This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ವಿವಾಹಗಳಿಗೆ ವಧು-ವರರ ಸಮಾವೇಶಗಳು ಸಹಕಾರಿ

ನಿಮ್ಮ ಸುದ್ದಿ ಬಾಗಲಕೋಟೆ

ನಗರದ ವಿದ್ಯಾಗಿರಿ ಶ್ರೀ ಸೀತಾರಾಮ ಮಂಗಲ ಕಾರ್ಯಾಲಯದಲ್ಲಿ ಸಮಸ್ತ ಬ್ರಾಹ್ಮಣ ಸಮಾಜದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೩೯ನೇ ರಾಜ್ಯಮಟ್ಟದ ಬೃಹತ್ ವಧು-ವರರ ಸಮಾವೇಶವನ್ನು ಶಾಸಕ ಡಾ.ವೀರಣ್ಣ ಚರಂತಿಮಠ ಉದ್ಘಾಟಿಸಿದರು.

ಬ್ರಾಹ್ಮಣ ಸಮಾಜ ವಧು-ವರರ ಸಮಾವೇಶ ನಡೆಯುತ್ತಿರುವುದು ಸಂತಸದ ವಿಚಾರ. ವಧು-ವರರ ಸಮಾವೇಶಗಳು ಅನೇಕರ ಜೀವನಲ್ಲಿ ಮಂಗಲ ಕಾರ್ಯ ನಡೆಯುವಲ್ಲಿ ಸಹಕಾರಿಯಾಗುತ್ತದೆ. ಜ್ಞಾನಪರಂಪರೆಯನ್ನು ಬೆಳಗುತ್ತ ಬಂದಿರುವ ಬ್ರಾಹ್ಮಣ ಸಮಾಜದ ಬಗ್ಗೆ ಹೆಚ್ಚಿನ ಗೌರವವಿದೆ. ಸಮಾಜಕ್ಕೆ ನೆರವಾಗುವ ಇಂಥ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ವಧು-ವರರ ಸಮಾವೇಶ ಇಷ್ಟು ದೊಡ್ಡ ಪ್ರಮಾಣದಲ್ಲಿ ಆಯೋಜನೆಗೊಂಡಿರುವುದು ಖುಷಿಯ ವಿಚಾರ. ಕಂಕಣ ಭಾಗ್ಯ ದೊರೆಕಿರುವ ಪುಣ್ಯದ ಕಾರ್ಯ ನಡೆಯುತ್ತಿದೆ. ಇಂಥ ಕಾರ್ಯಗಳು ಮುಂದುವರಿಸಬೇಕು ಎಂದರು.

ಪಂ.ಬಿAದುಮಾಧವಾಚಾರ್ಯ ನಾಗಸಂಪಿಗೆ, ಹಿರಿಯ ಲೆಕ್ಕಪರಿಶೋಧಕ ಶಿವರಾಮ ಹೆಗಡೆ, ಸೀತಾರಾಮ ಮಂಗಲ ಕಾರ್ಯಾಲಯದ ಮಾಲೀಕ ಶ್ರೀನಿವಾಸ ಮನಗೂಳಿ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎಸ್.ದೇಶಪಾಂಡೆ, ಬ್ರಾಹ್ಮಣ ತರುಣ ಸಂಘದ ಅಧ್ಯಕ್ಷ ಎಸ್.ವಿ.ದೇಸಾಯಿ, ಶುಕ್ಲ ಯಜುರ್ವೇದ ಸಂಘದ ಅಧ್ಯಕ್ಷ ಬಿ.ವಿ.ಕುಲಕರ್ಣಿ, ವಿಪ್ರ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷ ನರಸಿಂಹ ಆಲೂರ, ಕಿಲ್ಲಾ ರಾಯರ ಮಠದ ವ್ಯವಸ್ಥಾಪಕ ನಾರಾಯಣ ತಾಸಗಾಂವ, ಮುಖಂಡರಾದ ಶ್ರೀಕಾಂತ ದೇಸಾಯಿ, ಕಿರಣ ಕುಲಕರ್ಣಿ, ಆನಂದ ಜೋಶಿ, ಮುರಳೀಧರರಾವ್ ಕುಲಕರ್ಣಿ, ಮುಧೋಳದ ಹಿರಿಯ ಪತ್ರಕರ್ತ ಉದಯ ಕುಲಕರ್ಣಿ ಉಪಸ್ಥಿತರಿದ್ದರು.

ವಿಶ್ವ ಮಧ್ವಮತ ಕಲ್ಯಾಣ ಸಂಘದ ಜಿಲ್ಲಾಧ್ಯಕ್ಷ ವಿನಾಯಕ ದೇಸಾಯಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಮನಗೂಳಿ, ಸಪ್ತಪದಿ ಪ್ರತತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮಂಗಲಸೂತ್ರ ಶ್ರೀನಿವಾಸ, ಕೃಷ್ಣಾಜಿ ಕುಲಕರ್ಣಿ, ಎಸ್.ಬಾಲಕೃಷ್ಣ ಸಂಗಾಪುರ, ಗುರುರಾಜ ಕಾವೇರಿ, ಪಾಂಡುರAಗ ಹೊಸೂರ, ಸಂಕಲ್ಪ ದೇಸಾಯಿ, ಕಿಶೋರ ಸಿದ್ದಾಂತಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ, ಮೈಸೂರಿನ ಸಪ್ತಪದಿ ಪ್ರತಿಷ್ಠಾನ ಟ್ರಸ್ಟ್, ಮಂಗಳಸೂತ್ರ ಪತ್ರಿಕೆ ಸಹಯೋಗದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ನೂರಾರು ಸಂಖ್ಯೆಯಲ್ಲಿ ವಧು-ವರರು ಹೆಸರು ನೋಂದಾಯಿಸಿಕೊAಡಿದ್ದರು. ಕೆಲವು ಜೋಡಿಗಳ ಒಪ್ಪಿಗೆಯಾಗಿ ಕುಟುಂಬಸ್ಥರು ಮಾತುಕತೆ ದಿನಾಂಕ ನಿಗದಿಪಡಿಸಿದರು ಎಂದು ಸಂಘಟಕರು ತಿಳಿಸಿದರು.

";