ಬಾಗಲಕೋಟೆ
ರಕ್ತದಾನದ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಯ ಬಗ್ಗೆ ಜಾಗೃತಿ ಮಾಡಬೇಕಾಗಿದೆ. ಸಮಾಜದಲ್ಲಿ ರಕ್ತದಾನದ ಬಗ್ಗೆ ಇರುವ ಪ್ರಯೋಜನಗಳ ಬಗ್ಗೆ ತಿಳಿಸಬೇಕು. ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು. ಸಾಂಪ್ರದಾಯಿಕವಾಗಿ ರಕ್ತದಾನದ ಬಗ್ಗೆ ಇರುವ ಸಾರ್ವಜನಿಕ ಭಿನ್ನ ಅಭಿಪ್ರಾಯಗಳನ್ನು ಸಾಧ್ಯವಾದಷ್ಟು ಬೇಗ ತೊಡೆದು ಹಾಕುವ ಕಾರ್ಯವಾಗಬೇಕೆಂದು ಪ್ರೊ. ಕೇಶವ ಕುಲಕರ್ಣಿ ಹೇಳಿದರು.
ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಆರ್.ಆರ್.ಸಿ ಮತ್ತು ವೈ.ಆರ್.ಸಿ ಘಟಕಗಳ ಮತ್ತು ನಗರ ಅರ್ಬನ್ ರಕ್ತ ಬಂಡಾರದ ಸಹಯೋಗಯಲ್ಲಿ ರಕ್ತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಂಡು ಜೀವನ್ಮರಣಗಳ ನಡುವೆ ಹೋರಾಡುವ ಜೀವಿಗಳನ್ನು ಉಳಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎಂ ನಂಜುAಡಸ್ವಾಮಿ ವಹಿಸಿದ್ದರು. ರಕ್ತದಾನ ಶ್ರೇಷ್ಠದಾನ. ಇಂದು ಸಮಾಜದಲ್ಲಿ ಇದರ ಬಗ್ಗೆ ಚರ್ಚೆಯಾಗುತ್ತಿದೆ. ರಕ್ತವನ್ನು ಕಾರ್ಖಾನೆಗಳಲ್ಲಿ, ಗುಡಿ ಕೈಗಾರಿಕೆಗಳಲ್ಲಿ ಉತ್ಪಾದನೆ ಮಾಡಲಾಗುವುದಿಲ್ಲ. ಮನುಷ್ಯನ ದೇಹದಲ್ಲಿ ತಯಾರಾಗುವುದರಿಂದ ಜೀವನ್ಮರಣದ ನಡುವೆ ಹೋರಾಡುವ ಜೀವಗಳಿಗೆ ರಕ್ತ ನೀಡುವದರ ಮುಖಾಂತರ ಜೀವದಾನ ನೀಡಲು ಸಹಾಯಕಾರಿಯಾಗುವುದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ ಎಂ ಎಂ ಹುದ್ದಾರ ಸ್ವಾಗತಿಸಿದರು. ಪ್ರೊ. ಪಿ ಎಸ್ ಮಠದ ವಂದಿಸಿದ ಕಾರ್ಯಕ್ರಮವನ್ನು ಶ್ರೀಮತಿ ಎಸ್ ವಿ ಬಾರ್ಸಿ ನಿರೂಪಿಸಿದರು. ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.