ವಿಜಯಪುರ: ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ನಗರದ ಮೀನಾಕ್ಷಿ ಚೌಕಿನಲ್ಲಿ ನಡೆದ ಯುವ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಜೊತೆಗೆ, ಬಿಜೆಪಿ ಸರ್ಕಾರವೇ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು, ಮುಸ್ಲಿಂ ವ್ಯಕ್ತಿಯಿಂದ ಅಯೋಧ್ಯೆ ರಾಮಮಂದಿರಕ್ಕೆ ಶಿಲಾನ್ಯಾಸದ ಮೊದಲ ಇಟ್ಟಿಗೆ ಇಡಿಸಿದ್ದು ಮುಂತಾದ ವಿಚಾರಗಳನ್ನು ಜನರ ಮುಂದೆ ಮಂಡಿಸುವ ಮೂಲಕ, ಬಿಜೆಪಿಯು ಮುಸ್ಲಿಂ ದ್ವೇಷಿಯಲ್ಲ ಎಂಬುದನ್ನು ಜನರಿಗೆ ಮನದಟ್ಟು ಮಾಡಲು ಪ್ರಯತ್ನಿಸಿದರು.
ಬಿಜೆಪಿಗೆ ಎಲ್ಲಾ ಸಮುದಾಯದವರು ಬೇಕು. ಶೇ. 37 ಮೈನಾರಿಟಿ ಕಮ್ಯುನಿಟಿ ಅವರಿಗೆ ಪಿಎಂ ಅವಾಸ್ ಯೋಜನೆ ಸಿಕ್ಕಿದ್ದು, ರಾಮಮಂದಿರ ವಿಚಾರ ಸುಪ್ರೀಂ ಕೋರ್ಟಿನಲ್ಲಿ ಮುಗಿದ ಬಳಿಕ ನಿರ್ಮಾಣ ಮಾಡಿದ್ದೇವೆ. ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಸ್ಲಿಂ ವ್ಯಕ್ತಿಯನ್ನು ಕರೆದಿದ್ದೇವೆ. ‘ಮೇಕ್ ಇನ್ ಇಂಡಿಯಾ’ದಲ್ಲಿ ಚಂದ್ರನ ದಕ್ಷಿಣ ಕಕ್ಷೆಯಲ್ಲಿ ನಿಂತಿದ್ದೇವೆ ಎಂದರು.
14 ದೇಶಗಳಿಗೆ ರಪ್ತು ಮಾಡುತ್ತಿದ್ದೇವೆ. ಕೊರೊನಾ ಕಾಲದಲ್ಲಿ ಅಮೆರಿಕಕ್ಕೂ ಮುನ್ನ ಲಸಿಕೆ ಕಂಡು ಹಿಡಿದೆವು. 10 ವರ್ಷ ಕಾಲ ಭ್ರಷ್ಟಾಚಾರ ರಹಿತ ಆಡಳಿತ ಮಾಡಿದ್ದೇವೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಅಣ್ಣಾಮಲೈ ಮನವಿ ಮಾಡಿದರು. ಇದೆಲ್ಲಾ ಗಮನಿಸಿ, ಈ ಚುನಾವಣೆಯಲ್ಲಿ ಶೇಕಡಾ 51 ಪರ್ಸೆಂಟ್ ಬಿಜೆಪಿಗೆ ಹಾಕಬೇಕು’’ ಎಂದು ಆಗ್ರಹಿಸಿದರು.
ವಾಜಪೇಯಿ ಅವರು ಪಿಎಂ ಆಗಿದ್ದಾಗ ಅಬ್ದುಲ್ ಕಲಾಂ ಮುಸ್ಲಿಂ ಸಮಾಜದ ವ್ಯಕ್ತಿಯನ್ನು ರಾಷ್ಟ್ರಪತಿಯಾಗಿ ಮಾಡಿದರು. ಮೋದಿ ಅವರ ಕಾಲದಲ್ಲಿ ರಾಮನಾಥ್ ಕೋವಿಂದ್ ಎಸ್ಸಿ ಸಮಾಜದವರನ್ನು ರಾಷ್ಟ್ರಪತಿ ಮಾಡಿದರು. ಎರಡನೆರ ಬಾರಿ ಮುರ್ಮು ಅವರನ್ನು ಮಾಡಿದರು. ಕಾಂಗ್ರೆಸ್ ನವರು ಪ್ರತಿಭಾ ಪಾಟೀಲ ಅವರನ್ನು ರಾಷ್ಟಪತಿಯನ್ನಾಗಿ ಮಾಡಿದರು. ಇದೇ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಇರುವ ವ್ಯತ್ಯಾಸ. ಬಿಜೆಪಿಗೆ ಕಾಂಗ್ರೆಸ್ ಪಾಠ ಬೇಕಿಲ್ಲ ಎಂದರು.
ನರೇಂದ್ರ ಮೋದಿಯವರ ಪ್ರಧಾನಿಯಾದ ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಎಳೆಎಳೆಯಾಗಿ ಮಾತನಾಡಿದರು.