆಲ್ಲಾ ದ್ರೋಹವೆಸಗಿ ಕಾಲಿ ಕೈ ಬೀಸಿ ಹೋಗುವುದನ್ನು ಅವರ ಸಾಧನೆ ಎನ್ನಬೇಕೇ? ಎಂದು ಕಾಂಗ್ರೆಸ್‌ ಟ್ವೀಟ್ ಮೂಲಕ ಪ್ರಶ್ನೆ ಮಾಡಿತ್ತು.

";