This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local NewsState News

ಮಹಿಳಾ ಕ್ಯಾಂಟೀನ್‍ನಲ್ಲಿ ಉಪಹಾರ ಸವಿದ ಸಿಇಓ, ಎಡಿಸಿ

ಮಹಿಳಾ ಕ್ಯಾಂಟೀನ್‍ನಲ್ಲಿ ಉಪಹಾರ ಸವಿದ ಸಿಇಓ, ಎಡಿಸಿ

ಬಾಗಲಕೋಟೆ

ಜಿಲ್ಲಾಡಳಿತ ಭವನದ ಆವರಣದಲ್ಲಿ ಹೊಸದಾಗಿ ಪ್ರಾರಂಭಿಸಲಾದ ಸಂಗಮೇಶ್ವರ ಸಂಜೀವಿನಿ ಮಹಿಳಾ ಕ್ಯಾಂಟೀನ್‍ಗೆ ಜಿಲ್ಲಾ ಪಂಚಾಯತ ಸಿಇಓ ಶಶೀಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ. ಮುಖ್ಯ ಯೋಜನಾಧಿಕಾರಿ ಪುನಿತ್, ಯೋಜನಾಧಿಕಾರಿ ಎನ್.ವಾಯ್.ಬಸರಿಗಿಡದ ಭೇಟಿ ನೀಡಿ ಉಪಹಾರ ಸವಿದರು.

ಜಿಲ್ಲಾ ಪಂಚಾಯತ ವತಿಯಿಂದ ಎನ್.ಆರ್.ಎಲ್.ಎಂ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು 2 ಲಕ್ಷ ರೂ.ಗಳನ್ನು ಗದ್ದನಕೇರಿಯ ಲಕ್ಷ್ಮೀ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಕ್ಕೆ ನೀಡಲಾಗಿದೆ. ಈ ಹಣದಲ್ಲಿ ಸಂಗಮೇಶ್ವರ ಸಂಜೀವನಿ ಕ್ಯಾಂಟೀನ್ ಪ್ರಾರಂಭಿಸಲು ನೆರವು ದೊರೆತಂತಾಗಿದೆ ಎಂದು ಸಿಇಓ ಶಶೀಧರ ಕುರೇರ ತಿಳಿಸಿದರು.

ಕಳೆದ 2-3 ದಿನದಿಂದ ಪ್ರಾರಂಭವಾದ ಕ್ಯಾಂಟೀನ್‍ಗೆ ಭೇಟಿ ನೀಡಿದ ಅಧಿಕಾರಿಗಳು ಉಪಹಾರ ಸೇವಿಸುವ ಮೂಲಕ ಅವರಲ್ಲಿ ಮತ್ತಷ್ಟು ಸ್ಪೂರ್ತಿ ತುಂಬಿದರು. ಅಲ್ಲದೇ ವ್ಯಾಪಾರ ವಹಿವಾಟಿನ ಮಾಹಿತಿಯನ್ನು ಪಡೆದುಕೊಂಡರು. ಕ್ಯಾಂಟೀನ್‍ನಲ್ಲಿ ಲಭ್ಯವಿರುವ ಉಪಹಾರಗಳ ಮಾಹಿತಿಯನ್ನು ಪಡೆದುಕೊಂಡ ಅವರು ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಕ್ಯಾಂಟೀನ್ ನಡೆಸುವ ಮಹಿಳಾ ಸಂಘದ ಸದಸ್ಯೆ ಸ್ಮೀತಾ ಅವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮ ಉಕ್ಕಲಿ, ನಗರಸಭೆ ಪೌರಾಯುಕ್ತ ರಮೇಶ ಜಾದವ, ಜಿ.ಪಂ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಇದ್ದರು.

