ಬಾಗಲಕೋಟೆ
ಹನ್ನೆರಡನೇ ಶತಮಾನದಲ್ಲಿದ್ದ ಕಾಯಕನಿಷ್ಠ ಯೋಗಿ ಹಾಗೂ ನಿಜಾನುಭಾವಿ ಶರಣ ನುಲಿಯ ಚಂದಯ್ಯನವರು ಎಂದು ಕೊರಮ ಸಮಾಜದ ಉಪಾಧ್ಯಕ್ಷ ಗದ್ದೆಪ್ಪ ಭಜಂತ್ರಿ ಹೇಳಿದರು.
ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರ ಎಸ್‌ಸಿ ಗ್ರಾಮದ ಕೊರಮ ಸಮಾಜದಿಂದ ಆಯೋಜಿಸಿದ್ದ ನೂಲಿಯ ಚಂದಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ವಚನಗಳ ಮೂಲಕ ಕಾಯಕ ಕಡ್ಡಾಯ ಎಂಬ ಆಶಯ ಸಾರಿದ್ದಾರೆ. ಗುರು, ಲಿಂಗ, ಜಂಗಮ ತತ್ವವನ್ನು ಜಗತ್ತಿಗೆ ಪಸರಿಸಿ, ನುಡಿದಂತೆ ನಡೆದ ಶ್ರೇ?À್ಠ ವಚನಕಾರ ನುಲಿಯ ಚಂದಯ್ಯನವರು ಎಂದು ಹೇಳಿದರು.
ಬಸವಣ್ಣನವರ ಸಾಮಾಜಿಕ ಸಮಾನತೆಯ ವಿಚಾರಧಾರೆ, ಚಿಂತನೆಗೆ ಆಕರ್ಷಿತರಾಗಿ ಕಲ್ಯಾಣಕ್ಕೆ ತೆರಳಿ ಕಾಯಕ ಜೀವಿಯಾಗಿ, ದಾಸೋಹ ಮಾಡುತ್ತ ಬದುಕಿದರು. ನುಲಿಯ ಚಂದಯ್ಯ ದಲಿತ ವರ್ಗದ ಹೆಮ್ಮೆಯ ವಚನಕಾರ ಎಂದರು.
ನೂಲಿಯ ಚಂದಯ್ಯ ಜಯಂತಿ ಅಂಗವಾಗಿ ಭಾವಚಿತ್ರ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಅನ್ನಪೂರ್ಣ ಭಜಂತ್ರಿ, ಹನಮಂತ ಭಜಂತ್ರಿ, ಶಿವಾನಂದ ಭಜಂತ್ರಿ, ಶಶಿಕಾಂತ್ ಭಜಂತ್ರಿ, ಮಾರುತಿ ಭಜಂತ್ರಿ, ಯಮನೂರ ಭಜಂತ್ರಿ, ಶ್ರೀಶೈಲ ಭಜಂತ್ರಿ, ಶಿವಪ್ಪ ಭಜಂತ್ರಿ, ಮರಿಯಪ್ಪ ಭಜಂತ್ರಿ ಹಾಗೂ ಸಮಾಜದ ಸದಸ್ಯರು ಇದ್ದರು.