ಚರಿತ್ರೆಗಿಂತ ಚಾರಿತ್ರ್ಯ ಮುಖ್ಯ ಜಗತ್ತಿಗೆ ಸಾರಿ ಶರಣ ದಾಸಿಮಯ್ಯ:ಶಾಸಕ ವೀರಣ್ಣ ಚರಂತಿಮಠ*
ಬಾಗಕೋಟೆ: ಚರಿತ್ರೆಗಿಂತ ಚಾರಿತ್ರ್ಯ ಮುಖ್ಯ ಎಂಬುದು ದಾಸಿಮಯ್ಯನ ತತ್ವವಾಗಿತ್ತು. ದಾಸಿಮಯ್ಯ ತಾತ್ವಿಕ ಚಿಂತನೆಯ ವಚನಕಾರರಾಗಿದ್ದರು ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ಶಿವಾನಂದ ಜೀನ್ ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಜೇಡರ ದಾಸಿಮಯ್ಯ ಅವರ ಜಯಂತಿ ನಿಮಿತ್ತ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಸಾರ್ವತ್ರಿಕ, ಸಾರ್ವಕಾಲಿಕ ವಿಚಾರಗಳೇ ದಾಸಿಮಯ್ಯ ವಚನಗಳಲ್ಲಿ ಮೂಡಿನಿಂತಿರುವ ತಾತ್ವಿಕ ಸಿದ್ದಾಂತವಾಗಿದೆ.
ಶ್ರದ್ದೆ ಮತ್ತು ಶುದ್ದತೆ ವ್ಯಕ್ತಿಯ,ವ್ಯಕ್ತಿತ್ವದ ಮುಖ್ಯ ಲಕ್ಷಣ, ಚರಿತ್ರೆಗಿಂತ ಚಾರಿತ್ರ್ಯ ಮುಖ್ಯ ಎಂಬುದು ದಾಸಿಮಯ್ಯ ನ ತತ್ವವಾಗಿತ್ತು.ವ್ಯಕ್ತಿಯ ಹಿತ ಚಿಂತನೆಗಾಗಿ ಇಹ ಪರಗಳೆರಡಕ್ಕೂ ಬೇಕಾದ ತಾತ್ವಿಕ ಚಿಂತನೆಯನ್ನು ಹೇಳಿದ ವಿಶಿಷ್ಟ ವಚನಕಾರ,ಸಮಾಜ ಸುಧಾರಕ.ಇದೇ ದೇವರ ದಾಸಿಮಯ್ಯ ತಾತ್ವಿಕ ಚಿಂತನೆಯ ವೈಶಿಷ್ಟ್ಯವಾಗಿದ್ದು ಎಂದರು.
ಈ ಕಾರ್ಯಕ್ರಮದಲ್ಲಿ ನೇಕಾರ ದುಗ್ಗಳ ಪತ್ತಿನ ಸಹಕಾರಿ ಸಂಘ,ನಿಯಮಿತ ಆದ್ಯಕ್ಷರಾದ ಅನುರಾಧ ಜಿಡಗಿ ಮಾತನಾಡಿ ದೇವರ ದಾಸಿಮಯ್ಯನವರ ಕುರಿತು ಮಾತನಾಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ,ಬೂಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ,ಬಿಟಿಡಿಎ ಸದಸ್ಯ ಕುಮಾರ ಯಳ್ಳಿಗುತ್ತಿ,
ಕುರುವಿನಶೆಟ್ಟಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಹಂಡಿ,ಉಪಾಧ್ಯಕ್ಷ ಬಸವರಾಜ ಅವರಾದಿ,ನಗರಮಂಡಲ ಅಧ್ಯಕ್ಷ ಸದಾನಂದ ನಾರಾ,ಗುಂಡು ಶಿಂಧೆ ಮುಂತಾದವರು ಇದ್ದರು.