ರಾಜೀನಾಮೆ ಘೋಷಿಸಿದ ಮೂರೇ ಗಂಟೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ಬಿಜೆಪಿ ನಗರ ಘಟಕ ಅಧ್ಯಕ್ಷ
ನಿಮ್ಮ ಸುದ್ದಿ ಬಾಗಲಕೋಟೆ
ಕಳೆದ ನಾಲ್ಕು ವರ್ಷದಿಂದ ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಯಮನಪ್ಪ ನಾಗರಾಳ ಬಿಜೆಪಿಗೆ ರಾಜೀನಾಮೆ ಘೋಷಿಸಿದ ಮೂರೇ ಗಂಟೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಅಚ್ಚರಿ ಮೂಡಿಸಿದ್ದಾರೆ.
ಗುರುವಾರ ಸಂಜೆ ಪಟ್ಟಣದ ಎಸ್.ಪಿ.ಆರ್. ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ಘೊಷಿಸಿದ ಯಮನಪ್ಪ ನಾಗರಾಳ ಅವರು ಸಂಜೆ ಪಟ್ಟಣದ ಬನಶಂಕರಿ ಮಂಗಲ ಭವನದಲ್ಲಿ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಸಮಾರಂಭದಲ್ಲಿ ಬಾಗಲಕೋಟೆ ಮತಕ್ಷೇತ್ರದ ಕಾಂಗ್ರೆಸ್ ಅಬ್ಯರ್ಥಿ ಎಚ್.ವೈ.ಮೇಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜ.ನಂಜಯ್ಯನಮಠ, ಎಸ್.ಎನ್.ರಾಂಪೂರ್, ರಾಜು ಮನ್ನಿಕೇರಿ, ಬಿ.ಎಚ್.ಮೇಟಿ, ಸಂಗಣ್ಣ ಹಂಡಿ, ಬಿ.ಸಿ.ಅಂಟರತಾನಿ, ಬಿ.ಎಸ್.ನಿಡಗುಂದಿ, ಜಗದೀಶ ಬಿಸಲದಿನ್ನಿ ಇತರರು ಇದ್ದರು.