*9 ರಂದು ಯುವ ಸೌರಭ*
———————-
ಬಾಗಲಕೋಟೆ

: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಕರ್ನಾಟಕ ಸಂಭ್ರಮ 50ರ ಅಂಗವಾಗಿ ಡಿಸೆಂಬರ 9 ರಂದು ಯುವ ಸೌರಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚಾಲುಕ್ಯ ರಂಗಮಂದಿರಲ್ಲಿ ಜರಗುವ ಕಾರ್ಯಕ್ರಮವನ್ನು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶಾಸಕ ಎಚ್.ವಾಯ್.ಮೇಟಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನವದೆಹಲಿ ಕರ್ನಾಟಕ ವಿಶೇಷ ಪ್ರತಿನಿಧಿ-2 ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಇತರೆ ಗಣ್ಯಮಾನ್ಯರು ಆಗಮಿಸಲಿದ್ದಾರೆ.
ಯುವ ಸೌರಭದಲ್ಲಿ ಸುಗಮ ಸಂಗೀತ, ಜನಪದ ಗೀತೆ, ಸಮೂಹ ನೃತ್ಯ, ನಾಟಕ/ದೊಡ್ಡಾಟ, ಡೊಳ್ಳು ಕುಣಿತ, ಲಂಬಾಣಿ ನೃತ್ಯ ಕಾರ್ಯಕ್ರಮ ನಡೆಯಲಿವೆ.

*ಪಿಂಚಣಿದಾರರಿಗೆ ಡಿಜಿಟಲ್ ಲೈಪ್ ಸರ್ಟಿಪಿಕೇಟ್*
—————————————
ಬಾಗಲಕೋಟೆ:

ರಾಜ್ಯ ಸರಕಾರದ ಪಿಂಚಣಿದಾರರಿಗೆ, ಕುಟುಂಬ ಪಿಂಚಣಿದಾರರಿಗೆ ಡಿಜಿಟಲ್ ಲೈಪ್ ಸರ್ಟಿಪಿಕೇಟ್ ಸೇವೆಗಳನ್ನು ಸುಲಭವಾಗಿ ಒದಗಿಸಲು, ರಾಜ್ಯ ಸರಕಾರದ ಖಜಾನೆ ಆಯುಕ್ತರೊಂದಿಗೆ ಭಾರತೀಯ ಅಂಚೆ ಇಲಾಖೆಯ ಅಡಿಯಲ್ಲಿ ಬರುವ ಇಂಡಿಯಾ ಪೊಸ್ಟಲ್ ಪೇಮೆಂಟ್ಸ್ ಬ್ಯಾಂಕ್ ಎಂಒಯುಗೆ ಸಹಿ ಹಾಕಿದೆ.
ಪಿಂಚಣಿದಾರರು ವೈಯಕ್ತಿಕವಾಗಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವ ಸಮಯದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ತಪ್ಪಿಸಲು ಭಾರತೀಯ ಅಂಚೆ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯಾ ಪೋಸ್ಟ ಪೇಮೆಂಟ್ಸ್ ಬ್ಯಾಂಕ್ ಪಿಂಚಣಿದಾರರ ಮನೆ ಬಾಗಿಲಿನಲ್ಲಿ ಡಿಜಿಟಲ್ ಲೈಪ್ ಪ್ರಮಾಣ ಪತ್ರವನ್ನು ಸಲ್ಲಿಸಲು ವ್ಯವಸ್ಥೆ ಮಾಡಿದೆ. ಪಿಂಚಣಿದಾರರು ತಮ್ಮ ಡಿಜಿಟಲ್ ಲೈಪ್ ಪ್ರಮಾಣ ಪತ್ರವನ್ನು ಕೇಲವೇ ನಿಮಿಷಗಳಲ್ಲಿ ಪೋಸ್ಟಮನ್ ಮೂಲಕ ಆಧಾರ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಓ ಸಂಖ್ಯೆ ಮತ್ತು ಪಿಂಚಣಿದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಮ್ಮ ಬಯೋಮೆಟ್ರಿಕ್ (ಬೆರಳಚ್ಚು) ವೆರಿಪೈ ಮಾಡಿ ಸಲ್ಲಿಸಬಹುದಾಗಿದೆ.
ಇಂಡಿಯಾ ಪೋಸ್ಟ ಪೇಮೆಂಟ್ಸ್ ಬ್ಯಾಂಕ್ ಅನ್ನು ಸೆಪ್ಟೆಂಬರ 1, 2018 ರಂದು ರಾಷ್ಟ್ರವ್ಯಾಪಿ ಪ್ರಾರಂಭಿಸಲಾಯಿತು. ಐಪಿಪಿಬಿಯ ಸೇವೆಗಳು ಈಗಾಗಲೇ ಸೇರ್ಪಡೆಗೊಂಡಿರುವ 8 ಕೋಟಿಕ್ಕಿಂತಲೂ ಹೆಚ್ಚ ಗ್ರಾಹಕರಿಗೆ ಹಾಗೂ ಇನ್ನಿತರರಿಗೆ ದೇಶಾದ್ಯಂತ 1,36000 ಅಂಚೆ ಕಚೇರಿಗಳಲ್ಲಿ ಲಭ್ಯವಿದೆ. ಕರ್ನಾಟಕದಲ್ಲಿ ಐಪಿಪಿಬಿಯು 31 ಶಾಖೆಗಳನ್ನು ಹೊಂದಿದ್ದು, ಅದರ ಜೊತೆಗೆ 9500+ ಪೋಸ್ಟಮನ್‍ಗಳು ಅವರ ದೈನಂದಿನ ಡೆಲಿವರಿ ಬೀಟ್‍ನಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಸ್ಮಾರ್ಟಪೋನ್ ಮತ್ತು ಬಯೋಮೆಟ್ರಿಕ್ ಸಾಧನಗಳನ್ನು ಹೊಂದಿದ್ದಾರೆ.
ಕರ್ನಾಟಕ ಸರಕಾರದ ಪಿಂಚನಿದಾರರು, ಕುಟುಂಬ ಪಿಂಚಣಿದಾರರು ತಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಅಥವಾ ಪೊಸ್ಟಮನ್ ಮೂಲಕ ಕೇವಲ 70 ರೂ. ಶುಲ್ಕ ನೀಡಿ ಈ ಸೌಲಭ್ಯವನ್ನು ಪಡೆದು ತಮ್ಮ ಡಿಜಿಟಲ್ ಲೈಪ್ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಅಂಚೆ ಇಲಾಖೆಯ ಸಹಾಯ ಅಧೀಕ್ಷಕ ಎಂ.ಎಲ್.ಬಾಗವಾನ್ ತಿಳಿಸಿದ್ದಾರೆ.

