ಬಹುತೇಕ ದುಬಾರಿ ಆಹಾರ ಪದಾರ್ಥಗಳ ಸಾಲಿನಲ್ಲಿ ಏಲಕ್ಕಿ ಕೂಡ ಪ್ರಮುಖ ಸ್ಥಾನದಲ್ಲಿ ಬಂದು ನಿಲ್ಲುತ್ತದೆ.ಮೂರ್ತಿ ಸಣ್ಣದಾದರೂ ಕೀರ್ತಿ ದೊಡ್ಡದು ಎನ್ನುವ ಮಾತಿದೆ. ಇದೇ ಮಾತು ಅಕ್ಷರಶಃ ಏಲಕ್ಕಿಗೂ ಕೂಡ ಅನ್ವಯವಾಗುತ್ತದೆ.ಹೆಚ್ಚಾಗಿ ಹಸಿರು ಬಣ್ಣದಲ್ಲಿ ಸಿಗುವ ಏಲಕ್ಕಿ ನೋಡಲು ಸಣ್ಣದಾಗಿದ್ದರೂ ಅದರ ಸುವಾಸನೆ ರುಚಿ ಹಾಗೂ ಇದರಲ್ಲಿ ಅಡಗಿರುವ ಆರೋಗ್ಯ ಗುಣಗಳು ಮಾತ್ರ ಅಪಾರ! ಸಾಮಾನ್ಯವಾಗಿ ಚಹಾದಿಂದು ಹಿಡಿದು ಹೈಫೈ ಬಿರಿಯಾನಿ ರೆಸಿಪಿಯ ತನಕವೂ ಕೂಡ ಬಳಕೆ ಮಾಡಲಾಗುತ್ತದೆ.
ಇನ್ನು ಏಲಕ್ಕಿಯು ತನ್ನಲ್ಲಿರುವಂತಹ ಔಷಧೀಯ ಗುಣಗಳಿಂದಾಗಿ, ಆಯುರ್ವೇದದಲ್ಲಿಯೂ ಕೂಡ ಇದನ್ನು ಚಿಕಿತ್ಸೆಯ ರೂಪದಲ್ಲಿ ಬಳಕೆ ಮಾಡುವರು.ಈ ಪುಟ್ಟ ಏಲಕ್ಕಿಯ ಉಪಯೋಗದಿಂದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಂದ ಹಿಡಿದು, ದೀರ್ಘಕಾಲದ ಕಾಯಿಲೆಗಳನ್ನು ಕೂಡ ನಿಯಂತ್ರಿಸಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ದಿನಾ ಒಂದೆರಡು ಏಲಕ್ಕಿಯನ್ನು ಹಾಗೆ ಜಗಿದು, ಅದರ ರಸವನ್ನು ಹೀರುತ್ತಾ ಬಂದರೆ, ಏನೆಲ್ಲಾ ಅರೋಗ್ಯ ಪ್ರಯೋಜನ ಗಳನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ನೋಡೋಣ…
ಹೃದಯಕ್ಕೆ ಒಳ್ಳೆಯದು
ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು, ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ನಮಗೆಲ್ಲಾ ಗೊತ್ತೇ ಇದೆ. ಹೀಗಾಗಿ ಹೃದಯದ ಕಾಳಜಿಯ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು.
ಈ ವಿಚಾರದಲ್ಲಿ ಏಲಕ್ಕಿ ತುಂಬಾನೇ ನೆರವಿಗೆ ಬರುತ್ತದೆ. ಪ್ರಮುಖ ವಾಗಿ ಮನುಷ್ಯನಿಗೆ ಸಡನ್ ಆಗಿ ಕಾಡುವ ಹೃದಯಾ ಘಾತವನ್ನು ತಪ್ಪಿಸುವ ಗುಣವನ್ನು ಈ ಪುಟ್ಟ ಏಲಕ್ಕಿ ಪಡೆದಿದೆ. ಇದಕ್ಕೆ ಪ್ರಮುಖ ಕಾರಣ, ಇದರಲ್ಲಿ ಕಂಡುಬರುವ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು
ಎದೆಯಲ್ಲಿ ಕಫಗಟ್ಟಿ ಆಗಿರುವ ಸಮಸ್ಯೆ ಇದ್ದವರಿಗೆ…
ಸಾಮಾನ್ಯವಾಗಿ ಚಳಿಗಾಲದಲ್ಲಿ ನೆಗಡಿ, ಶೀತ, ಜ್ವರ, ಕೆಮ್ಮು, ಗಂಟಲು ನೋವು, ಮುಂತಾಆದ ಅರೋಗ್ಯ ಸಮಸ್ಯೆಗಳು ಹೆಚ್ಚಿನವರಿಗೆ ಕಂಡು ಬರುತ್ತದೆ. ಆದರೆ ಕೆಲವೊಮ್ಮೆ ಕೆಮ್ಮಿನ ಸಮಸ್ಯೆ ಜಾಸ್ತಿ ಆಗಿಬಿಡುತ್ತದೆ!
ಒಂದು ವೇಳೆ ಈ ಸಮಸ್ಯೆ ಯನ್ನು ಹಾಗೆಯೇ ನಿರ್ಲಕ್ಷ್ಯ ಮಾಡು ತ್ತಾ ಹೋದರೆ, ಗಂಟಲು ಹಾಗೂ ಎದೆಯಲ್ಲಿ ಕಫ ತುಂಬಿ ಕೊಂಡು, ಮುಂದೆ ಅಸ್ತಮಾ, ದಮ್ಮು ಸಮಸ್ಯೆ ಆಗಿ ಬದಲಾ ಗುತ್ತದೆ.
