ಬಾಗಲಕೋಟೆ
ಜಿಲ್ಲೆಯ ಹುನಗುಂದ ವಲಯ ವ್ಯಾಪ್ತಿಯ ಕಮತಗಿ ಕ್ರಾಸ್‌ನಲ್ಲಿ ಜಪ್ತಿ ವೇಳೆ ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ ಗೋವಾ ರಾಜ್ಯದ ೧೦೬ ಲೀಟರ್ ಮಧ್ಯ ಹಾಗೂ ಲಾರಿಯನ್ನು ಅಬಕಾರಿ ಉಪ ನಿರೀಕ್ಷಕ ಹಣಮಂತ ಭಜಂತ್ರಿ ನೇತೃತ್ವದ ತಂಡ ಜಪ್ತಿ ಮಾಡಿದೆ.
ಬೆಳಗಾವಿ ಅಬಕಾರಿ ಅಪರ ಆಯುಕ್ತ ವೈ. ಮಂಜುನಾಥ, ಅಬಕಾರಿ ಜಂಟಿ ಆಯುಕ್ತ ಪಿರೋಜಖಾನ್ ಖಿಲ್ಲೇದಾರ ಹಾಗೂ ಜಿಲ್ಲಾ ಅಬಕಾರಿ ಉಪ ಆಯುಕ್ತ ಶಿವಲಿಂUಪ್ಪ ಬನಹಟ್ಟಿ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇರೆಗೆ ಲಾರಿಯನ್ನು ತಪಾಸಣೆ ಮಾಡಿದಾಗ ಗೋವಾ ರಾಜ್ಯದ ಮಧ್ಯವನ್ನು ಹೊಂದಿ ಸಾಗಾಣಿಕೆ ಮಾಡುತ್ತಿರುವುದು ಕಂಡುಬAದಿತು. ಅಂದಾಜು ೪೯೭೦೦ ರೂ.ಗಳ ಮೌಲ್ಯದ ಒಟ್ಟು ೧೦೬ ಲೀಟರ್ ಮಧ್ಯ ಹಾಗೂ ಲಾರಿ (ಒಟ್ಟು ಮೌಲ್ಯ ೧೦.೪೯ ಲಕ್ಷ) ವಶಪಡಿಸಿಕೊಂಡು ಪ್ರಕರಣದ ದಾಖಲಿಸಲಾಗಿದೆ.
ಅಬಕಾರಿ ನಿರೀಕ್ಷಕ ಅರುಣ ಜೇವರಗಿ ಪ್ರಕರಣ ಪ್ರಕರಣ ದಾಖಲಿಸಿ ಸದರಿ ಆರೋಪಿ ತೆಲಂಗಾಣ ರಾಜ್ಯ ನಾಗರ ಕರ್ನೂಲ ಜಿಲ್ಲೆಯ ಗಾಂಧೀನಗರದ ಮಹಮ್ಮದ ಇಜಾಸ್ ಇಸ್ಮಾಯಿಲ್ ಅವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ದಾಳಿ ವೇಳೆಯಲ್ಲಿ ಅಬಕಾರಿ ನಿರೀಕ್ಷಕರಾದ ಶಿವಾನಂದ ಹೂಗಾರ, ಜಯ ಉಮದಿ, ಮಂಜುನಾಥ ಸಿಂಗರಡ್ಡಿ, ಅಬಕಾರಿ ಉಪ ನಿರೀಕ್ಷಕ ವೆಂಕಣ್ಣ ಗಿರಡ್ಡಿ, ಸುಧಾ ಕರಿಗಾರ, ಎಸ್.ಜಿ.ಅಂಗಡಿ, ಅಬಕಾರಿ ಪೇದೆಗಳಾದ ಮಹೇಶ ಇರಳಿ, ಸುಭಾಸ್ ಕೋಲಕಾರ, ಮಹಾಂತಪ್ಪ ಸೂಳಿಭಾವಿ, ಚೆನ್ನಬಸು ಪೂಜಾರ, ಹನಮಗೌಡ ಪಾಟೀಲ, ವಾಹನ ಚಾಲಕ ಪ್ರಕಾಶ ಚಿಮ್ಮಲಗಿ, ಶಿವಾನಂದ ತಳವಾರ, ಹುಸನಪ್ಪ ಪಕೀರನ್ನವರ ಇದ್ದರು.