This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsPolitics NewsState News

ಮೂರ್ತಿ ಪ್ರತಿಷ್ಠಾಪನೆಗೆ ಬಿಜೆಪಿ‌ ಸ್ಪಷ್ಟನೆ

ಮೂರ್ತಿ ಪ್ರತಿಷ್ಠಾಪನೆಗೆ ಬಿಜೆಪಿ‌ ಸ್ಪಷ್ಟನೆ

*ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ವಿವಾದದ ಬಗ್ಗೆ ಸಾರ್ವಜನಿಕರಲ್ಲಿ ಚರ್ಚಿಸಿದಾಗ ತಿಳಿದು ಬಂದ ವಿಷಯಗಳು*

*ನಗರದ ಅಂಬೇಡ್ಕರ್ ವೃತ್ತದ ಬಳಿ ರಸ್ತೆ ಎತ್ತರಿಸುವಾಗ ಡಾ.ಬಾಬಾಸಾಹೇಬ್ ಅಂಬೇಡ್ಕರರ ಪುತ್ಥಳಿ ಸ್ಥಳಾಂತರಿಸುವ ಪ್ರಸ್ತಾಪ ಬಂದಾಗ ಅಂದಿನ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಸ್ಥಳಾಂತರಿಸುವ ಪ್ರಸ್ತಾಪಕ್ಕೆ ಒಪ್ಪದೆ ಮೂರ್ತಿ ಅಲ್ಲಿಯೇ ಉಳಿಯುವಂತೆ ಮಾಡುವುದರ ಜತೆಗೆ ಜಿಲ್ಲಾಡಳಿತ ಭವನದಲ್ಲೂ ಬೃಹದಾಕಾರದ ಅಂಬೇಡ್ಕರರ ಪುತ್ಥಳಿ ಪ್ರತಿಷ್ಠಾಪಿಸಲು ನಿರ್ಧರಿಸಿ ಮೂರ್ತಿ ತಯಾರು ಮಾಡಿಸಿದರು.೨೦೧೩ರಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಮೂರ್ತಿ ಪ್ರತಿಷ್ಠಾಪಿಸದೆ ಐದು ವರ್ಷಗಳ ಕಾಲ ಹಾಗೆಯೇ ಇರಿಸಿದರು.ನಂತರ ೨೦೧೮ರಲ್ಲಿ ಚರಂತಿಮಠರು ಮರು ಆಯ್ಕೆಯಾದಾಗಲೇ ಮೂರ್ತಿ ಪ್ರತಿಷ್ಠಾಪನೆಗೊಂಡಿತು. ದಲಿತರ ಹೆಸರು ಹೇಳಿ ರಾಜಕಾರಣ ಮಾಡುವ ಕಾಂಗ್ರೆಸ್ಸಿನವರು ತಮ್ಮ ಐದು ವರ್ಷದ ಅವಧಿಯಲ್ಲಿ ಮೂರ್ತಿ ಅನಾವರಣ ಮಾಡದಿರುವುದು ಯಾಕೆ ಉತ್ತರಿಸಲಿ.

* ಛತ್ರಪತಿ ಶಿವಾಜಿ ಮಹಾರಾಜ ಮೂರ್ತಿ ಪ್ರತಿಷ್ಠಾಪನೆಗೆ *98* ಜನ ಆಕ್ಷೇಪಿಸಿದ್ದಾರೆ ಎನ್ನುತ್ತಾರೆ. ಆ 98 ಜನರಲ್ಲಿ ಹಲವರನ್ನು ಸಂಪರ್ಕಿಸಿದಾಗ ಅವರ ಗಮನಕ್ಕೆ ಬಾರದೆಯೇ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ಹೊರಬಿದ್ದಿತು. ಅದೇನೇ ಇರಲಿ ಆ 98 ಜನ ಒಂದೇ ರೀತಿಯ ಪತ್ರದಲ್ಲಿ ಆಕ್ಷೇಪಿಸಿ ಸಂಘಟಿತರಾಗಿ ಅರ್ಜಿ ಸಲ್ಲಿಸುವುದರ ಹಿಂದೆ ಇದ್ದವರು ಯಾರು?

