ಪದವಿ ಪಾಸಾಗಿದ್ಯಾ..? ಕೇಂದ್ರ ಸರ್ಕಾರಿ ಉದ್ಯೋಗ ಪಡೆಯುವ ಆಸೆ ಇದ್ಯಾ? ಹಾಗಿದ್ರೆ ನಿಮಗಿದೋ ಇಲ್ಲಿದೆ ಗುಡ್ ನ್ಯೂಸ್. ಇಂಟೆಲಿಜೆನ್ಸ್ ಬ್ಯೂರೋ ಗ್ರೇಡ್ 2 ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ.
ಹೈಲೈಟ್ಸ್:
ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಉದ್ಯೋಗ.
ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಬಹುದು.
ಒಟ್ಟು 995 ಹುದ್ದೆಗಳಿಗೆ ಅರ್ಜಿ ಅಹ್ವಾನ.
intelligence bureau acio grade ii executive recruitment 2023
intelligence bureau acio grade ii executive recruitment 2023
ADVT: ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿದೆ ಸ್ಮಾರ್ಟ್‌ಫೋನ್‍ಗಳು! ಬರೀ ರೂ, 6999ಯಿಂದ ಆರಂಭ.
ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಗುಪ್ತಚರ ಮಂಡಳಿಯ ಅಸಿಸ್ಟಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ ಗ್ರೇಡ್ 2 / ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿಯುಳ್ಳವರು ಅರ್ಹತೆ, ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.
ನೇಮಕಾತಿ ಪ್ರಾಧಿಕಾರ : ಗುಪ್ತಚರ ಇಲಾಖೆ
ಹುದ್ದೆಗಳ ಹೆಸರು : ಅಸಿಸ್ಟಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ ಗ್ರೇಡ್ 2 / ಎಕ್ಸಿಕ್ಯೂಟಿವ್
ಹುದ್ದೆಗಳ ಸಂಖ್ಯೆ : 995
ವಿದ್ಯಾರ್ಹತೆ : ಯಾವುದೇ ಡಿಗ್ರಿ ಅನ್ನು ಅಂಗೀಕೃತ ವಿವಿ / ಶಿಕ್ಷಣ ಸಂಸ್ಥೆಗಳಿಂದ ಪಡೆದಿರಬೇಕು.
ವೇಗವಾಗಿ ಜಾಬ್ ಹುಡುಕುವುದು ಹೇಗೆ?
ಗುಪ್ತಚರ ಇಲಾಖೆಯು ಒಟ್ಟು 995 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಈ ಹುದ್ದೆಗಳ ಪೈಕಿ ಸಾಮಾನ್ಯ ವರ್ಗದವರಿಗೆ 377, ಆರ್ಥಿಕವಾಗಿ ಹಿಂದುಳಿದವರಿಗೆ 129, ಒಬಿಸಿಗೆ 222, ಎಸ್‌ಸಿ’ಗೆ 134, ಎಸ್‌ಟಿ’ಗೆ 133 ಹುದ್ದೆಗಳು ಮೀಸಲಿವೆ.
ಏಮ್ಸ್‌ನಲ್ಲಿ 3036 ಗ್ರೂಪ್ ಬಿ, ಗ್ರೂಪ್ ಸಿ ಹುದ್ದೆಗಳ ನೇಮಕ: ಆನ್‌ಲೈನ್ ಅರ್ಜಿ ಆಹ್ವಾನ
ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು.
ಒಬಿಸಿ ವರ್ಗದವರಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಪ್ರಮುಖ ದಿನಾಂಕಗಳು
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 25-11-2023
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 15-12-2023
ಇಂಡಿಯನ್ ಏರ್‌ಫೋರ್ಸ್ ನೇಮಕ: 317 ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೇಂದ್ರ ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್ ವಿಳಾಸ https://www.mha.gov.in/en# ಕ್ಕೆ ಭೇಟಿ ನೀಡಿ. ನವೆಂಬರ್ 25 ರಂದು ಅರ್ಜಿ ಲಿಂಕ್ ಆಕ್ಟಿವೇಟ್ ಆಗಲಿದ್ದು, ಅಂದಿನಿಂದ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ ರೂ.450.
ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ರೂ.100.
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿ ಮಾಡಬಹುದಾಗಿದೆ.
ಆಯ್ಕೆ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನ, ಮೂಲದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ನಡೆಸಲಾಗುತ್ತದೆ.
ಅಸಿಸ್ಟಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ ಗ್ರೇಡ್ 2 / ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ವೇತನ ಶ್ರೇಣಿ : ರೂ.44,900-1,42,400.
ನ.24 ಕ್ಕೆ 75,768 ಕಾನ್ಸ್‌ಟೇಬಲ್’ಗಳಿಗೆ ಅಧಿಸೂಚನೆ: ಅರ್ಹತೆ, ಪ್ರಮುಖ ದಿನಾಂಕ, ಅರ್ಜಿ ಮಾಹಿತಿಗಳು ಇಲ್ಲಿವೆ..
ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಪದವಿ ಪ್ರಮಾಣ ಪತ್ರ, ಇತರೆ ಅಗತ್ಯ ದಾಖಲೆಗಳು ಬೇಕು. ಆನ್‌ಲೈನ್ ಹೊರತುಪಡಿಸಿ, ಇತರೆ ಯಾವುದೇ ಮಾರ್ಗದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಅರ್ಜಿ ಶುಲ್ಕವನ್ನು ಮಾತ್ರ ಆಫ್‌ಲೈನ್ ಚಲನ್ ಮೂಲಕ ಅಥವಾ ಆನ್‌ಲೈನ್ ಲೈನ್ ಮೂಲಕ ಪಾವತಿಸಬಹುದು.