ಪೂಜಾರ್ ಒಬ್ಬ ಜಂಪಿಂಗ್ ಸ್ಟಾರ್
ಬಾಗಲಕೋಟೆ
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ್ ಒಬ್ಬ ಜಂಪಿAಗ್ ಸ್ಟಾರ್ ಎಂದು ನೇರವಾಗಿ ಹೇಳುತ್ತೇನೆ. ಇಂತವರಿAದ ಪಕ್ಷದ ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವೇಶ್ವರ ವಿದ್ಯಾವರ್ಧಕ ಸಂಘಕ್ಕೆ ನೀಡಿದ್ದು ಜಾಗೆಯ ರದ್ದು ವಿಚಾರದಲ್ಲಿ ತಮ್ಮ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಪೂಜಾರ ತಿಳಿಸಿದ್ದಾರೆ. ಅವರ ಸವಾಲನ್ನು ಸ್ವೀಕರಿಸುತ್ತೇನೆ. ಅವರ ಎಲ್ಲ ಆರೋಪಗಳಿಗೆ ಕಾನೂನಿನ ಮೂಲಕವೇ ಉತ್ತರ ನೀಡುತ್ತೇನೆ. ಎಲ್ಲ ಪಕ್ಷವನ್ನು ಸುತ್ತಾಡಿ ಬಂದಿರುವ ಪಿ.ಎಚ್.ಪೂಜಾರ ಒಬ್ಬ ಜಂಪಿAಗ್ ಸ್ಟಾರ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬವಿವ ಸಂಘದ ಸಂಘಕ್ಕೆ ನೀಡಲಾಗಿದ್ದ ಜಾಗೆ ರದ್ದು ವಿಚಾರದಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿರುವುದಕ್ಕೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಅವರ ಸವಾಲನ್ನು ಸ್ವೀಕರಿಸಿರುವ ಮಾಜಿ ಶಾಸಕ, ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರು ಕಾನೂನಿನ ಮೂಲಕ ಉತ್ತರ ನೀಡಲು ತಾವು ಸಿದ್ಧರಿರುವುದಾಗಿ ಹೇಳಿದ್ದಾರೆ. ಅಲ್ಲದೇ ಎಲ್ಲ ಪಕ್ಷವನ್ನು ಸುತ್ತಾಡಿ ಬಂದಿರುವ ಪಿ.ಎಚ್.ಪೂಜಾರ ಒಬ್ಬ ಜಂಪಿಂಗ್ ಸ್ಟಾರ್ ಎಂದೂ ಅವರು ಇದೇ ವೇಳೆ ಲೇವಡಿ ಮಾಡಿದ್ದಾರೆ.
ಓರ್ವ ಸಚಿವರ ಕಚೇರಿಯಲ್ಲಿ ಕುಳಿತು ಸಂಘದ ಜಾಗೆಯನ್ನು ರದ್ದುಪಡಿಸುವಂತೆ ಇವರು ಹೇಳಿದ ವಿಚಾರದಲ್ಲಿ ಸಚಿವರು ಹಾಗೂ ಸಿಬ್ಬಂದಿಯ ಹೆಸರು ಸಂದರ್ಭ ಬಂದಾಗ ಹೇಳುವುದಾಗಿ ನಾನು ಮೊದಲೇ ತಿಳಿಸಿದ್ದೆ. ನನ್ನನ್ನು ಅವರು ಹಿಟ್ ಆಂಡ್ ರನ್ ಗಿರಾಕಿ ಅಂದಿದ್ದಾರೆ. ಯಾರಿಗೂ ಅಂಜುವ ಜಾಯಮಾನ ನನ್ನದಲ್ಲ. ನಾನು ಇಲ್ಲಿಯೇ ಇರುತ್ತೇನೆ. ಅಂಜಿ ಓಡುವ ಜಾಯಮಾನ ಏನಿದ್ದರೂ ಅದು ಪೂಜಾರ ಅವರದೇ ಎಂದು ಟೀಕಿಸಿದರು.