*ಬಿಜೆಪಿ ಐದು ವರ್ಷದ ಅವಧಿಯಲ್ಲಿ ಯಾಕೆ ಕೂರಿಸಿಲ್ಲ ಎಂಬ ಪ್ರಶ್ನೆಗೆ*

ಉತ್ತರ:೨೦೧೮ ರಿಂದ ಒಂದೂವರೆ ವರ್ಷದ ಅವಧಿಗೆ ಜೆಡಿಎಸ್ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿತ್ತು. ೨೦೧೯ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಎರಡು ವರ್ಷ ಕೋವಿಡನ ಭೀತಿಯಲ್ಲೇ ಕಳೆಯಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೆ ಉಳಿಗಾಲವಿರುವುದಿಲ್ಲ. ಒಲೈಕೆ ರಾಜಕಾರಣ ಹೆಚ್ಚುದರಿಂದ ರಾಷ್ಟ್ರಪುರುಷದ ಪುತ್ಥಳಿಗಳು, ಜಯಂತಿಗಳಿಗೆ ಅಡ್ಡಿ ಎಂಬುದು ತಿಳಿದು ಬಿಜೆಪಿ ಅವಧಿಯಲ್ಲೇ ಪ್ರತಿಷ್ಠಾಪನೆಗೆ ಶತಪ್ರಯತ್ನ ನಡೆದರೂ ಮೂರ್ತಿ ಸಿದ್ಧಗೊಳ್ಳುವುದು, ಸಿದ್ಧಗೊಂಡ ಮೂರ್ತಿಯನ್ನು ಆಧರಿಸಿ ಸ್ಥಳದಲ್ಲಿ ಮೂರ್ತಿ ನಿಲ್ಲಿಸಲು ಕೆಳಗಿ‌ನ ಕಟ್ಟಡ ನಿರ್ಮಾಣಕ್ಕೆ ಸಮಯಾವಕಾಶ ಬೇಕಾಗಿದ್ದು, ಬೃಹದಾದ ಮೂರ್ತಿಯನ್ನು ಮೂರು ಭಾಗಗಳನ್ನಾಗಿ ತಂದು ಜೋಡಿಸುವುದು ಸೇರಿದಂತೆ ತಾಂತ್ರಿಕ ಕಾರಣಗಳಿಂದ ವಿಳಂಬ.

*ಮೂರ್ತಿ ಪ್ರತಿಷ್ಠಾಪನೆ ಪ್ರಯತ್ನ ಮೊಳಕೆ ಹೊಡೆದಿದ್ದೆ ಬಿಜೆಪಿ ಅದರಲ್ಲೂ ವೀರಣ್ಣ ಚರಂತಿಮಠರ ಅವಧಿಯಲ್ಲೇ*

ಬಸವಣ್ಣನವರು, ಶಿವಾಜಿ ಮಹಾರಾಜರ ಮೂರ್ತಿ ಸಿದ್ಧಪಡಿಸಲು ತಲಾ ೨೪ ಲಕ್ಷ ರೂ.ಗಳನ್ನು ವ್ಯಯ ಮಾಡಲಾಗಿದೆ‌ ಇಬ್ಬರು ಮಹಾಪುರುಷರ ಮೂರ್ತಿ ಪ್ರತಿಷ್ಠಾಪನೆ ಅದ್ಧೂರಿಯಾಗಿ ಒಂದೇ ದಿನ ನೆರವೇರಿಸುವ ಗುರಿಯಿತ್ತು.ತಾಂತ್ರಿಕ ಕಾರಣದಿಂದ ಅದು ತಡವಾಗಿದೆಯೇ ವಿನಾ ಕಾಂಗ್ರೆಸ್ ನಂಥ ಹಿಂದೂ ವಿರೋಧಿಗಳ ಅವಧಿಯಲ್ಲಿ ಪ್ರತಿಷ್ಠಾಪಿಸುವುದು ಖಂಡಿತವಾಗಿಯೂ ಇರಲಿಲ್ಲ. ಈಗ ಕಾಂಗ್ರೆಸ್ ಆಡಳಿತ ನೀಡುತ್ತಿರುವ ತೊಂದರೆ, ಮಾಡುತ್ತಿರುವ ವಿರೋಧ ಹೊಸತಲ್ಲ. ಕಾಂಗ್ರೆಸ್ ಬಹುತೇಕ ಮೂರ್ತಿ ಆರಾಧನೆಯನ್ನೇ ವಿರೋಧಿಸುತ್ತದೆ ಎಂಬುದನ್ನು ಮೇಲೆ ಹಿಂದೆ ಅಂಬೇಡ್ಕರರ ಮೂರ್ತಿ ಪ್ರತಿಷ್ಠಾಪನೆ ವಿಚಾರದಿಂದ ಹಿಡಿದು ಈಗಿನ ಇಬ್ಬರು ಮಹಾಪುರುಷರ ವಿಚಾರದಲ್ಲಿ ಜಗಜ್ಜಾಹೀರಾಗಿದೆ.

