ಬೆಂಗಳೂರು: ಸಿಎಂ ಸಿದ್ಧರಾಮಯ್ಯ ದಾಖಲೆಯ ೧೬ನೇ ಬಜೆಟ್‌ನ್ನು ವಿಧಾನಸಭೆಯಲ್ಲಿ ಮಂಡಿಸುತ್ತಿದ್ದಾರೆ.
ಬಜೆಟ್ ಮಂಡನೆ ೭ ಕೋಟಿ ಜನರ ನಿರೀಕ್ಷೆ ಮೇಲೆ ನಿಂತಿದೆ. ಅದನ್ನು ತಿಳಿದು ಬಜೆಟ್ ಮಂಡಿಸುತ್ತಿದ್ದೇನೆ. ಎಲ್ಲರ ಒಳಿತಿಗಾಗಿ ಬಜೆಟ್ ಮಂಡನೆ ಮಾಡುತ್ತೇನೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಸಭಾಧ್ಯಕ್ಷರ ಅನುಮತಿ ಪಡೆದ ಸಿದ್ದರಾಮಯ್ಯ ತಮ್ಮ ಮೊನಕಾಲು ನೋವು ಇರುವುದರಿಂದ ತಾವು ಕುಳಿತು ಬಜೆಟ್ ಮಂಡಿಸುತ್ತೇನೆ. ಅದಕ್ಕೆ ತಮ್ಮ ಅನುಮತಿ ಬೇಕು ಎಂದು ವಿನಂತಿಸಿಕೊಂಡರು. ಅದಕ್ಕೆ ಸಭಾಧ್ಯಕ್ಷರು ಅನುಮತಿ ನೀಡಿದರು.