ಬಾಗಲಕೋಟೆ
ಸಂಪೂರ್ಣ ಮತದಾನದಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ನಾಗರಾಜ ಸರ್ವದೆ ಹೇಳಿದರು.
ನಗರದ ಬವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹೆರೋಡೋಟಸ್ ಕ್ಲಬ್ ಮತ್ತು ಎನ್ನೆಸ್ಸೆಸ್ ಘಟಕದ ವತಿಯಿಂದ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ, ಎಲ್ಲರೂ ಕೂಡಿ ಅಭಿಮತದಿಂದ ಒಟ್ಟುಗೂಡಿ ಒಬ್ಬ ಒಳ್ಳೆಯ ನಾಯಕನನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಎನ್ನೆಸ್ಸೆಸ್ ಘಟಕದ ಕಾರ್ಯಾಧ್ಯಕ್ಷ ಡಾ.ಸಿದ್ದಪ್ಪ ಭೂಮಣ್ಣವರ, ಸುಸ್ಥಿರ ಅಭಿವೃದ್ಧಿಗೆ ಮತದಾನ ಮುಖ್ಯ. ಎಲ್ಲರೂ ಕೂಡಿ ಒಗ್ಗಟ್ಟಿನಿಂದ ಮತದಾನ ಮಾಡಬೇಕು. ಆಗ ಮಾತ್ರ ನಮ್ಮ ದೇಶ ಅಭಿವೃದ್ಧಿಯಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮತದಾನ ಜಾಗೃತಿಯ ಕುರಿತು ಹಾಡು, ಕಿರು ನಾಟಕದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. ಗಂಗಾಧರ ಮತ್ತು ಭಾಗ್ಯಾ ಅನಿಸಿಕೆ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ವೆಂಕಟೇಶ ರೊಡ್ಡನ್ನವರ, ಗಂಗಾಧರ, ಗೀತಾ ಮತ್ತು ಹೆರೋಡೋಟಸ ಕ್ಲಬ್ ಕಾರ್ಯದರ್ಶಿ ಪೂಜಾ, ಯುವರಾಜ್, ಶಿವಲಿಂಗ ಮುತ್ತೂರ, ಹನುಮಂತ, ನರಸನಗೌಡ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಇದ್ದರು.