*ದೇವರ ವಿಚಾರದಲ್ಲಿ ರಾಜಕೀಯ ಯಾರದು*

* ಇನ್ನು ನಗರದ ದೇವಸ್ಥಾನಯೊಂದರ ವಿಚಾರದಲ್ಲೂ ರಾಜಕೀಯ ನಡೆಯುತ್ತಿದೆ. ಆ ದೇಗುಲದ ಸಮಿತಿಯಲ್ಲೂ ರಾಜಕೀಯ ತುರುಕಿ ಆ ದೇವಸ್ಥಾನಕ್ಕೆ ಹಿಂಬಾಗಿಲಿನಿಂದ ಅಡ್ಡಿಪಡಿಸಿ ರಾಜಕೀಯ ಮಾಡಿದವರೆ ಇಂದು ಶಿವಾಜಿ ಮಹಾರಾಜರ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಶಿವಾಜಿ ಜಯಂತಿಯನ್ನೂ ಎರಡಾಗಿಸಿದ್ದಾರೆ. ಹಿಂದೆ ವಿರೋಧಿಸುವ, ಮುಂದೆ ಹಿಂದೂತ್ವ ಮಾತನಾಡುವವರು ಯಾರೆಂಬುದನ್ನು ಸಮಾಜವೇ ಗುರುತಿಸಬೇಕು. ೪೦ಕ್ಕೂ ಹೆಚ್ಚು ದೇಗುಲ ಅಭಿವೃದ್ಧಿಪಡಿಸಿ ಯಾವ್ದೂ ಒಬ್ಬ ವ್ಯಕ್ತಿಗಾಗಿ ಆ ದೇವಸ್ಥಾನದ ವಿಚಾರದಲ್ಲಿ ರಾಜಕೀಯ ಮಾಡಿಲ್ಲ.ಆ ಸಮಿತಿಯಲ್ಲಿದ್ದವರು ಯಾರು, ಅವರು ಆಡಿದ ಕುತಂತ್ರ ಎಂತದು ಎಂದು ಹೇಳುತ್ತ ಕೂರುವ ಸಮಯ ಇದಲ್ಲ. ಅದಕ್ಕೆ ದೇವರೆ ಉತ್ತರಿಸುತ್ತಾನೆ.

*ಕೊನೆಯದಾಗಿ ಇಷ್ಟು ವರ್ಷ ಬಿಟ್ಟು ಈಗಲೇ ಯಾಕೆಂದು ಪ್ರಶ್ನಿಸೋರಿಗೆ*

ಉತ್ತರ: ಮೂರ್ತಿ ಪ್ರತಿಷ್ಠಾಪನೆ ಬಿಜೆಪಿ ಅವಧಿಯಲ್ಲೇ ಆಗಬೇಕಿತ್ತು ನಿಜ. ದೇಶದಲ್ಲಿ ಹಿಂದೂಗಳ ಶ್ರದ್ಧಾ ಕೇಂದ್ರಗಳು ಅಭಿವೃದ್ಧಿ ಆಗಿದ್ದು ಬಿಜೆಪಿ ಅವಧಿಯಲ್ಲೇ ವಿನಾ ಈಗ ಪ್ರಶ್ನಿಸೋರು, ಅವರ ಪಕ್ಷ ಭರ್ತಿ ೭೫ ವರ್ಷ ಬ್ರಟಿಷರು, ಮೊಘಲರಂತೆ ಹಿಂದೂಗಳ ಭಾವನೆಗಳ ಜತೆಹೆ ಚೆಲ್ಲಾಟ ಆಡುತ್ತ ಬಂದವರೇ.

*ಈಗಿರುವ ಪ್ರಶ್ನೆ ಆಗ ಪ್ರತಿಷ್ಠಾಪಿಸಿಲ್ಲವಾದರೆ ಈಗ ಯಾಕೆ ಪ್ರತಿಷ್ಠಾಪಿಸಬಾರದು. ಹಿಂದೂಗಳೆಂದು ಹೇಳಿಕೊಂಡೆ ಬೆನ್ನಿಗೆ ಚೂರಿ ಹಾಕೋರು ಯಾರೆಂದು ಜನಕ್ಕೆ ತಿಳದಿಲ್ಲವೇ..?* ಅಂಥವರಿಂದಲೇ ಮೂರ್ತಿ ಪ್ರತಿಷ್ಠಾಪನೆಗೆ ಈಗಲೂ ವಿರೋಧ