*ಯಶಸ್ವಿನಿ ಯೋಜನೆಗೆ ನೋಂದಣಿ*
—————————–
ಬಾಗಲಕೋಟೆ: ಸಹಕಾರ ಇಲಾಖೆಯಿಂದ ಸರ್ಕಾರದ ಬಹು ಮುಖ್ಯ ಯೋಜನೆಗಳಲ್ಲಿ ಒಂದಾದ ಯಶಸ್ವಿನಿ ರಕ್ಷಣಾ ಯೋಜನೆಯನ್ನು ಸರ್ಕಾರವು 2023-24ನೇ ಸಾಲಿನ ಸಹಕಾರಿ ಸಂಘದ ಸದಸ್ಯರುಗಳನ್ನು ಹೊಸ ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಿದೆ.
ಪ್ರಸಕ್ತ ಸಾಲಿನ ನೋಂದಣಿ ಕಾರ್ಯ 1, ಜನವರಿ 2024 ರಿಂದ ಪ್ರಾರಂಭವಾಗಿ 28 ಫೆಬ್ರವರಿ 2024ರ ಅವಧಿಯನ್ನು ನಿಗದಿಪಡಿಸಲಾಗಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ವಿಧದ ಸಹಕಾರ ಸಂಘಗಳಲ್ಲಿರುವ ಅರ್ಹ ಸದಸ್ಯರುಗಳು ಈ ಯೋಜನೆಯಡಿಯಲ್ಲಿ ಸದಸ್ಯರು ನೋಂದಾಯಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ.08354-235056ಗೆ ಸಂಪರ್ಕಿಸಬಹುದಾಗಿದೆ.

Nimma Suddi
";