This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಪುಸ್ತಕ ಬಿಡುಗಡೆ ಸಮಾರಂಭ

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ.ಅಶೋಕ ಸೊನ್ನದ ಪುಣ್ಯಸ್ಮರಣೆ

ದೇಹವೆ ದೇಗುಲ ಆರೋಗ್ಯದ ಮಾರ್ಗದರ್ಶಿ

ನಿಮ್ಮ ಸುದ್ದಿ ಬಾಗಲಕೋಟೆ

ಒತ್ತಡದ ಬದುಕಿನಲ್ಲಿ ಜಾಗತಿಕವಾಗಿ ಮಧುಮೇಹಿಗಳ ಸಂಖ್ಯೆ ಇಂದು ಹೆಚ್ಚಾಗುತ್ತಿದ್ದು, ವೈದ್ಯರು ಹಾಗೂ ಸಂಶೋಧಕರು ಔಷಧ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಯೋಚಿಸುತ್ತಿದ್ದಾರೆ. ಅದರ ಬದಲು ಈ ಸಮಸ್ಯೆಯನ್ನು ಹೇಗೆ ಕಡಿಮೆ ಮಾಡಬೇಕು ಎಂಬ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಮಾಜಿ ಸಚಿವ, ಶಾಸಕ ಎಚ್.ಕೆ.ಪಾಟೀಲ ಹೇಳಿದರು.

ನಗರದ ವಿದ್ಯಾಗಿರಿ ಸಾಯಿಬಾಬಾ ಮಂದಿರದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವೈದ್ಯ, ಖ್ಯಾತ ಮಧುಮೇಹ ತಜ್ಞ ಡಾ.ಅಶೋಕ ಸೊನ್ನದ ಅವರ ಪ್ರಥಮ ಪುಣ್ಯಸ್ಮರಣೆ ಹಾಗೂ ದೇಹವೆ ದೇಗುಲ ಕೃತಿ ಬಿಡುಗಡೆ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶದಲ್ಲಿ ಆಹಾರ ಮತ್ತು ಆರೋಗ್ಯ ವ್ಯವಸ್ಥೆ ಅಭದ್ರವಾಗಿದೆ. ಇಂಥ ಸಂದರ್ಭದಲ್ಲಿ ಔಷಧಿಗಿಂತ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ದೇಹವೆ ದೇಗುಲ ಕೃತಿಯಲ್ಲಿ ಡಾ.ಅಶೋಕ ಸೊನ್ನದ ಅತ್ಯಂತ ಸರಳ ಭಾಷೆಯಲ್ಲಿ ಆರೋಗ್ಯ ಸಂರಕ್ಷಣೆ ಬಗ್ಗೆ ತಿಳಿಸಿದ್ದಾರೆ. ಈ ಕೃತಿಯಲ್ಲಿರುವ ವಿಷಯ ಡಾ.ಸೊನ್ನದ ಅವರ ಸಾಮಾಜಿಕ ಕಳಕಳಿ, ಕನ್ನಡ ನಾಡಿನ ಬಗ್ಗೆ ಹೊಂದಿದ ಗೌರವಕ್ಕೆ ಸಾಕ್ಷಿಯಾಗಿದೆ. ಇದನ್ನು ವಿಶೇಷವಾಗಿ ಯುವ ಜನತೆ ಓದಬೇಕು ಎಂದರು.

ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ, ಡಾ.ಸೊನ್ನದ ಅವರಿಗೆ ನಮ್ಮ ಮಣ್ಣಿನ ಬಗ್ಗೆ ಅಪಾರ ಗೌರವವಿತ್ತು. ಈ ಪುಸ್ತಕದಲ್ಲಿ ತಿಳಿಸಿದ ವಿಷಯವನ್ನು ನಾನು ಬದುಕಿನಲ್ಲಿ ಅಳವಡಿಸಿಕೊಳ್ಳುತ್ತೇನೆ. ಉತ್ತಮ ಆರೋಗ್ಯಕ್ಕೆ ಎಲ್ಲರೂ ಅದನ್ನು ಅನುಸರಿಸಬೇಕು. ಜನಪ್ರತಿನಿಧಿಗಳು ಈ ಕೃತಿಯಲ್ಲಿರುವ ಅಮೂಲ್ಯ ವಿಷಯವನ್ನು ಅಧಿಕಾರಿಗಳ ಮೂಲಕ ಹೆಚ್ಚು ಜನರಿಗೆ ತಲುಪಿಸಲು ಯತ್ನಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಡಾ.ಸೊನ್ನದ ಅವರ ಅಗಾಧ ಜ್ಞಾನ, ಚಿಕಿತ್ಸೆ ನೀಡುವ ತುಡಿದ, ರೋಗಿಗಳ ಬಗ್ಗೆ ಹೊಂದಿದ್ದ ಕಾಳಜಿಯನ್ನು ಹತ್ತಿರದಿಂದ ನೋಡಿದ್ದೇನೆ. ಇಂಥ ವೈದ್ಯರು ಅಪರೂಪ ಎಂದರು.

ತೋಟಗಾರಿಕೆ ವಿವಿ ಉಪಕುಲಪತಿ ಡಾ.ಕೆ.ಎಂ.ಇಂದಿರೇಶ ಮಾತನಾಡಿ, ಡಾ.ಸೊನ್ನದ ಅವರ ಉಚಿತ ಸೇವೆ, ರೈತರಿಗಾಗಿ ನಡೆಸಿದ ಆರೋಗ್ಯ ಶಿಬಿರಗಳ ಬಗ್ಗೆ ಶ್ಲಾಘಿಸಿದರು. ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಈ ಕೃತಿ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು ಎಂದರು.

ಕರ್ನಾಟಕ ಪರಿಸರ ಮೇಲ್ಮನವಿ ಪ್ರಾಧಿಕಾರದ ನಿವೃತ್ತ ಸದಸ್ಯ ಜೆ.ಸಿ.ತಲ್ಲೂರ, ಬಿವಿವಿ ಸಂಘದ ತಾಂತ್ರಿಕ ನಿರ್ದೇಶಕ ಡಾ.ಆರ್.ಎನ್.ಹೆರಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್ ಜೈನಾಪೂರ ವೇದಿಕೆ ಮೇಲಿದ್ದರು. ಇದಕ್ಕೂ ಮುನ್ನ ಡಾ.ಅಶೋಕ ಸೊನ್ನದ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಪಣೆ ಮಾಡಿ ಮೌನ ಆಚರಿಸಿದರು.

ಬಾಬು ತಿಮ್ಮನಾಯಕ, ಆನಂದ ಸೊನ್ನದ, ಡಾ.ಆರ್.ಟಿ.ಪಾಟೀಲ, ಮೀರಾ ಜೈನ, ಪ್ರಸಾದ ಕಾರಂತ, ಬಾಬು ಕೋಟಿ, ಪವನ ಸೀಮಿಕೇರಿ, ಮಹಾಂತೇಶ ಚಿನಿವಾಲರ, ರಾಮಣ್ಣ ಸೊನ್ನದ ಆಫ್ ಬಂಟನೂರ ಮೆಮೋರಿಯಲ್ ಟ್ರಸ್ಟ್ ಧಾರವಾಡ ಸದಸ್ಯರು, ಗಣ್ಯರು, ರಡ್ಡಿ ಸಮಾಜ ಬಂಧುಗಳು, ಭಂಟನೂರ ಗ್ರಾಮಸ್ಥರು, ಮತ್ತಿತರರಿದ್ದರು. ನಿವೃತ್ತ ಶಿಕ್ಷಕ ವಿ.ಎಂ.ಕೇರಿ ಸ್ವಾಗತಿಸಿದರು. ಸಚಿನ್ ದೇಸಾಯಿ ಕೃತಿ ಪರಿಚಯಿಸಿದರು. ಡಾ.ದೀಪಾ ಗೌಡರ ವಂದಿಸಿದರು.

 

";