ಈ ಬಗ್ಗೆ ತಜ್ಞರು ಹೇಳುವ ಪ್ರಕಾರ, ಇಂತಹ ಶ್ವಾಸಕೋಶಕ್ಕೆ ಸಂಬಂಧಪಟ್ಟ ರೋಗಗಳು ಉಲ್ಭಣಿ ಸಲು ಶ್ವಾಸನಾಳಗಳ ಒಳ ಭಾಗದಲ್ಲಿ ಅಂಟಿಕೊಂಡಿರುವ ಸ್ನಿಗ್ಧವಾದ ಕಫ ಕಾರಣ.
ಈ ಸಮಸ್ಯೆಯನ್ನು ಹೊಂದಿರುವವರು, ದಿನಾ ಒಂದೆರಡು ಏಲಕ್ಕಿಯನ್ನು ಜಗಿದು, ಅದರ ರಸವನ್ನು ನುಂಗುತ್ತಾ ಬರುವುದ ರಿಂದ, ಎದೆಯ ಭಾಗದಲ್ಲಿ ಗಟ್ಟಿಯಾಗಿರುವ ಕಫ ಕರಗಿ ಹೋಗು ವುದು ಮಾತ್ರವಲ್ಲದೆ, ದೇಹದಲ್ಲಿ ರಕ್ತಸಂಚಾರವು ಕೂಡ ಹೆಚಾ ಗುತ್ತದೆ. ತನ್ಮೂಲಕ ರೋಗ ಶೀಘ್ರ ಗುಣವಾಗಲು ನೆರವಾ ಗುತ್ತದೆ.
ಕ್ಯಾನ್ಸರ್ ರೋಗ ಬರದಂತೆ ತಡೆಯುತ್ತದೆ
ಏಲಕ್ಕಿಯಲ್ಲಿ ಕಂಡು ಬರುವ ಫೈಟೋ ಕೆಮಿಕಲ್ ಹಾಗೂ ಪ್ರಬಲ ಆಂಟಿ ಆಕ್ಸಿಡೆಂಟ್ ಅಂಶಗಳು, ಪ್ರಾಣಕ್ಕೆ ಅಪಾಯವನ್ನು ತಂದೊಡ್ಡುವ ಕಾಯಿಲೆಯಾದ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವನ್ನು ಪಡೆದಿದೆ.
ಬಾಯಿ ದುರ್ವಾಸನೆ ಸಮಸ್ಯೆ ಇರುವವರಿಗೆ
ಕೆಲವರಿಗೆ ಬಾಯಿಯ ದುರ್ವಾಸನೆ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಎಷ್ಟೇ ಬಾರಿ ಹಲ್ಲುಜ್ಜಿ ಬಾಯಿ ತೊಳೆದು ಕೊಂಡರು ಕೂಡ, ಬಾಯಿ ಯಿಂದ ಬರುವ ಅತಿಯಾದ ದುರ್ವಾಸನೆ ಯಿಂದಾಗಿ ಮುಜುಗರಕ್ಕೆ ಒಳಗಾಗುತ್ತಾರೆ.
ಇಂತಹ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಏಲಕ್ಕಿ ಪ್ರಮುಖ ಪಾತ್ರವಹಿಸುತ್ತದೆ. ಯಾಕೆಂದ್ರೆ ಏಲಕ್ಕಿಯಲ್ಲಿ ಕಂಡು ಬರುವ ಸೋಂಕು ನಿವಾರಕ ಗುಣಲಕ್ಷಣಗಳು, ದುರ್ವಾಸನೆಗೆ ಕಾರಣ ವಾಗಿರುವ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಿ, ಬಾಯಿ ಯಿಂದ ದುರ್ವಾಸನೆ ಬರದೇ ಇರುವ ಹಾಗೆ ನೋಡಿಕೊಳ್ಳು ವುದರ ಜೊತೆಗೆ ಹುಳುಕು ಹಲ್ಲು ಮತ್ತು ವಸಡುಗಳ ಸಮಸ್ಯೆ ಯನ್ನು ಕೂಡ ದೂರ ಮಾಡುತ್ತದೆ.
ಲಿವರ್ ಆರೋಗ್ಯಕ್ಕೆ ಒಳ್ಳೆಯದು
ಏಲಕ್ಕಿ ತನ್ನಲ್ಲಿ ಮೂತ್ರವರ್ಧಕ ಗುಣಲಕ್ಷಣಗಳನ್ನು ಒಳಗೊಂಡಿರುವ ಕಾರಣದಿಂದಾಗಿ,ದೇಹದ ಭಾಗದ ವಿಷಕಾರಿ ತ್ಯಾಜ್ಯಗಳನ್ನು ಹೊರ ಹಾಕುವ ಶಕ್ತಿ ಇದೆ. ಹೀಗಾಗಿ ದೇಹದ ಸ್ವಚ್ಛತಾ ಕಾರ್ಯದಲ್ಲಿ ಏಲಕ್ಕಿ ಗಳ ಪಾತ್ರ ಮರೆಯುವಂತಿಲ್ಲ. ಅಷ್ಟೇ ಅಲ್ಲದೆ ಹೊಟ್ಟೆಯ ಭಾಗದ ಅಲ್ಸರ್ ಸಮಸ್ಯೆಯನ್ನು ಕೂಡ ನಿವಾರಣೆ ಮಾಡುವ ಆರೋಗ್ಯಕಾರಿ ಗುಣ ಲಕ್ಷಣಗಳು ಕಂಡು ಬರುತ್ತದೆ.