This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಸಿದ್ದರಾಮಯ್ಯನವರೇ ತಾಕತ್ತು, ದಮ್ಮು ಇದ್ದರೆ ನೀವೇ ಸೃಷ್ಟಿಸಿರುವ ಆಯೋಗದಿಂದ ಒಂದಾದರೂ ತನಿಖೆ ಮಾಡಿಸಿ: ಬಿಜೆಪಿ ಸವಾಲು

ಸಿದ್ದರಾಮಯ್ಯನವರೇ ತಾಕತ್ತು, ದಮ್ಮು ಇದ್ದರೆ ನೀವೇ ಸೃಷ್ಟಿಸಿರುವ ಆಯೋಗದಿಂದ ಒಂದಾದರೂ ತನಿಖೆ ಮಾಡಿಸಿ: ಬಿಜೆಪಿ ಸವಾಲು

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದು, ರಾಜ್ಯ ಬಿಜೆಪಿ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿದ್ದಾರೆ.

ನಿಮ್ಮ ಬಳಿ ತಾಕತ್ತು, ದಮ್ಮು ಇದ್ದರೆ ನೀವೇ ಸೃಷ್ಟಿಸಿರುವ ಆಯೋಗದಿಂದ ಒಂದಾದರೂ ತನಿಖೆ ಮಾಡಿಸಿ ಎಂದು ಸವಾಲು ಹಾಕಿದ್ದಾರೆ.ಈ ಬಗ್ಗೆ ಪ್ರತಿಪಕ್ಷ ನಾಯಕ ಆರ್ ಅಶೋಕ ಮತ್ತು ರಾಜ್ಯ ಬಿಜೆಪಿಗಳ ಅಧಿಕೃತ ಎಕ್ಸ್ ಖಾತೆಗಳಿಂದ ಪೋಸ್ಟ್ ಮಾಡಲಾಗಿದ್ದು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಲಾಗಿದೆ.

ತಮ್ಮ ಮೊದಲ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಮೂಲಕ ಭ್ರಷ್ಟರನ್ನು ರಕ್ಷಿಸಲು ಹೋಗಿ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರು ಈಗ ಮತ್ತೊಮ್ಮೆ ರಂಗೋಲಿ ಕೆಳಗೆ ತೂರಲು ಹೋಗಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.

ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆಪಾದನೆ ಮಾಡಿ ಸುಳ್ಳು, ಅಪಪ್ರಚಾರದ ಮೂಲಕ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರ ಈಗ ಕಮಿಷನ್ ಕೊಟ್ಟವರಿಗೆ ಮಾತ್ರ ಬಿಲ್ ಕೊಟ್ಟು, ಕಮಿಷನ್ ಕೊಡದವರಿಗೆ ಹಣ ಬಿಡುಗಡೆ ಮಾಡದೆ ತನಿಖಾ ಆಯೋಗದ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದೆ.

 

";