ನಾನು ನೇರವಾಗಿ ಬಂದು ಟಿಕೆಟ್ ಪಡೆದಿದ್ದೇನೆ ಎಂದಿದ್ದಾರೆ. ದುದ್ದಾರೆ. ದೆ ಎನ್ನುತ್ತಾರೆ. ಬಿಜೆಪಿಯಲ್ಲಿ ದುಡಿದವರಿಗೆ ಟಿಕೆಟ್ ನೀಡುವ ವ್ಯವಸ್ಥೆಯಿದೆ. ದುಡಿಯದೆ ಹೋಗಿದ್ದರೆ ನೇರವಾಗಿ ಹೈಕಮಾಂಡ್ ನನಗೆ ಟಿಕೆಟ್ ನೀಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು. ಪಕ್ಷ ಹೆತ್ತ ತಾಯಿಯಿದ್ದಂತೆ, ಕಾರ್ಯಕರ್ತರು ದೇವರು ಎಂದೆಲ್ಲ ಮಾತನಾಡುವವರು ಪಕ್ಷಾಂತರ ಮಾಡಿದ್ದು ಯಾಕೆ, ಕಾರ್ಯಕರ್ತರಿಗೆ ಮೋಸ ಮಾಡಿದ್ದು ಯಾಕೆ ಎಂಬುದಕ್ಕೆ ಉತ್ತರ ನೀಡಲಿ. ಪಕ್ಷಕ್ಕೆ ದ್ರೋಹ ಬಗೆದು ಎಲ್ಲ ಪಕ್ಷವನ್ನು ಸುತ್ತಾಡಿ ಬಂದವರು ಪಕ್ಷ ನಿಷ್ಠೆ ಬಗ್ಗೆ ಮಾತನಾಡುತ್ತಾರೆ. ನನ್ನಿಂದಲೇ ಪಕ್ಷ ಬಿಟ್ಟೆ ಎನ್ನುವುದಾದರೆ ಈ ಪಟಾಲಂ ನಾನಿರುವಾಗಲೇ ಪಕ್ಷ ಸೇರಿಲ್ಲವೇ. ನಾನೇ ಕಾರಣನಾಗಿದ್ದರೆ ಪಕ್ಷಕ್ಕೆ ಈಗ ಏಕೆ ಮರಳುತ್ತಿದ್ದರು ಎಂದು ಮರು ಪ್ರಶ್ನೆ ಹಾಕಿದರು.
ಜಿ.ಎಸ್.ನ್ಯಾಮಗೌಡರ ಚುನಾವಣೆ ನಾನು ಮಾಡಿಲ್ಲ ಎಂದು ಅವರ ಬಳಿಯಿಂದ ಹೇಳಿಸಲಿ ಅನುಮಾನ ಇದ್ದವರು ನ್ಯಾಮಗೌಡರನ್ನೇ ವಿಚಾರಿಸಲಿ, ಡಿಸಿಸಿ ಬ್ಯಾಂಕ್ ವಿಚಾರದಲ್ಲೂ ಹುನಗುಂದದ ಮಾಜಿ ಶಾಸಕ ದೊಡ್ಡನಗೌಡರ ಬಳಿಗೆ ತೆರಳಿ ನನ್ನ ಪಕ್ಷ ನಿಷ್ಠೆಯನ್ನು ಕೇಳಿಕೊಂಡು ಬರಲಿ. ೨೦೧೮ರಲ್ಲಿ ಕಾಂಗ್ರೆಸ್‌ನಿAದ ಶತಾಯಗತಾಯ ಟಿಕೆಟ್‌ಗೆ ಪ್ರಯತ್ನಿಸಿ ಅಲ್ಲಿ ಸಿಗದಿದ್ದಾಗ ಅವರು ಬಿಜೆಪಿಗೆ ಬಂದಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಅವರಿಗೆ ಮಾಡಿಲ್ಲ ಎಂದು ಹೇಳುವವರು ನಮ್ಮ ಕಾರ್ಯಕರ್ತರು ತುಳಸಿಗೇರಿಯಲ್ಲಿ ಆಣೆಪ್ರಮಾಣ ಮಾಡಲು ತೆರಳಿದಾಗ ನುಣಚಿಕೊಂಡರು ತಾನೇ ಹಿಟ್ ಆಂಡ್ ರನ್ ಗಿರಾಕಿ ಆಗಿದ್ದು, ನನ್ನ ಮೇಲೆ ಆಪಾದನೆ ಮಾಡುತ್ತಾರೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಬಾಗಲಕೋಟೆಯಲ್ಲಿ ಅಸ್ಲಂಬಾಬಾ ಹಾವಳಿ ಹೆಚ್ಚಾದಾಗ ಆತನ ವಿರುದ್ಧ ಇವರು ಧ್ವನಿ ಎತ್ತದಿರುವುದಕ್ಕೆ ಯಾವ ಹೊಂದಾಣಿಕೆ ಆಗಿತ್ತು ಗೊತ್ತಿದೆ. ಆತನಿಕೆ ಆಪ್ತನಾಗಿದ್ದ ವ್ಯಕ್ತಿ ನನಗೆ ತಿಂಗಳಿಗೆ ೬ ಲಕ್ಷ ರೂ. ನೀಡುತ್ತೇನೆ ಅವನ ಬಗ್ಗೆ ಮಾತನಾಡದಂತೆ ಆಮಿಷ ಒಡ್ಡಲು ಬಂದಾಗ ಬೈದು ಕಳಿಸಿದ್ದೆ ಆ ವ್ಯಕ್ತಿ ಇವರಿಗೂ ಆಪ್ತನಾಗಿದ್ದ ಎಂದು ಗಂಭೀರ ಆರೋಪ ಮಾಡಿದರು.
ಮುಳುಗಡೆ ಹಿನ್ನೀರು ನಗರಕ್ಕೆ ವ್ಯಾಪಿಸಿ ಮನೆಯಲ್ಲಿನ ಸಾಮಾನು, ಸರಂಜಾಮುಗಳು ನೀರಿನಲ್ಲಿ ತೇಲಿ ಹೊರಟಾಗ ಜನರಿಗೆ ಪುನರ್ವಸತಿ ಬಗ್ಗೆ ತಿಳಿ ಹೇಳುವುದನ್ನು ಬಿಟ್ಟು ಧರಣಿ ಕುಳಿತು ಅಲ್ಲಿಯೂ ಸಂತ್ರಸ್ತರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು. ಸಂಘರ್ಷದಿAದ ಬಂದಿದ್ದೇನೆ ಎಂದವರು ಯಾವ ಸಂಘರ್ಷವನ್ನೂ ನಾನು ನೋಡಿಲ್ಲ. ಬವಿವ ಸಂಘಕ್ಕೆ ಕಾರ್ಯಾಧ್ಯಕ್ಷನಾಗಿ ೩೪ ವರ್ಷವಾಗಿದೆ. ತಾಕತ್ತಿದ್ದರೆ ಅಲ್ಲಿಯೂ ಕೈ ಹಾಕಿ ನೋಡಲಿ ಎಂದು ಪೂಜಾರ ವಿರುದ್ಧ ಟೀಕಾಪ್ರಹಾರ ನಡೆಸಿದರು.
ವೀರಶೈವ-ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ ಅವರು ಮಾತನಾಡಿ, ಸಂತ್ರಸ್ತರು ನಿವೇಶನ ಪಡೆಯಲು ಸರ್ಕಾರದ ಅನುಮೋದನೆ ಬೇಕಿಲ್ಲ. ಬವಿವ ಸಂಘದ ಜಾಗೆಯನ್ನು ಉದ್ದೇಶಪೂರ್ವಕವಾಗಿ ರದ್ದುಪಡಿಸಿ ಕಾನೂನಿನ ಜ್ಞಾನವಿಲ್ಲದವರು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವೀರಶೈವ-ಲಿಂಗಾಯತರು ಇದನ್ನು ನೋಡಲು ಬಳೆತೊಟ್ಟು ಕುಳಿತಿಲ್ಲ. ಕಾನೂನಿನ ಮೂಲಕವಾದರೂ ನ್ಯಾಯ ಪಡೆದೇ ಪಡೆಯುತ್ತೇವೆ ಎಂದು ಹೇಳಿದರು.
ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮಾತನಾಡಿ, ಅನಗತ್ಯವಾಗಿ ಸಂಘದ ಜಾಗೆಯನ್ನು ರದ್ದುಪಡಿಸಲಾಗಿದ್ದು, ಕಾನೂನಿನ ಮೂಲಕವೇ ಇದಕ್ಕೆ ತಕ್ಕ ಉತ್ತರ ನೀಡುವುದಾಗಿ ಹೇಳಿದರು.
ಮುಖಂಡರಾದ ಶಿವಾನಂದ ಟವಳಿ, ರಾಜು ನಾಯ್ಕರ ಮಾತನಾಡಿ, ಬವಿವ ಸಂಘ ಬಿಟ್ಟು ಸುತ್ತಮುತ್ತಲು ಅಭಿವೃದ್ಧಿ ಆಗಿಲ್ಲ ಎಂದು ಟೀಕಿಸುವ ಕಾಂಗ್ರೆಸ್ ನಾಯಕರಿಗೆ ದಡ್ಡೆನ್ನವರ ಕ್ರಾಸ್, ಪೊಲೀಸ್ ಠಾಣೆ, ರೈಲು ನಿಲ್ದಾಣ ಬಳಿಯ ರಸ್ತೆಗಳು ಕಾಣಿಸುವುದಿಲ್ಲವೇ, ನವನಗರ ಅಭಿವೃದ್ಧಿ ಕಣ್ಣಿಗೆ ಕಾಣಿಸಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಬಿಟಿಡಿಎ ಮಾಜಿ ಸದಸ್ಯ ಕುಮಾರ ಯಳ್ಳಿಗುತ್ತಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಣಭಾವಿ, ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಯಲ್ಲಪ್ಪ ಬೆಂಡಿಗೇರಿ, ಮುರಿಗೆಪ್ಪ ನಾರಾ ಇತರರಿದ್ದರು.
ಸಂಘದ ಜಾಗೆ ರದ್ದು ವಿಚಾರದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಕಾಂಗ್ರೆಸ್ ಮುಖಂಡರನ್ನೂ ವೀರಣ್ಣ ಚರಂತಿಮಠ ಅವರು ತರಾಟೆಗೆ ತೆಗೆದುಕೊಂಡರು. ಸಂಘದ ಜಾಗೆ ರದ್ದಾಗಿರುವ ಬಗ್ಗೆ ಮಾತನಾಡುತ್ತಾರೆ. ಕಾಳಿದಾಸ, ಅಂಜುಮನ ಸಂಸ್ಥೆಗಳಿಗೆ ನಿಯಮ ಮೀರಿ ಜಾಗೆ ನೀಡಿರುವ ವಿಚಾರಕ್ಕೆ ಇವರು ಉತ್ತರಿಸುವುದಿಲ್ಲ, ಶಾಸಕರ ಅಳಿಯ ಡಿಎಚ್‌ಒ ರಾಜಕುಮಾರ ಯಗರಲ್ಲ ಅಕ್ರಮವಾಗಿ ೯೨ ಜನರನ್ನು ನೇಮಕಮಾಡಿ ರದ್ದಾಗಿರುವ ವಿಚಾರದಲ್ಲೂ ಇವರು ಮಾತನಾಡುವುದಿಲ್ಲ ಎಂದರು. ಎ ನಿವೇಶನ ಬದಲಾಗಿ ಈ ನಿವೇಶನಗಳನ್ನು ಮಾಡಲಾಗುತ್ತಿದ್ದು, ೯ ನಿವೇಶನಗಳ ಸಾಕ್ಷಿ ನನ್ನ ಬಳಿಯೇ ಇದೆ ಎಂದು ಹೇಳಿದರು.