ಬೆಂಗಳೂರು / ಚಿಕ್ಕಬಳ್ಳಾಪುರ : ಲೋಕಸಭಾ ಚುನಾವಣೆಯ ವೇಳೆ ಗಿಮಿಕ್ ಮಾಡುವುದನ್ನು ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಮೊದಲು ಬಿಡಬೇಕು, ಅತಿ ವಿನಯಯಂ ಧೂರ್ತ ಲಕ್ಷಣಂ ಎಂದು ಯಲಹಂಕದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್, ಡಾ. ಸುಧಾಕರ್ ಅವರಿಗೆ ಸಲಹೆಯನ್ನು ನೀಡಿದರು.
ಭಾನುವಾರ ಬೆಳಗ್ಗೆ ಐದು ಗಂಟೆಗೆ ಎದ್ದು ನಾನು ಮನೆಯಿಂದ ಹೊರಗೆ ಹೋಗಿದ್ದೆ, ಸುಧಾಕರ್ ಬರುವ ವಿಚಾರ ನನಗೆ ತಿಳಿದಿರಲಿಲ್ಲ. ಮೂರು ದಿನಗಳ ಹಿಂದೆ ನನ್ನನ್ನು ಭೇಟಿಯಾಗಬೇಕು ಎಂದು ಮೆಸೇಜ್ ಮಾಡಿದ್ದರು. ಆದರೆ ಭಾನುವಾರವೇ ಬರುತ್ತೇನೆ ಎಂದು ಹೇಳಿರಲಿಲ್ಲ ” ಎಂದು ತಿಳಿಸಿದರು.
ಎಸ್. ಆರ್. ವಿಶ್ವನಾಥ್ ಜೊತೆಗಿನ ಭಿನ್ನಮತ ಶಮನಕ್ಕೆ ಮುಂದಾದ ಸುಧಾಕರ್, ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ವಿಶ್ವನಾಥ್ ಮನೆಗೆ ಬೆಳಗ್ಗೆ ಹೋಗಿದ್ದರು. ಆದರೆ, ಬೆಳಗ್ಗೆನೇ ವಿಶ್ವನಾಥ್ ಮನೆಯಿಂದ ಹೊರಹೋಗಿದ್ದರು. ಯಾವುದೇ ಮಾತುಕತೆ ಸಾಧ್ಯವಾಗದೇ ಸುಧಾಕರ್ ವಾಪಸ್ ಹೋಗಿದ್ದರು.ಈ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿಶ್ವನಾಥ್, ” ಯಾರಾದರೂ ಮನೆಗೆ ಬಂದು ವಾಪಸ್ ಹೋದರೆ, ತಪ್ಪು ಸಂದೇಶ ಹೋಗುತ್ತದೆ. ಸುಧಾಕರ್ ಅವರು ಬರುವ ಮಾಹಿತಿ ನನಗಿರಲಿಲ್ಲ ಎಂದರು.
ಬಂದು ವಾಪಸ್ ಹೋಗಿ ಅನುಕಂಪ ಪಡೆಯುವ ಕೆಲಸವನ್ನು ಮಾಡುವುದನ್ನು ಬಿಡಲಿ, ಅನಾವಶ್ಯಕವಾಗಿ ಸುಧಾಕರ್, ಯಲಹಂಕದವರನ್ನು ಖಳನಾಯಕರನ್ನಾಗಿ ಮಾಡಿದರು ” .ಸುಧಾಕರ್ ಅವರು ಪದೇಪದೇ ಅಲೋಕ್ ಗೆ ಟಿಕೆಟ್ ಸಿಕ್ಕಿಲ್ಲ ಎಂದು ವಿಶ್ವನಾಥ್ ಬೇಸರದಲ್ಲಿದ್ದಾರೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಮೊದಲು ಆ ರೀತಿಯ ಹೇಳಿಕೆ ನೀಡುವುದನ್ನು ಅವರು ನಿಲ್ಲಿಸಬೇಕು. ಸುಧಾಕರ್ ಅವರು ಚಿಕ್ಕಬಳ್ಳಾಪುರದ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆಯಾಗಿದೆ, ಇನ್ಯಾಕೆ ನಾವು ಬೇಸರ ಮಾಡಿಕೊಳ್ಳೋಣ ಎಂದು ಎಸ್.ಆರ್.ವಿಶ್ವನಾಥ್ ಹೇಳಿದರು.