*ಇಷ್ಟೆಲ್ಲ ಹಿಂದೂತ್ವದ ಬಗ್ಗೆ ಬೊಬ್ಬೆ ಹಾಕೋರು ಅವರದೇ ಪಕ್ಷ ಆಡಳಿತದಲ್ಲಿದೆ.ಅವರಿಗೆ ಶಿವಾಜಿ ಮಹಾರಾಜರು, ಬಸವಣ್ಣನವರ ಬಗ್ಗೆ ಗೌರವ ಇದ್ದಿದ್ದೆ ನಿಜವಾದರೆ ತಮ್ಮ ಶಾಸಕರು, ನಾಯಕರುಗಳಿಗೆ ವಿರೋಧಿಸದಂತೆ ತಾಕೀತು ಮಾಡಲಿ.ಅಲ್ಲಿ ತೋರಿಸಲಿ ಇವರು ಹಿಂದುತ್ವವನ್ನು.

* ಇನ್ನು ಬಸವಣ್ಣನವರ ಪ್ರತಿಮೆ ಪತ್ರ ಸರ್ಕಾರಕ್ಕೆ ಹೋಗಿದ್ದರೆ ,ಶಿವಾಜಿ ಮಹಾರಾಜರ ಪತ್ರವೂ ಹೋಗಿರುತ್ತದೆ. ಅದು ಶಾಸಕರ ಶಿಫಾರಸ್ಸಿನ ಪತ್ರವಲ್ಲ ಅಧಿಕಾರಿಗಳು ಕಳುಹಿಸಿದ ಪತ್ರ.

* ಹಿಂದೂತ್ವ, ದೇಶ, ಪಕ್ಷದ ವಿಚಾರದಲ್ಲಿ ನಾಯಕರಾದ ಚರಂತಿಮಠರದು ರಾಜಿ ಇಲ್ಲದೆ ನಡೆ. ಅದನ್ನು ಟೀಕಿಸೋರು ಚರಂತಿಮಠರ ಕಾಲು ದೂಳಿಗೂ ಸಮವಲ್ಲ.

*ದುಷ್ಟರ ಕುತಂತ್ರವೇ ಹೆಚ್ಚಾಗಿ ಸದ್ದು ಮಾಡುತ್ತಿದೆ ಎಂದರೆ ಅದು ಸಜ್ಜನರ ಸೋಲಾಗದು. ಸಜ್ಜನರು, ಧರ್ಮವೇ ಅಂತಿಮವಾಗಿ ಗೆಲ್ಲುವುದು*

ಎಲ್ಲದಕ್ಕೂ ಉತ್ತರ ಇಲ್ಲಿದೆ. ಸಮಾಜವನ್ನು ಒಡೆಯುವುದನ್ನೇ ಅಸ್ತ್ರ ಮಾಡಿಕೊಂಡು ಬಂದ ಗುಲಾಮರು, ಗುಲಾಮಿ ಮನಸ್ಥಿತಿಗಳ ಷಡ್ಯಂತ್ರದಿಂದ ದೂರವಿರೋಣ. ಇಷ್ಟೆಲ್ಲ ಪ್ರಶ್ನಿಸೋರು ಕಳೆದ ಅವರದೇ ಅವಧಿಯಲ್ಲಿ ಸೆಕ್ಟರ್ ಗೆ ಒಂದು ಮಸೀದಿ ಎಂಬ ನಿರ್ಣಯಕೈಗೊಂಡಾಗ ವಿರೋಧಿಸಿದ್ದೆ ನಾವು. ಆಗ ಹಿಂದುತ್ವದ ಮಾತನಾಡುವ ಇವರೆಲ್ಲ ಎಲ್ಲಿ ಅಡಗಿ ಕುಳಿತಿದ್ದರು.

ಒಟ್ಟಾರೆ ಇಲ್ಲದ ಪ್ರಶ್ನೆಗಳನ್ನು ಜನರ ಮುಂದಿರಿಸಿ ಮಹಾಪುರುಷರ ವಿಚಾರವನ್ನು ರಾಜಕೀಯಗೊಳಿಸಿ ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳುವುದೇ ಇವರ ಅಂತಿಮ ಗುರಿ.ಅದಕ್ಕೆ ಬಲಿಯಾಗದೆ ಈ ವಿಚಾರದಲ್ಲಿ ಒಗ್ಗಟ್ಟಿನ ಧ್ವನಿ ಮೊಳಗಲಿ.

*ಬನ್ನಿ ಸುಂದರ ಸಮಾಜಕ್ಕಾಗಿ ಒಂದಾಗೋಣ.. ಕುತಂತ್ರಗಳಿಗೆ ಬಲಿಯಾಗದೆ ರಾಷ್ಟ್ರ ಪುರುಷರಿಗಾಗಿ ಒಂದಾಗೋಣ*

";