ಬೆಂಗಳೂರು: ಜಾತಿ ಗಣತಿ ವರದಿಯ ಸಲ್ಲಿಕೆ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆಯ ಕುರಿತಾದ ಚರ್ಚೆ ಹಾಗೂ ಸಿಎಎ ರಾಜ್ಯದಲ್ಲಿ ಜಾರಿ ಮಾಡದೆ ಇರುವು ವಿಚಾರವಾಗಿ ಮಹತ್ವದ ನೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ ಎಂದು ಮಾಹಿತಿ ತಿಳಿದು ಬಂದಿದೆ.
ವಿಧಾನಸೌಧದಲ್ಲಿ ಬೆಳಗ್ಗೆ ನಡೆಯಲಿದ್ದು ಕೇಂದ್ರ ಸರ್ಕಾರ ಹೊರಡಿಸಿರುವ ಸಿಎಎ ಆಧಿಸೂಚನೆಯನ್ನು ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಸಿಎಎ ಕಾಯ್ದೆ ಜಾರಿಗೆ ಅವಕಾಶ ನಿರಾಕರಿಸುವ ಬಗ್ಗೆಯೂ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ. ಈ ಎರಡು ವಿಚಾರಗಳ ಜೊತೆಗೆ ಕೆಲವೊಂದು ಮಹತ್ವದ ತೀರ್ಮಾನಗಳನ್ನು ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ.
ಮಹತ್ವದ ತೀರ್ಮಾನಗಳು
ವಿವಿಧ ಇಲಾಖೆಗಳ 20 ಕ್ಕೂ ಹೆಚ್ಚು ವಿಷಯಗಳ ಚರ್ಚೆ ಮತ್ತು ಅನುಮೋದನೆ ಸಾಧ್ಯತೆ
ಸಾಮಾಜಿಕ,ಶೈಕ್ಷಣಿಕ ವರದಿ(ಜಾತಿ ಜನಗಣತಿ) ಶಿಫಾರಸ್ಸು ಸಂಪುಟ ಸಭೆಯಲ್ಲಿ ಮಂಡನೆ ಸಾಧ್ಯತೆ.
ಜಾತಿ,ಸಾಮಾಜಿಕ ಗಣತಿಯ ಸಮಗ್ರ ಚರ್ಚೆ ಮತ್ತು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ಉಪ ಸಮಿತಿ ರಚನೆ ಸಾಧ್ಯತೆ.
ಕೃಷಿ ಇಲಾಖೆಯು ಖರೀದಿಸಿರುವ 98 ಹೊಸ ವಾಹನಗಳ ಬಿಲ್ ಮೊತ್ತ ರೂ. 1000.25 ಲಕ್ಷಗಳನ್ನು ಕೃಷಿ ಇಲಾಖೆಯಲ್ಲಿ ಲಭ್ಯವಿರುವ ರೈತ ಸಂಪರ್ಕ ಕೇಂದ್ರದ ಸೇವಾ ಶುಲ್ಕದ ಮೊತ್ತದಿಂದ ಪಾವತಿಸಲು ಅನುಮೋದನೆ ನೀಡುವುದು.
ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿನ 7 ಜಿಲ್ಲೆಗಳಲ್ಲಿ ಹೊಸದಾಗಿ 33 ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ಒಟ್ಟು ರೂ.132 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವುದು.
ಡಾ. ದೀಪಕ್ ಪ್ರಭು ಎ. ಕಾರ್ಯಕ್ರಮ ಅಧಿಕಾರಿ ಹಾಗೂ ಡಾ. ಟಿ.ಕೆ. ದಿನೇಶ್, ಕಾರ್ಯಕ್ರಮ ಅಧಿಕಾರಿ, ಆಯುಷ್ ಇಲಾಖೆ ಇವರುಗಳ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಇಲಾಖಾ ವಿಚಾರಣೆಯಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತರು ಮಾಡಿರುವ ಶಿಫಾರಸ್ಸಿನಂತೆ ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸುವ ದಂಡನೆ ವಿಧಿಸುವ ಬಗ್ಗೆ ನಿರ್ಧಾರ ಸಾಧ್ಯತೆ.
ಲತಾ.ಎಂ.ಗುತ್ತಿಗೆ ವಿಮಾ ವೈದ್ಯಾಧಿಕಾರಿ ಇವರ ಸೇವಾ ಸಕ್ರಮಾತಿಗಾಗಿ ಕರ್ನಾಟಕ ನಾಗರಿಕ ಸೇವೆಗಳು (ರಾಜ್ಯ ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು ಇಲಾಖೆಯ ಗುತ್ತಿಗೆ ವೈದ್ಯರ ವಿಲೀನಾತಿ) (ವಿಶೇಷ) ನಿಯಮಗಳು, 2024ಕ್ಕೆ ಅನುಮೋದನೆ ನೀಡುವ ಸಾಧ್ಯತೆ.
ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಯನ್ನು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವೆಂದು ಮರುನಾಮಕರಣ ಮಾಡುವುದಕ್ಕೆ ಅನುಮೋದನೆ.
ರಾಜ್ಯದ ಪ್ರಮುಖ ರಸ್ತೆ ಜಾಲದ ಭಾಗವಾಗಿರುವ ಸುಮಾರು 875 ಕಿ.ಮೀ.ಗಳ ರಾಜ್ಯ ಹೆದ್ದಾರಿಗಳನ್ನು ರೂ. 5,736 ಕೋಟಿಗಳ ಯೋಜನಾ ವೆಚ್ಚದಲ್ಲಿ (ರೂ. 3,115 ಕೋಟಿಗಳ ಬಾಹ್ಯ ಹಣಕಾಸಿನ ನೆರವಿನ ಮೂಲಕ) ಕೆಶಿಪ್-IV ಅಡಿಯಲ್ಲಿ ಅಭಿವೃದ್ಧಿಗೊಳಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಮಂತ್ರಾಲಯಕ್ಕೆ ಸಲ್ಲಿಸಲು ಅನುಮೋದನೆ ಸಾಧ್ಯತೆ
ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿಯ “ಸೇತು ಬಂಧನ್” ಯೋಜನೆಯಡಿ ರಾಜ್ಯದ ಆರು ಸ್ಥಳಗಳಲ್ಲಿ 3.RUB ROB/ ಗಳನ್ನು ಒಟ್ಟು ದಡ ನಿರ್ಮಾಣ 276.93 ಕೋಟಿಗಳ ಮೊತ್ತದಲ್ಲಿ ಮಾಡಲು ಆಡಳಿತಾತ್ಮಕ ಅನುಮೋದನೆ ಸಾಧ್ಯತೆ.
ಜಲ ಜೀವನ್ ಮಿಷನ್ ಯೋಜನೆಯಡಿ ದಾವಣಗೆರೆ ಜಿಲ್ಲೆ,ಹೊನ್ನಾಳಿ ತಾಲ್ಲೂಕಿನ ಹೊಟ್ಯಾಪುರ ಮತ್ತು ಇತರೆ 11 ಗ್ರಾಮಗಳಿಗೆ ರೂ.14.94 ಕೋಟೆಗಳ ಪರಿಷ್ಕೃತ ಅಂದಾಜು ಮೊತ್ತದ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ಸಾಧ್ಯತೆ.
ಜಲ ಜೀವನ್ ಮಿಷನ್ ಯೋಜನೆಯಡಿ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕಿನ ಹಿರೇಕೊಗಲೂರು ಮತು ಇತರೆ 22 ಗ್ರಾಮಗಳಿಗೆ ರೂ. 25.56 ಕೋಟಿಗಳ ಪರಿಷ್ಕೃತ ಅಂದಾಜು ಮೊತ್ತದ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ಸಾಧ್ಯತೆ.
ಹಾರಂಗಿ ಜಲಾಶಯ ಯೋಜನೆ ಅಡಿಯಲ್ಲಿ ಬರುವ ಹಾರಂಗಿ ಎಡದಂಡೆ ನಾಲೆಯ ಸರಪಳೆ 6.875 ಕಿ.ಮೀ ಸರಪಳಿ 14.75 ವರೆಗೆ ರೀಮಾಡಲಿಂಗ್ ಕಾಮಗಾರಿಯ ರೂ. 72.25 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ಸಾಧ್ಯತೆ.
ರಾಮನಗರ ಜಿಲ್ಲೆ,ರಾಮನಗರ ತಾಲ್ಲೂಕಿನ ಮಾಯಗಾನ ಹಳ್ಳಿಯಿಂದ ಸುಗ್ಗನಹಳ್ಳಿ ಮಾರ್ಗವಾಗಿ ಬೆಜ್ಜಗರಹಳ್ಳಿ ಕಟ್ಟೆ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆಯ ಸರಪಳಿ 4.90 ಕಿ.ಮೀ ನಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸುವ ಕಾಮಗಾರಿಯ ರೂ.10.00 ಕೋಟಿ ಮೊತ್ತದ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಸಾಧ್ಯತೆ.
ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕು,ಕೆರೆತೊಣ್ಣೂರು ಕೋಡಿಹಳ್ಳವನ್ನು ಲಕ್ಷ್ಮೀಸಾಗರ ಗ್ರಾಮದಿಂದ ಹಿರೋಡೆಕೆರೆ ವರೆಗಿನ ಅಭಿವೃದ್ಧಿ ಕಾಮಗಾರಿ ಯ ರೂ.34.25 ಕೋಟಿಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವ ಸಾಧ್ಯತೆ.
ರಾಮನಗರ ಜಿಲ್ಲೆ,ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದ ಕೆಳಭಾಗದಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸುವ ಕಾಮಗಾರಿಯ ರೂ. 13.60 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಸಾಧ್ಯತೆ.