ಬೆಂಗಳೂರು: ಕನ್ನಡ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸೇರಿ ಕಾಂಗ್ರೆಸ್ ಪಕ್ಷ ಒಕ್ಕಲಿಗ ವಿರೋಧಿ ಅಂತ ಬಿಂಬಿಸಲು ಪ್ರಯತ್ನಿಸುತ್ತಿವೆ ಎಂದು ತಿಳಿಸಿದರು.
ಬಂಟ ಸಮುದಾಯದ ಒಬ್ಬ ಅಭ್ಯರ್ಥಿ ಪರಿಗಣನೆಗೆ ತೆಗೆದುಕೊಂಡರೆ ಒಕ್ಕಲಿಗ ಸಮುದಾಯದ 8 ಜನರಿಗೆ ತಮ್ಮ ಪಕ್ಷ ಟೀಕೆಟ್ ನೀಡಿದ್ದು, ಒಕ್ಕಲಿಗ ಪರ ವಕಾಲತ್ತು ವಹಿಸಿ ಮಾತಾಡುತ್ತಿರುವ ಬಿಜೆಪಿ ನಾಯಕರು ಸಿಟಿ ರವಿ, ಡಿವಿ ಸದಾನಂದ ಗೌಡ, ಪ್ರತಾಪ ಸಿಂಹ ಅವರಿಗೆ ಯಾಕೆ ಟಿಕೆಟ್ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಎರಡು ವರ್ಷಕಾಲ ಮುಖ್ಯಮತ್ರಿ ಸ್ಥಾನದಲ್ಲಿಟ್ಟು ನಂತರ ಯಾಕೆ ಬಿಎಸ್ ಯಡಿಯೂರಪ್ಪರನ್ನು ಕೆಳಗಿಳಿಸಿದ್ದು ಮತ್ತು ಯಾಕೆ ಯಡಿಯೂರಪ್ಪ ಮಾಧ್ಯಮದ ಜೊತೆ ಮಾತಾಡುವಾಗ ಕಣ್ಣೀರು ಹಾಕಿದ್ದು? ಅವರ ಮಗನನ್ನು ರಾಜ್ಯಾಧ್ಯಕ್ಷ ಮಾಡಿ ಈಗ ಪುನಃ ಯಡಿಯೂರಪ್ಪರನ್ನು ಓಲೈಸುತ್ತಿರುವುದು ಯಾಕೆ? ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರ ಕೊಡುತ್ತಾರಾ? ಚುನಾವಣೆ ಮುಗಿದ ಬಳಿಕ ತನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಶಿವಕುಮಾರ್ ಅವರನ್ನು ಸ್ಥಾನಕ್ಕೆ ತರಲಾಗುವುದು ಅನ್ನೋದು ವಿರೋಧ ಪಕ್ಷ ಗಳ ಸೃಷ್ಟಿ, ತಮ್ಮ ಸರ್ಕಾರ ಅಂಥ ನಿರ್ಣಯವನ್ನೇನೂ ಪ್ರಕಟಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಕುರುಬ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ಒಬ್ಬೇಒಬ್ಬ ಮುಖಂಡನಿಗೆ ಟಿಕೆಟ್ ನೀಡದ ಬಿಜೆಪಿಗೆ ಸಮಾಜಿಕ ನ್ಯಾಯದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.