ಬಾಗಲಕೋಟೆ
ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ತೆರವುಗೊಳಿಸಿದ ವಿವಾದದ ಹಿನ್ನೆಲೆಯಲ್ಲಿ ನಾಳೆ (ಆ.೧೯) ಬಾಗಲಕೋಟೆ ನಗರ ಬಂದ್ ಗೆ ಹಿಂದೂ ಸಂಘಟನೆ ಕರೆ ನೀಡಿದೆ.
ಶುಕ್ರವಾರ ಸಂಜೆ ನಡೆದ ಸಭೆಯಲ್ಲಿ ಪ್ರಮುಖರು ಮಾತನಾಡಿ, ನಾಳಿನ ಬಂದ್ ಗೆ ಸಕಲ ಸಮಾಜದವರು ಬೆಂಬಲ ಸೂಚಿಸಿದ್ದು ಬೆಳಿಗ್ಗೆಯಿಂದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ಮಾಡಲು ತೀರ್ಮಾನಿಸಲಾಯಿತು.
ಬೆಳಿಗ್ಗೆ 10 ಗಂಟೆಗೆ ನಗರದ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಳ್ಳಲಿದ್ದು, ಬಸವೇಶ್ವರ ಕಾಲೇಜು ರೋಡ, ದನದ ದವಾಖಾನೆ, ಟೆಂಗಿನಮಠ, ಬಸವೇಶ್ವರ ಬ್ಯಾಂಕ ರೋಡ, ಪೋಲಿಸ್ ಗೇಟ್, ಟಾಂಗಾ ಸ್ಯಾಂಡ್, ಕೊತ್ತಲೇಶ್ವರ ದೇವಸ್ಥಾನ ಮಾರ್ಗವಾಗಿ ವಲ್ಲಭಭಾಯಿ ಚೌಕ, ಎಂ.ಜಿ.ರಸ್ತೆಯ ಮೂಲಕ ಪುನ ಬಸವೇಶ್ವರ ವೃತ್ತಕ್ಕೆ ತಲುಪಲಿದೆ ಎಂದರು.
ಪ್ರತಿಭಟನಾ ಮೆರವಣಿಗೆಯಲ್ಲಿ ನಗರದ ಸಕಲ ಸಮಾಜದ ಬಾಂಧವರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ, ಮಾಜಿ ಶಾಸಕ ವೀರಣ್ಣ ಚರಂತಿಮಠ, ನಾರಾಯಣಸಾ ಭಾಂಡಗೆ, ರಾಜು ನಾಯ್ಕರ, ಬಸವರಾಜ ಯಂಕಂಚಿ, ಡಾ.ಎಂ.ಎಸ್.ದಡೇನವರ, ಹಿಂದೂ ಸಂಘಟನೆಯ ಮುಖಂಡರು, ನಗರಸಭೆ ಸದಸ್ಯರು, ಸಕಲ ಸಮಾಜದ ಪದಾಧಿಕಾರಿಗಳು ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.