ಹಾಸನ
ರಾಜ್ಯದಲ್ಲಿ ಮಹಿಳೆಯತ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಸ್ಥಗಿತ ಎಂಬುದು ಕೇವಲ ವದಂತಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕೋಡಿ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಯಾವುದೇ ಕಾರಣದಿಂದ ಈ ಯೋಜನೆ ಸ್ಥಗಿತ ಆಗೋದಿಲ್ಲ. ಯಾರು ಈ ರೀತಿಯಲ್ಲಿ ಹಬ್ಬಿಸಿದಾರೊ ಗೊತ್ತಿಲ್ಲ ಎಂದರು.
ಪ್ರತಿ ಪಕ್ಷದವರೋ ಯಾರೋ ಹೀಗೆ ಹಬ್ಬಿಸಿದಾರೊ ಗೊತ್ತಿಲ್ಲ ಆದರೆ ಈ ಯೋಜನೆ ಸ್ಟಾಪ್ ಆಗಲ್ಲ. ಎರಡು ವರ್ಷದ ಬಳಿಕ ಹಿರಿಯ ಸಚಿವರು ಬದಲಾವಣೆ ಗೆ ಸಿದ್ದ ಆಗಬೇಕು ಎಂಬ ಸಚಿವ ಮುನಿಯಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಅಭಿಪ್ರಾಯ ಅದರಲ್ಲಿ ತಪ್ಪೇನಿದೆ ಎಂದು ಚಲುವರಾಯಸ್ಚಾಮಿ ಪ್ರಶ್ನಿಸಿದರು.
ಅವರು ಹಿರಿಯ ಸಚಿವರು, ಕೇಂದ್ರದಲ್ಲಿ ಕೂಡ ಸಚಿವರಾಗಿದ್ದರು. ಅವರು ಅವರ ಅಭಿಪ್ರಾಯ ಹೇಳಿದ್ದಾರೆ ಎಂದರು.
ಆ ಅಭಿಪ್ರಾಯ ತೀರ್ಮಾನ ಮಾಡೋದು ಎಐಸಿಸಿ ಹಾಗು ಸಿಎಂ ಮತ್ತು ಡಿಸಿಎಂ. ಅಧಿಕಾರ ಹಂಚಿಕೆ ಎನ್ನೊ ವಿಚಾರ ಈ ವರೆಗೆ ಚರ್ಚೆ ಆಗಿಲ್ಲ. ಆದರೆ ಬೇರೆಯವರಿಗು ಅದಿಕಾರ ಕೊಡೊದು ತಪ್ಪೇನು ಅಲ್ಲವಲ್ಲ ಎಂದರು.
ಇರುವವರನ್ನು ಬಿಟ್ಟು ಬೇರೆಯವರಿಗೆ ಅವಕಾಶ ನೀಡಿದ್ರೆ ತಪ್ಪಿಲ್ಲ ಎಂದ ಕೃಷಿ ಸಚಿವರು*ಶಿವಲಿಂಗೇಗೌಡ ಅವರಿಗೆ ಮುಂದೆ ಸಚಿವರಾಗ್ತಾರೆ ಎಂಬ ಚರ್ಚೆ ವಿಚಾರ*ಅವರಿಗೆ ಮುಂದೆ ಒಳ್ಳೆಯದಾಗುತ್ತೆ ಎಂದು ಹೇಳಿದಿನಿ ಆದರೆ ಎಲ್ಲವನ್ನು ತೀರ್ಮಾನ ಮಾಡೋದು ಪಕ್ಷವೇ ಅಲ್ಲವಾ ಚಲುವರಾಯಸ್ಚಾಮಿ ಹಾಗು ಜಮೀರ್ ಅಹಮದ್ ಸಂಬಂದ ಸರಿಯಿಲ್ಲ ಎಂಬ ಮಾಜಿ ಶಾಸಕ ಸುರೇಶ ಗೌಡ ಹೇಳಿಕೆ ಬಗ್ಗೆ ಪ್ರಶ್ನೆಗೆ ಸುರೇಶ್ ಗೌಡ ಹೇಳಿಕೆಗೆ ಗರಂ ಆದ ಚಲುವರಾಯಸ್ಚಾಮಿ ಅದನ್ನ ಹೇಳೋಕೆ ಅವರಾರು ಎಂದು ಕಿಡಿ ಕಾರಿದರು.
ಜಮೀರು ನಾನು ದೂರ ಆಗ್ತೀವೊ ಹತ್ರಾ ಆಗ್ತಿವೊ ಅದು ನಮ್ಮಿಬ್ಬರ ವಿಚಾರ ಬೇರೆಯವರು ಇದರ ಮದ್ಯದಲ್ಲಿ ಬಾಯಿ ಹಾಕೊ ಅಗತ್ಯ ಏನಿದೆ ಇಲ್ಲದ್ದು ಸಲ್ಲದ್ದು ಮಾತಾಡಿ ಏನೋ ಒಂದು ಪ್ರಚಾರ ಪಡೆಯೋದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರು ಹೇಳಿದ್ದಕ್ಕೆಲ್ಲಾ ಉತ್ತರ ಕೊಡ ಬೇಕಿಲ್ಲ ಎಂದು ಗುಡುಗಿದ ಚಲುವರಾಯಸ್ಚಾಮಿ