This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

3ನೇ ಹಂತದ ಮೆಟ್ರೋ ಮಾರ್ಗ ಕೈಗೆತ್ತುಕೊಳ್ಳಲು‌ ಸಂಪುಟ ಒಪ್ಪಿಗೆ: ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆ

3ನೇ ಹಂತದ ಮೆಟ್ರೋ ಮಾರ್ಗ ಕೈಗೆತ್ತುಕೊಳ್ಳಲು‌ ಸಂಪುಟ ಒಪ್ಪಿಗೆ: ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆ

ಬೆಂಗಳೂರು: ವಿಧಾನಸೌಧದಲ್ಲಿ ಸತತ 3 ಗಂಟೆಗಳ ಕಾಲ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಅಂತ್ಯವಾಗಿದ್ದು, ಬಳಿಕ ಕಂದಾಯ‌ ಸಚಿವ ಕೃಷ್ಣಬೈರೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ವಿಧಾನಸೌಧದ ಆವರಣದಲ್ಲಿ 23 ಕೋಟಿ‌ ರೂ. ವೆಚ್ಚದಲ್ಲಿ‌ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಮಾಡಬೇಕು ಅಂತ ತೀರ್ಮಾನ ಆಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಕೆಂಗಲ್ ಹನುಮಂತಯ್ಯ ಪ್ರತಿಯ ರಸ್ತೆಯ ಪಕ್ಕದಲ್ಲಿ‌ ಸ್ಥಾಪನೆ ಆಗಲಿದ್ದು, ಇದಕ್ಕೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ.
ಕಲ್ಲು, ಲೋಹದ ಪ್ರತಿಮೆಗೆ ಎಲ್ಲದಕ್ಕೂ ಹಣ ಬೇಕಾಗುತ್ತಿದ್ದು, ಏರ್ಪೋಟ್​​ನಲ್ಲಿ ಕೆಂಪೇಗೌಡ ಪ್ರತಿಮೆಗೆ 40-60 ಕೋಟಿ ರೂ. ಆಗಿತ್ತು. ಬೆಂಗಳೂರಿನಲ್ಲಿ ಅವಶ್ಯಕತೆಗಳು ಬೆಳೆಯುತ್ತಿದೆ. ಸಂಚಾರದ್ದೇ ದೊಡ್ಡ ಸಮಸ್ಯೆ ಆಗಿದೆ. ಟ್ರಾಫಿಕ್‌ ಸಮಸ್ಯೆ ಬಗೆಹರಿಸುವುದಕ್ಕೆ ಮೆಟ್ರೋ ಒಂದೇ ಪರ್ಯಾಯ ಮಾರ್ಗ. ಭವಿಷ್ಯದ ಅವಶ್ಯಕತೆ ಗಮನದಲ್ಲಿ ಇಟ್ಟುಕೊಂಡು‌ ಫೇಸ್ 3 ಒಪ್ಪಿಗೆ ನೀಡಿದೆ. ಎರಡು ಮಾರ್ಗಗಳನ್ನ‌ ಕೈಗೆ ಎತ್ತಿಕೊಳ್ಳಲು ಒಪ್ಪಿಗೆ ನೀಡಿದೆ ಎಂದರು.

ಜೆಪಿ ನಗರ, ಸಿಲ್ಕ್ ಬೋರ್ಡ್​​ನಿಂದ ಕೆಲಸ ನಡೆದಿದೆ. ಸಿಲ್ಕ್ ಬೋರ್ಡ್​​ನಿಂದ ಹೆಬ್ಬಾಳ ಮೇಲ್ಸೇತುವವರೆಗೆ ಬಂದಿದ್ದು, ಸುಮಾರು 35.5 ಕಿ.ಲೋ ಮೀಟರ್​ವರೆಗೆ ನಡೆಯಲಿದೆ. ಮೂರನೇ ಹಂತದ 15,611 ಕೋಟಿ‌ ರೂ. ವೆಚ್ಚದಲ್ಲಿ‌ ಕೈಗೆತ್ತುಕೊಳ್ಳಲು‌ ಸಂಪುಟ ಒಪ್ಪಿಗೆ ನೀಡಿದೆ ಎಂದು ಸೂಚಿಸಿದರು.

";